ರಚಿತಾ ರಾಮ್ ಅಸಿಸ್ಟೆಂಟ್ ಬಳಸುತ್ತಿದ್ದ ಕಾರು ಜಪ್ತಿ ಮಾಡಿದ ಪೊಲೀಸರು; ಕಾರಣ ಏನು?

ನಿಯಮ ಉಲ್ಲಂಘಿಸಿ ವೈಟ್​ ಬೋರ್ಡ್​ ಕಾರು ಬಳಸಲಾಗುತ್ತಿತ್ತು. ಖ್ಯಾತ ನಟಿ ರಚಿತಾ ರಾಮ್ ಅವರ ಅಸಿಸ್ಟೆಂಟ್ ಬಳಸುತ್ತಿದ್ದ ಇನ್ನೋವಾ ಕಾರನ್ನು ಸಂಚಾರ ಪೊಲೀಸರು ಜಪ್ತಿ ಮಾಡಿದ್ದಾರೆ. ಹೊಸ ಸಿನಿಮಾದ ಚಿತ್ರೀಕರಣದ ಸ್ಥಳದಿಂದ ಕಾರು ಜಪ್ತಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ರಚಿತಾ ರಾಮ್ ಅಸಿಸ್ಟೆಂಟ್ ಬಳಸುತ್ತಿದ್ದ ಕಾರು ಜಪ್ತಿ ಮಾಡಿದ ಪೊಲೀಸರು; ಕಾರಣ ಏನು?
ರಚಿತಾ ರಾಮ್ ಸಹಾಯಕನ ಕಾರು ಜಪ್ತಿ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಮದನ್​ ಕುಮಾರ್​

Updated on: Oct 09, 2024 | 6:24 PM

ನಟ ದುನಿಯಾ ವಿಜಯ್​, ನಟಿ ರಚಿತಾ ರಾಮ್ ಅಭಿನಯಿಸುತ್ತಿರುವ ಹೊಸ ಸಿನಿಮಾದ ತಂಡಕ್ಕೆ ಆರ್​ಟಿಓ ಶಾಕ್​ ನೀಡಿದ್ದಾರೆ. ತುಮಕೂರಿನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಶೂಟಿಂಗ್​ಗೆ ಕಲಾವಿದರನ್ನು ಕರೆತರಲು ವೈಟ್​ ಬೋರ್ಡ್​ ವಾಹನ ಬಳಕೆ ಮಾಡಿದ್ದರಿಂದ ಕ್ರಮ ಕೈಗೊಳ್ಳಲಾಗಿದೆ. ಚಿತ್ರತಂಡದಿಂದ ನಿಯಮ ಉಲ್ಲಂಘನೆ ಆಗಿದೆ ಎಂಬ ಆರೋಪ ಎದುರಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಸಾರಿಗೆಯೇತರ ವಾಹನ ಬಳಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೂರು ಬಂದಿದ್ದರಿಂದ ತುಮಕೂರು ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವಾಣಿಜ್ಯ ಉದ್ದೇಶಕ್ಕೆ ಬಳಸುವ ಎಲ್ಲೋ ಬೋರ್ಡ್ ಬದಲು ವೈಟ್ ಬೋರ್ಡ್ ಕಾರು ಬಳಕೆ ಮಾಡಲಾಗಿದೆ. ನಟ, ನಟಿಯರು, ಸಿಬ್ಬಂದಿಯನ್ನು ಚಿತ್ರೀಕರಣಕ್ಕೆ ಕರೆದುಕೊಂಡು ಬರಲು ಮತ್ತು ವಾಪಸ್​ ಕಳಿಸಲು ವೈಟ್ ಬೋರ್ಡ್ ಕಾರುಗಳ ಬಳಕೆ ಆಗಿದೆ. ಈ ಕಾರಣದಿಂದ ತುಮಕೂರು ಸಂಚಾರ ಪೊಲೀಸರು ಇನ್ನೋವಾ ಕಾರನ್ನು ಜಪ್ತಿ ಮಾಡಿದ್ದಾರೆ. ತುಮಕೂರಿನ ಕೈದಾಳದ ಶೂಟಿಂಗ್ ಸ್ಥಳದ ಬಳಿಯಿಂದ ಇನ್ನೋವಾ ಕಾರು ಜಫ್ತಿ ಮಾಡಲಾಗಿದೆ.

ಇದನ್ನೂ ಓದಿ: ಜೈಲಿನಲ್ಲಿರುವ ದರ್ಶನ್​ಗಾಗಿ 2 ಬ್ಯಾಗ್ ಹಿಡಿದು ಬಂದ ರಚಿತಾ ರಾಮ್​

ಆರ್​ಟಿಓ ಇನ್​ಸ್ಪೆಕ್ಟರ್ ಷರೀಫ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕರ್ನಾಟಕ ಟೂರಿಸ್ಟ್ ಡ್ರೈವರ್ಸ್ ಅಸೋಸಿಯೆಷನ್ ನೀಡಿದ್ದ ದೂರನ್ನ ಆಧರಿಸಿ ತುಮಕೂರು ಆರ್​ಟಿಓ ಕಾರ್ಯಾಚರಣೆ ಮಾಡಿದರು. ನಟಿ ರಚಿತಾ ರಾಮ್ ಅಸಿಸ್ಟೆಂಟ್ ಬಳಸುತ್ತಿದ್ದ ಕೆಎ 04 ಎಂಎಸ್ 7938 ಸಂಖ್ಯೆಯ ಇನ್ನೋವಾ ಕಾರು ಜಪ್ತಿ ಆಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಬಂದಿದ್ದ ಈ ಕಾರು ಮಂಜೇಶ್ ಎಂಬುವವರಿಗೆ ಸೇರಿದ್ದಾಗಿದೆ.

ಇದನ್ನೂ ಓದಿ: ‘ನನ್ನ ಇಡೀ ಫ್ಯಾಮಿಲಿ ಮೇಲೆ ದರ್ಶನ್ ಋಣ ಇದೆ’: ಜೈಲಿನ ಎದುರು ರಚಿತಾ ಭಾವುಕ ಮಾತು

ಸಂಚಾರ ಪೊಲೀಸರು ಜಪ್ತಿ ಮಾಡಿರುವ ಕಾರಿನಲ್ಲಿ ಚಲನಚಿತ್ರ ವಾಹನ ಚಾಲಕರ ಸಂಘದ ಬಿಲ್ ಪತ್ತೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಇನ್ನೋವಾ ಕಾರು ಓಡಾಡುತ್ತಿತ್ತು. ಇಂದು (ಅಕ್ಟೋಬರ್​ 9) ಖಚಿತ ಮಾಹಿತಿಯ ಮೇರೆಗೆ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿ ಕಾರನ್ನ ಜಪ್ತಿ ಮಾಡಿದ್ದಾರೆ. ಬಳಿಕ ಮುಂದಿನ ಕ್ರಮ ಜರುಗಿಸಲು ಆರ್​ಟಿಓ ಮುಂದಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.