ಮೈಸೂರಿನಲ್ಲಿಂದು ಮಕ್ಕಳ ಮೇಲೆ 2ನೇ ಹಂತದ ಲಸಿಕೆ ಪ್ರಯೋಗ

ಮೊದಲ ಹಂತದಲ್ಲಿ 12 ರಿಂದ 18 ವರ್ಷದ ಮಕ್ಕಳ ಲಸಿಕೆ ಪ್ರಯೋಗ ನಡೆದಿತ್ತು. ಲಸಿಕೆ ಪಡೆದ ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ. ಲಸಿಕೆ ಪ್ರಯೋಗಕ್ಕೂ ಮುನ್ನ ಮಕ್ಕಳಿಗೆ ರಕ್ತ ಪರೀಕ್ಷೆ, ಆ್ಯಂಟಿಜೆನ್ ಪರೀಕ್ಷೆ ಮಾಡಲಾಗುವುದು. ನೆಗೆಟಿವ್ ವರದಿ ಬಂದ 30 ಮಕ್ಕಳ ಮೇಲೆ ಪ್ರಯೋಗಿಕ ಲಸಿಕೆ ಪ್ರಯೋಗ ಮಾಡಲಾಗುತ್ತದೆ.

ಮೈಸೂರಿನಲ್ಲಿಂದು ಮಕ್ಕಳ ಮೇಲೆ 2ನೇ ಹಂತದ ಲಸಿಕೆ ಪ್ರಯೋಗ
ಕೊರೊನಾ ಲಸಿಕೆ (ಪ್ರಾತಿನಿಧಿಕ ಚಿತ್ರ)
Updated By: sandhya thejappa

Updated on: Jun 16, 2021 | 9:27 AM

ಮೈಸೂರು: ರಾಜ್ಯದಲ್ಲಿ ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಕೊರೊನಾ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಅದರಲ್ಲೂ ಮೂರನೇ ಅಲೆಯಲ್ಲಿ ಕೊರೊನಾ ಮಕ್ಕಳಿಗೆ ಹರಡುತ್ತದೆ ಎಂದು ಈಗಾಗಲೇ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಕೊರೊನಾ ಮೂರನೇ ಅಲೆಯ ವಿರುದ್ಧ ಹೋರಾಡಲು ಸಿದ್ಧತೆಗಳು ನಡೆಯುತ್ತಿದ್ದು, ಜಿಲ್ಲೆಯ ಚೆಲುವಾಂಬ ಆಸ್ಪತ್ರೆಯಲ್ಲಿ ಇಂದು (ಜೂನ್ 16) ಮಕ್ಕಳ ಮೇಲೆ ಎರಡನೇ ಹಂತದ ಲಸಿಕೆ ಪ್ರಯೋಗ ನಡೆಯಲಿದೆ. 6 ರಿಂದ 12 ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಯುತ್ತದೆ.

ಮೊದಲ ಹಂತದಲ್ಲಿ 12 ರಿಂದ 18 ವರ್ಷದ ಮಕ್ಕಳ ಲಸಿಕೆ ಪ್ರಯೋಗ ನಡೆದಿತ್ತು. ಲಸಿಕೆ ಪಡೆದ ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ. ಲಸಿಕೆ ಪ್ರಯೋಗಕ್ಕೂ ಮುನ್ನ ಮಕ್ಕಳಿಗೆ ರಕ್ತ ಪರೀಕ್ಷೆ, ಆ್ಯಂಟಿಜೆನ್ ಪರೀಕ್ಷೆ ಮಾಡಲಾಗುವುದು. ನೆಗೆಟಿವ್ ವರದಿ ಬಂದ 30 ಮಕ್ಕಳ ಮೇಲೆ ಪ್ರಯೋಗಿಕ ಲಸಿಕೆ ಪ್ರಯೋಗ ಮಾಡಲಾಗುತ್ತದೆ. ಲಸಿಕೆ ನೀಡಿದ ಬಳಿಕ 2 ಗಂಟೆ ಮಕ್ಕಳ ಮೇಲೆ ನಿಗಾ ವಹಿಸಲಾಗುತ್ತದೆ. ಯಾವುದೇ ಸಮಸ್ಯೆಯಾಗದಿದ್ದರೆ ಮನೆಗೆ ವಾಪಸ್ ಕಳುಹಿಸಲಾಗುವುದು. ಬಳಿಕ ಒಂದು ವಾರ ಪ್ರತಿನಿತ್ಯ ಕರೆ ಮಾಡಿ ವಿಚಾರಣೆ ಮಾಡಲಾಗುತ್ತದೆ. ಮಕ್ಕಳ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಮಕ್ಕಳ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಜಾಗೃತಿ ಮೂಡಿಸಿದ ತಹಶೀಲ್ದಾರ್
ಲಸಿಕೆ ಹಾಕಿಸಿಕೊಳ್ಳುವಂತೆ ಜಿಲ್ಲೆಯ ನಂಜನಗೂಡು ತಾಲೂಕಿನ ಚಿಲಕಹಳ್ಳಿ ಹಾಡಿಗೆ ತೆರಳಿ ತಹಶೀಲ್ದಾರ್ ಜಾಗೃತಿ ಮೂಡಿಸುತ್ತಿದ್ದಾರೆ. ನಾವೆಲ್ಲರೂ ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದೇವೆ. ನಮಗೆ ಯಾವುದೇ ಸಮಸ್ಯೆ ಆಗಿಲ್ಲ, ನೀವೂ ಹಾಕಿಸಿಕೊಳ್ಳಿ. ಲಸಿಕೆ ಪಡೆಯುವುದಕ್ಕೆ ನಾವು ಸೂಕ್ತ ವ್ಯವಸ್ಥೆ ಮಾಡುತ್ತೇವೆ. ನಂಜನಗೂಡಿಗೆ ಬಂದು ಲಸಿಕೆ ಹಾಕಿಸಿಕೊಳ್ಳಿ ಎಂದು ನಂಜನಗೂಡು ತಹಶೀಲ್ದಾರ್ ಮೋಹನಕುಮಾರಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ

ಮೈಸೂರಿನಲ್ಲಿ ಮಕ್ಕಳ ಮೇಲೆ ಕೊವಿಡ್ ಲಸಿಕೆ ಪ್ರಯೋಗ ಯಶಸ್ವಿಯಾಗುವ ಭರವಸೆ

ಜನರ ಮನೆ ಬಾಗಿಲಿಗೆ ಬಂದು ಲಸಿಕೆ ಹಾಕಲು ನಿರ್ಧಾರ; ಕಲಬುರಗಿ ಜಿಲ್ಲಾಡಳಿತದ ಯೋಜನೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಾಥ್

(There will be a 2nd phase vaccine trial on children in Mysore)