ಬೆಳಗಾವಿ: ಮಾಸ್ಕ್ ಧರಿಸದೆ ಓಡಾಟ ಮತ್ತು ರಸ್ತೆಯಲ್ಲಿ ಉಗುಳಿದ ಹಿನ್ನೆಲೆಯಲ್ಲಿ ದಂಡ ವಿಧಿಸಿದಕ್ಕೆ ಕಿರಿಕ್ ಉಂಟಾಗಿದ್ದು ಮುಗಳಖೋಡ ಪುರಸಭೆಯ ಮೂವರು ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪುರಸಭೆಯ ಸಿಬ್ಬಂದಿ ಮಾಸ್ಕ್ ಹಾಕದವರಿಗೆ, ಕೊರೊನಾ ಮಾರ್ಗಸೂಚಿ ಪಾಲಿಸದವರಿಗೆ ದಂಡ ವಿಧಿಸುತ್ತಿದ್ದರು. ನಿನ್ನೆ ಸಂಜೆ ಮುಗಳಖೋಡ ಪಟ್ಟಣದ ಮುಖ್ಯ ದ್ವಾರದಲ್ಲಿ ಮೂರು ಜನ ಪುರಸಭೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೊವಿಡ್ ನಿಯಮ ಉಲ್ಲಂಘನೆ ಮಾಡುತ್ತಿದ್ದವರಿಗೆ ದಂಡ ವಿಧಿಸುತ್ತಿದ್ದರು. ಈ ವೇಳೆ ಮೂವರು ಮಾಸ್ಕ್ ಧರಿಸದೆ ಓಡಾಟ, ರಸ್ತೆಯಲ್ಲಿ ಉಗುಳಿದ್ದನ್ನ ಗಮನಿಸಿ ಮೂವರಿಗೆ ದಂಡ ವಿಧಿಸಿ ಕಟ್ಟುವಂತೆ ಸೂಚಿಸಿದ್ದಾರೆ.
ಬಳಿಕ ದಂಡ ಕಟ್ಟುವುದಿಲ್ಲ ಅಂತಾ ಕಿರಿಕ್ ಮಾಡಿ ದೊಣ್ಣೆಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂಧನೆ ಮಾಡಿದ್ದಾರೆ. ಪುರಸಭೆ ಬಿಲ್ ಕಲೆಕ್ಟರ್ ಮಹೇಶ್ ಭಜಂತ್ರಿ ಸೇರಿ ಮೂವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಮಹೇಶ್ ಭಜಂತ್ರಿಗೆ ಗಾಯಗಳಾಗಿದ್ದು ಗಾಯಾಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆ ಮಾಡಿದ ಮೂವರ ವಿರುದ್ಧ ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕೇಸ್ ಅನ್ವಯ ಆರೋಪಿಗಳಾದ ರಮೇಶ್ ಬಾಗಿ, ಬೀರಪ್ಪ ಬಾಗಿ, ಮುತ್ತಪ್ಪ ಯತ್ತಿನಮನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಲಾಪರಾಧಿಯಿಂದ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ
Published On - 7:52 am, Fri, 23 April 21