ಪಾಕಿಸ್ತಾನ್ ತಂಡಕ್ಕೆ ಗುಡ್ ಬೈ: ಆಸ್ಟ್ರೇಲಿಯಾ ತಂಡದತ್ತ ಮುಖ ಮಾಡಿದ ಪಾಕ್ ಆಟಗಾರ..!

Usman Qadir: ಉಸ್ಮಾನ್ ಖಾದಿರ್ ಪಾಕಿಸ್ತಾನದ ಲೆಜೆಂಡ್ ಲೆಗ್ ಸ್ಪಿನ್ನರ್ ಅಬ್ದುಲ್ ಖಾದಿರ್ ಅವರ ಸುಪುತ್ರ. ಈ ಹಿಂದೆ ವೆಸ್ಟರ್ನ್ ಆಸ್ಟ್ರೇಲಿಯಾ ಮತ್ತು ಪರ್ತ್ ಸ್ಕಾರ್ಚರ್ಸ್ ತಂಡಗಳ ಪರ ಮೂರು ಸ್ವರೂಪಗಳಲ್ಲಿ ಕಣಕ್ಕಿಳಿದಿದ್ದ ಉಸ್ಮಾನ್ ಖಾದಿರ್ ಆಸೀಸ್ ಪೌರತ್ವ ಪಡೆಯುವ ಇಚ್ಛೆಯಲ್ಲಿದ್ದರು. ಆದರೆ 2020 ರಲ್ಲಿ ಈ ನಿರ್ಧಾರದಿಂದ ಹಿಂದೆ ಸರಿದು ಪಾಕಿಸ್ತಾನ್ ಪರ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದರು.

ಝಾಹಿರ್ ಯೂಸುಫ್
|

Updated on: Oct 03, 2024 | 3:09 PM

ಪಾಕಿಸ್ತಾನ್ ತಂಡದ ಸ್ಪಿನ್ ಬೌಲರ್ ಉಸ್ಮಾನ್ ಖಾದಿರ್ ಪಾಕ್ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ. ನಾನು ಪಾಕಿಸ್ತಾನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಈ ಪ್ರಯಾಣದುದ್ದಕ್ಕೂ ನನ್ನ ಜೊತೆಗಿದ್ದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಉಸ್ಮಾನ್ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

1 / 6
ಈ ಮೂಲಕ ಇನ್ಮುಂದೆ ಪಾಕಿಸ್ತಾನ್ ಪರ ಆಡುವುದಿಲ್ಲ ಎಂಬುದನ್ನು ಉಸ್ಮಾನ್ ಖಾದಿರ್ ಸ್ಪಷ್ಟಪಡಿಸಿದ್ದಾರೆ. ಇದಾಗ್ಯೂ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತನಾಗುತ್ತಿಲ್ಲ ಎಂದಿರುವ ಉಸ್ಮಾನ್, ಮುಂಬರುವ ದಿನಗಳಲ್ಲಿ ಆಸ್ಟ್ರೇಲಿಯಾ ಪರ ಆಡುವ ಇಚ್ಛೆಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

2 / 6
ಈ ಹಿಂದೆ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಉಸ್ಮಾನ್ ಖಾದಿರ್, ಇನ್ಮುಂದೆ ನಾನು ಪಾಕಿಸ್ತಾನ್ ಪರ ಆಡಲ್ಲ. ನನ್ನ ಮುಂದಿನ ಗುರಿ ಆಸ್ಟ್ರೇಲಿಯಾ ಪರ ಕಣಕ್ಕಿಳಿಯುವುದು. ಎರಡು ವರ್ಷಗಳಲ್ಲಿ ನನಗೆ ಆಸ್ಟ್ರೇಲಿಯಾ ಪೌರತ್ವ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದ್ದರು.

3 / 6
ಅಲ್ಲದೆ ಪಾಕಿಸ್ತಾನ್ ತಂಡದಲ್ಲಿ ತುಂಬಾ ರಾಜಕೀಯವಿದೆ. ಅಲ್ಲಿ ನನಗೆ ಅವಕಾಶ ಸಿಗುತ್ತಿರಲಿಲ್ಲ. ಹೀಗಾಗಿ ನಾನು ಪಾಕ್ ಕ್ರಿಕೆಟ್​ಗೆ ವಿದಾಯ ಹೇಳಲು ನಿರ್ಧರಿಸಿದ್ದೇನೆ ಎಂದು ಉಸ್ಮಾನ್ ಹೇಳಿದ್ದರು. ಅದರಂತೆ ಇದೀಗ 31ನೇ ವಯಸ್ಸಿನಲ್ಲಿ ಉಸ್ಮಾನ್ ಖಾದಿರ್ ಪಾಕಿಸ್ತಾನ್ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ.

4 / 6
ಪಾಕ್ ಮೂಲದ ಉಸ್ಮಾನ್ ಖಾದಿರ್ ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಫಸ್ಟ್ ಕ್ಲಾಸ್ ಕ್ರಿಕೆಟ್ ಆಡಿದ್ದರು. ಆದರೆ 2020 ರಲ್ಲಿ ಪಾಕಿಸ್ತಾನ್ ಪರ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದರು. 25 ಟಿ20 ಪಂದ್ಯಗಳಲ್ಲಿ ಪಾಕ್ ತಂಡವನ್ನು ಪ್ರತಿನಿಧಿಸಿದ್ದ ಉಸ್ಮಾನ್ 31 ವಿಕೆಟ್​​ಗಳನ್ನು ಸಹ ಕಬಳಿಸಿದ್ದಾರೆ. ಇನ್ನು ಒಂದು ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ.

5 / 6
2023 ರಲ್ಲಿ ಕೊನೆಯ ಬಾರಿ ಪಾಕಿಸ್ತಾನ್ ತಂಡದಲ್ಲಿ ಕಾಣಿಸಿಕೊಂಡಿದ್ದ ಉಸ್ಮಾನ್ ಖಾದಿರ್ ಇದೀಗ ದಿಢೀರ್ ನಿವೃತ್ತಿ ಘೋಷಿಸಿ ಮತ್ತೆ ಆಸ್ಟ್ರೇಲಿಯಾದತ್ತ ಮುಖ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಅದರಂತೆ ಇನ್ಮುಂದೆ ಪಾಕ್ ಆಟಗಾರ ಆಸ್ಟ್ರೇಲಿಯಾದಲ್ಲಿ ಫಸ್ಟ್ ಕ್ಲಾಸ್ ಕ್ರಿಕೆಟ್ ಆಡುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಆಸೀಸ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.

6 / 6
Follow us
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು

ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?

Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು

ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ

ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ

ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು

ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ