‘ನನ್ನ ಇಡೀ ಫ್ಯಾಮಿಲಿ ಮೇಲೆ ದರ್ಶನ್ ಋಣ ಇದೆ’: ಜೈಲಿನ ಎದುರು ರಚಿತಾ ಭಾವುಕ ಮಾತು
ಇಂದು ರಚಿತಾ ರಾಮ್ ಅವರು ಬಣ್ಣದ ಲೋಕದಲ್ಲಿ ಯಶಸ್ಸು ಗಳಿಸಿದ್ದಾರೆ. ಅದಕ್ಕೆಲ್ಲ ಮೂಲ ಕಾರಣ ಆಗಿದ್ದೇ ದರ್ಶನ್ ನೀಡಿದ್ದ ಅವಕಾಶ. ಅದನ್ನು ಈಗ ರಚಿತಾ ನೆನಪಿಸಿಕೊಂಡಿದ್ದಾರೆ. ಕೊಲೆ ಆರೋಪದಲ್ಲಿ ಜೈಲುಪಾಲಾಗಿರುವ ದರ್ಶನ್ ಅವರನ್ನು ರಚಿತಾ ರಾಮ್ ಭೇಟಿ ಮಾಡಿ ಬಂದಿದ್ದಾರೆ. ಬಳಿಕ ಅವರು ಮಾಧ್ಯಮಗಳಿಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ.
ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರದಲ್ಲಿ ಭೇಟಿಯಾಗಿ ಬಂದಿರುವ ರಚಿತಾ ರಾಮ್ ಅವರು ಎಮೋಷನಲ್ ಆಗಿ ಮಾತನಾಡಿದ್ದಾರೆ. ಯಾಕೆ ಭಾವುಕರಾಗಿದ್ದೀರಿ ಎಂದು ಕೇಳಿದ್ದಕ್ಕೆ ತಮ್ಮ ಆರಂಭದ ದಿನಗಳನ್ನು ರಚಿತಾ ಅವರು ನೆನಪಿಸಿಕೊಂಡಿದ್ದಾರೆ. ‘ಎಮೋಷನಲ್ ಆಗದೇ ಇನ್ನೇನು ಮಾಡಲಿ? ನಾನೊಂದು ಮಾತು ಹೇಳುತ್ತೇನೆ. ನಾನು ದರ್ಶನ್ ಅವರ ಬ್ಯಾನರ್ನಿಂದ ಬಂದವಳು. ನನ್ನನ್ನು ಪರಿಚಯಿಸಿದ್ದೇ ದರ್ಶನ್ ಸರ್. ನನಗೆ ಇಂದು ಏನೇ ಹೆಸರು ಇದ್ದರೂ ದರ್ಶನ್ ಅವರಿಂದ. ಅಂದು ಅವರು ಒಂದು ಮಾತು ನೋ ಎಂದಿದ್ದರೆ ಬಿಂದ್ಯಾ ರಾಮ್ ಆಗಿದ್ದ ನಾನು ರಚಿತಾ ರಾಮ್ ಆಗೋಕೆ ಆಗುತ್ತಿರಲಿಲ್ಲ. ಅವರ ಋಣ ನನ್ನ ಮೇಲೆ ಹಾಗೂ ನನ್ನ ಇಡೀ ಕುಟುಂಬದ ಮೇಲಿದೆ. ಜೈಲಿನಲ್ಲಿ ಅವರೇ ನನಗೆ ಧೈರ್ಯ ತುಂಬಿದರು. ಆದಷ್ಟು ಬೇಗ ನಮಗೆ ಒಳ್ಳೆಯ ಸುದ್ದಿ ಸಿಗಲಿ’ ಎಂದು ರಚಿತಾ ರಾಮ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos