Updated on: Oct 03, 2024 | 4:41 PM
ಕನ್ನಡ ಚಿತ್ರರಂಗದ ಜನಪ್ರಿಯ ನಟಿ ರಚಿತಾ ರಾಮ್, ತಾವು ನಟಿಸುತ್ತಿರುವ ‘ಕಲ್ಟ್’ ಚಿತ್ರತಂಡದ ಜೊತೆಗೆ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.
ಅಕ್ಟೋಬರ್ 3 ರಂದು ನಟಿ ರಚಿತಾ ರಾಮ್ ಹುಟ್ಟುಹಬ್ಬ. ಧಾರಾವಾಹಿಯಿಂದ ನಟನೆ ಆರಂಭಿಸಿದ ರಚಿತಾ ರಾಮ್, ಈಗ ಚಂದನವನದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.
ಕೆಲವು ದಿನಗಳ ಹಿಂದೆ ಹುಟ್ಟುಹಬ್ಬದ ಬಗ್ಗೆ ಪೋಸ್ಟ್ ಹಾಕಿದ್ದ ನಟಿ ರಚಿತಾ ರಾಮ್, ಈ ಹುಟ್ಟುಹಬ್ಬದಂದು ಶೂಟಿಂಗ್ ಇರುವ ಕಾರಣ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದಿದ್ದರು.
ಹುಟ್ಟುಹಬ್ಬದ ದಿನದಂದು ಸಿಗಲು ಸಾಧ್ಯವಿಲ್ಲವಾದ್ದರಿಂದ ಭಾನುವಾರ ಸಂಜೆ ಅಭಿಮಾನಿಗಳನ್ನು ಭೇಟಿ ಆಗುತ್ತೇನೆ ಎಂದು ರಚಿತಾ ರಾಮ್ ಹೇಳಿದ್ದರು.
ರಚಿತಾ ರಾಮ್ ಇದೀಗ ‘ಕಲ್ಟ್’ ಹೆಸರಿನ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ‘ಕಲ್ಟ್’ ಸಿನಿಮಾದಲ್ಲಿ ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಾಯಕ ನಟನಾಗಿ ನಟಿಸುತ್ತಿದ್ದಾರೆ.
ರಚಿತಾ ರಾಮ್ ಹುಟ್ಟುಹಬ್ಬವನ್ನು ‘ಕಲ್ಟ್’ ಚಿತ್ರತಂಡವೇ ಆಚರಣೆ ಮಾಡಿದೆ. ರಚಿತಾ ರಾಮ್, ನಾಯಕ ಝೈದ್ ಖಾನ್ ಸೇರಿದಂತೆ ಚಿತ್ರತಂಡಕ್ಕೆ ಕೇಕ್ ತಿನ್ನಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ರಚಿತಾ ರಾಮ್, ‘ಶಬರಿ ಸರ್ಚಿಂಗ್ ಫಾರ್ ರಾವಣ’, ‘ಸಂಜು ವೆಡ್ಸ್ ಗೀತಾ 2’ ಮತ್ತು ‘ಕಲ್ಟ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಕಲ್ಟ್’ ಸಿನಿಮಾ ಚಿತ್ರೀಕರಣ ಇತ್ತೀಚೆಗಷ್ಟೆ ಪ್ರಾರಂಭವಾಗಿದೆ.