Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ವತಿ ಸಿದ್ದರಾಮಯ್ಯ ಅರ್ಜಿಯಲ್ಲಿ ವ್ಹೈಟ್ನರ್ ಬಳಸಿ ಅಳಸಿರುವ ಪದಗಳನ್ನು ವಿವರಿಸಿದ ಎಂ ಲಕ್ಷ್ಮಣ್

ಪಾರ್ವತಿ ಸಿದ್ದರಾಮಯ್ಯ ಅರ್ಜಿಯಲ್ಲಿ ವ್ಹೈಟ್ನರ್ ಬಳಸಿ ಅಳಸಿರುವ ಪದಗಳನ್ನು ವಿವರಿಸಿದ ಎಂ ಲಕ್ಷ್ಮಣ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 22, 2024 | 5:02 PM

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಿಜಾಂಶವನ್ನು ಅರಿಯದೆ ಪಾದಯಾತ್ರೆಯ ಮೂಲಕ ಜನರಲ್ಲಿ ತಪ್ಪು ಕಲ್ಪನೆ ಮೂಡುವಂತೆ ಮಾಡಿರುವುದು ಖಂಡನೀಯ, ಸುಳ್ಳುಗಳನ್ನು ಮುಂದಿಟ್ಟುಕೊಂಡು ಸರ್ಕಾರ ನಡೆಯಲು ಬಿಡದಿರುವ ಇವರಿಗೆ ನಾಚಿಕೆಯಾಗಬೇಕು ಎಂದು ಲಕ್ಷ್ಮಣ್ ಹೇಳಿದರು.

ಮೈಸೂರು: ನಗರದಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು 2014 ರಲ್ಲಿ ಮುಡಾಗೆ ಬರೆದಿರುವ ಪತ್ರದಲ್ಲಿ ವ್ಹೈಟ್ನರ್ ಬಳಸಿ ಅಳಸಿರುವ ಕೆಲ ಪದಗಳನ್ನು ಬಹಿರಂಗಗೊಳಿಸಿದರು. ಪತ್ರದ ನಕಲು ಪ್ರತಿಗಳನ್ನು ತೋರಿಸುತ್ತ ಮಾತಾಡಿದ ಅವರು ವ್ಹೈಟ್ನರ್ ನಿಂದ ಅಳಸಿದ ಪದಗಳ ಮೇಲೆ ಲೈಟ್ ಹಾಕಿ ಪೇಪರ್ ಹಿಂದಿನ ಭಾಗದಿಂದ ನೋಡಿದ್ರೆ ಅಳಸಿರುವ ಶಬ್ದಗಳು ಸ್ಪಷ್ಟವಾಗಿ ಕಾಣುತ್ತವೆ ಎಂದು ಲಕ್ಷ್ಮಣ್ ಹೇಳಿದರು. ಅಸಲಿಗೆ ಪಾರ್ವತಿ ಸಿದ್ದರಾಮಯ್ಯ ಅವರು, ಮೊದಲು ದೇವನೂರು ಮೂರನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಪ್ರಾಧಿಕಾರ ರಚಿಸಿದ ಸಮಾನಾಂತರ ಬಡಾವಣೆಯಲ್ಲಿ ನಿವೇಶನಗಳನ್ನು ನೀಡಬೇಕೆಂದು ಕೋರಿದ್ದಾರೆ ಎಂದು ಲಕ್ಷ್ಮಣ್ ಹೇಳಿದರು.

ಪ್ರಾಯಶಃ ಅವರು ಮುಡಾ ಕಚೇರಿಗೆ ಹೋದ ಮೇಲೆ ದೇವನೂರು ಮೂರನೇ ಹಂತದ ಬಡಾವಣೆಯಲ್ಲಿ ಸೈಟುಗಳಲ್ಲಿ ಲಭ್ಯ ಇಲ್ಲ ಅನ್ನೋದು ಗೊತ್ತಾಗಿ ಅದನ್ನು ವ್ಬೈಟ್ನರ್ ಬಳಸಿ ಅಳಸಿ ಸಮಾನಾಂತರ ಬಡಾವಣೆ ಅಂತ ಬರೆದಿದ್ದಾರೆ ಎಂದು ಲಕ್ಷ್ಮಣ್ ಹೇಳಿದರು. ಅದರೆ, ಅಳಸಿರುವ ಪದಗಳನ್ನು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡು ರೋಲ್ ಕಾಲ್ ಮಾಡುವ ಜನ ಮತ್ತು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಮ್ಮ ಮನಸ್ಸಿಗೆ ಬಂದಂತೆ ಅರ್ಥೈಸಿಕೊಂಡು ಇಡೀ ಪ್ರಕರಣವನ್ನೇ ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಲಕ್ಷ್ಮಣ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ಸಿಎಂ ಪತ್ನಿ ಬರೆದ ಪತ್ರ ತಿರುಚಿದ್ರಾ ಅಧಿಕಾರಿಗಳು? ಅನುಮಾನಕ್ಕೆ ಇದೆ ಕಾರಣ