ಬಿಜೆಪಿ ಶಾಸಕರ ಪಾಸ್​ ಸ್ಟಿಕರ್​ ಇದ್ದ ಕಾರಿನ ಗಾಜು ಒಡೆದು.. 4 ಲಕ್ಷ ಕದ್ದೊಯ್ದ ಖದೀಮರು

ಖದೀಮರು ಕಾರಿನ ಗಾಜು ಒಡೆದು 4 ಲಕ್ಷ ನಗದು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದ ಟಾಕೀಸ್​ ಬಳಿ ವರದಿಯಾಗಿದೆ. ಅಂದ ಹಾಗೆ, ಕಾರಿನ ಮೇಲೆ ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಅವರ ಪಾಸ್ ಸ್ಟಿಕರ್​ನ ಅಂಟಿಸಲಾಗಿದೆ.

ಬಿಜೆಪಿ ಶಾಸಕರ ಪಾಸ್​ ಸ್ಟಿಕರ್​ ಇದ್ದ ಕಾರಿನ ಗಾಜು ಒಡೆದು.. 4 ಲಕ್ಷ ಕದ್ದೊಯ್ದ ಖದೀಮರು
ಬಿಜೆಪಿ ಶಾಸಕರ ಪಾಸ್​ ಸ್ಟಿಕರ್​ ಇದ್ದ ಕಾರಿನ ಗಾಜು ಒಡೆದು 4 ಲಕ್ಷ ಕದ್ದೊಯ್ದ ಖದೀಮರು
Follow us
KUSHAL V
|

Updated on:Mar 15, 2021 | 10:15 PM

ರಾಯಚೂರು: ಖದೀಮರು ಕಾರಿನ ಗಾಜು ಒಡೆದು 4 ಲಕ್ಷ ನಗದು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದ ಟಾಕೀಸ್​ ಬಳಿ ವರದಿಯಾಗಿದೆ. ಅಂದ ಹಾಗೆ, ಕಾರಿನ ಮೇಲೆ ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಅವರ ಪಾಸ್ ಸ್ಟಿಕರ್​ನ ಅಂಟಿಸಲಾಗಿದೆ. ಆದರೆ, ಕಾರು ಶಾಸಕರದ್ದೋ ಅಥವಾ ಅವರ ಬೆಂಬಲಿಗರದ್ದೋ ಎಂದು ಖಚಿತವಾಗಿಲ್ಲ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಣ್ಣೆನಗರಿಯಲ್ಲಿ ಖಾಕಿಯಿಂದ ಭರ್ಜರಿ ಬೇಟೆ ಇತ್ತ, ಗ್ರಾಮದ ಹೊರವಲಯದ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿ ವರದಿಯಾಗಿದೆ. ದಾಳಿಯಲ್ಲಿ ಐವರು ಜೂಜುಕೋರರನ್ನು ಬಂಧಿಸಲಾಗಿದೆ. ಜೊತೆಗೆ, 21 ಸಾವಿರ ನಗದನ್ನ ಸಹ ವಶಕ್ಕೆ ಪಡೆಯಲಾಗಿದೆ. ಚನ್ನಗಿರಿ ಡಿವೈಎಸ್​ಪಿ ಬಿ.ಎಸ್.ಬಸವರಾಜು ನೇತೃತ್ವದಲ್ಲಿ ದಾಳಿ ನಡೆದಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಲ್ಲದೆ, ಹೊನ್ನಾಳಿ, ನ್ಯಾಮತಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸವಳಂಗ ಗ್ರಾಮದ ಬಳಿ ಮೂವರು ಅಡಿಕೆ ಕಳ್ಳರನ್ನು ಅರೆಸ್ಟ್​ ಮಾಡಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಅಬ್ದುಲ್ ಮಜೀದ್, ಮೊಹ್ಮದ್ ತೌಸೀಫ್ ಮತ್ತು ನಾಗಾರ್ಜುನ್​ ಬಂಧಿತ ಆರೋಪಿಗಳು.

DVG JUJU ARREST 1

ಅಡಿಕೆ ಕಳ್ಳರನ್ನು ಅರೆಸ್ಟ್​ ಮಾಡಿದ ಪೊಲೀಸರು

ಬಂಧಿತರಿಂದ 5 ಲಕ್ಷ ರೂಪಾಯಿ ಮೌಲ್ಯದ ಅಡಿಕೆ ಹಾಗೂ ಓಮ್ನಿ ವ್ಯಾನ್​ನ ಜಪ್ತಿ ಮಾಡಲಾಗಿದೆ. ಖದೀಮರು ಬಸನಗೌಡ ಎಂಬುವವರ ತೋಟದ ಮನೆಯಲ್ಲಿ ದರೋಡೆ ಮಾಡಿದ್ದರು.

CKM BSNL FIRE 3

ಚಿಕ್ಕಮಗಳೂರಿನ BSNL ಕೇಂದ್ರ ಕಚೇರಿಯಲ್ಲಿ ಬೆಂಕಿ

ಚಿಕ್ಕಮಗಳೂರಿನ BSNL ಕೇಂದ್ರ ಕಚೇರಿಯಲ್ಲಿ ಬೆಂಕಿ ಚಿಕ್ಕಮಗಳೂರಿನ BSNL ಕೇಂದ್ರ ಕಚೇರಿಯಲ್ಲಿ ಬೆಂಕಿ ದುರಂತ ನಡೆದಿದೆ. ಬೆಲ್ಟ್ ರಸ್ತೆಯಲ್ಲಿರುವ ಬಿಎಸ್ಎನ್ಎಲ್ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ಸಿಎಂ BSY ನೈಟ್​ ಕರ್ಫ್ಯೂ, ಲಾಕ್​ಡೌನ್, ಸೀಲ್​ಡೌನ್​​ ಘೋಷಿಸದೆ ಇರಲು ಇದಾ ಅಸಲಿ ಕಾರಣ?

Published On - 10:10 pm, Mon, 15 March 21