ಚಾಲಕನ ನಿಯಂತ್ರಣ ತಪ್ಪಿ ಟಿಟಿ ಪಲ್ಟಿ.. ಮೂವರ ಸಾವು, 11ಮಂದಿಗೆ ಗಾಯ
ಬೆಳಗಿನ ಜಾವ 4.30ರ ವೇಳೆಗೆ ತಮಿಳುನಾಡಿನ ತಿರುಪುರ್ ನಿಂದ ಮೈಸೂರಿಗೆ ಬರುತ್ತಿದ್ದ ಟಿಟಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದಾಚೆಗೆ ಉರುಳಿದೆ. ಈ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದು, 11 ಮಂದಿಗೆ ಗಂಭೀರ ಗಾಯಾಗಳಾಗಿವೆ.

ಸುವರ್ಣಾವತಿ ಡ್ಯಾಂ ಹತ್ತಿರ ಗುಡಿ ಬೋರೆ ಎಂಬಲ್ಲಿ ಪಲ್ಟಿಯಾಗಿರುವ ಟಿಟಿ
ಚಾಮರಾಜನಗರ: ಚಾಲಕನ ನಿಯಂತ್ರಣ ತಪ್ಪಿ ಟಿಟಿ ಪಲ್ಟಿಯಾಗಿದ್ದು ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ಸುವರ್ಣಾವತಿ ಡ್ಯಾಂ ಬಳಿ ನಡೆದಿದೆ. ತಮಿಳುನಾಡಿನಿಂದ ಮೈಸೂರಿಗೆ ವಾಪಸಾಗುತ್ತಿದ್ದ ಟಿಟಿ ಪಲ್ಟಿಯಾಗಿದೆ.
ಚಾಮರಾಜನಗರ ತಾಲೂಕಿನ ಸುವರ್ಣಾವತಿ ಡ್ಯಾಂ ಹತ್ತಿರ ಗುಡಿ ಬೋರೆ ಎಂಬಲ್ಲಿ ಇಂದು ಬೆಳಗಿನ ಜಾವ 4.30ರ ವೇಳೆಗೆ ತಮಿಳುನಾಡಿನ ತಿರುಪುರ್ ನಿಂದ ಮೈಸೂರಿಗೆ ಬರುತ್ತಿದ್ದ ಟಿಟಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದಾಚೆಗೆ ಉರುಳಿದೆ. ಈ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದು, 11 ಮಂದಿಗೆ ಗಂಭೀರ ಗಾಯಾಗಳಾಗಿವೆ. ಗಾಯಾಳುಗಳನ್ನ ಚಾಮರಾಜನಗರದ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.


ಸಮನ್ಸ್ ಜಾರಿ ಮಾಡಲು ಬಂದಿದ್ದ ವೇಳೆ ಮಾದಪ್ಪ ಬೆಟ್ಟದಲ್ಲಿ ಅಪಘಾತ: ಪೊಲೀಸ್ ಕಾನ್ಸ್ಟೇಬಲ್ ಸಾವು




