ಅಂಬಾರಿ, ಪಲ್ಲಕ್ಕಿ ಉತ್ಸವಕ್ಕಾಗಿ ಕೆಎಸ್​ಆರ್​ಟಿಸಿಗೆ ಅತ್ಯುತ್ತಮ ಸಾರ್ವಜನಿಕ ಸಂಸ್ಥೆ ಪ್ರಶಸ್ತಿ

| Updated By: ವಿವೇಕ ಬಿರಾದಾರ

Updated on: Nov 24, 2023 | 2:12 PM

ಕೆಎಸ್​ಆರ್​ಟಿಸಿಗೆ ಪ್ರತಿಷ್ಠಿತ ಮೂರು ಅಂತರ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ನಿಗಮವು ಜಾರಿ ಮಾಡಿದ ವಿನೂತನ ವಾಹನಗಳ ಪುನಶ್ಚೇತನ ಯೋಜನೆ ಉಪಕ್ರಮ ಹಾಗೂ ಅಂಬಾರಿ ಉತ್ಸವ, ಪಲ್ಲಕ್ಕಿ ಮತ್ತು ವಿದ್ಯುತ್ ವಾಹನಗಳ ಬ್ರಾಂಡಿಂಗ್ ಉಪಕ್ರಮಕ್ಕಾಗಿ ಎರಡು ಪ್ರಶಸ್ತಿ ಲಭಿಸಿವೆ.

ಅಂಬಾರಿ, ಪಲ್ಲಕ್ಕಿ ಉತ್ಸವಕ್ಕಾಗಿ ಕೆಎಸ್​ಆರ್​ಟಿಸಿಗೆ ಅತ್ಯುತ್ತಮ ಸಾರ್ವಜನಿಕ ಸಂಸ್ಥೆ ಪ್ರಶಸ್ತಿ
ಕೆಎಸ್​ಆರ್​ಟಿಸಿಗೆ ಪ್ರಶಸ್ತಿ ಪ್ರಧಾನ
Follow us on

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಗೆ ನ್ಯಾಷನಲ್​ ಮೀಡಿಯಾ ಕಾನ್ಕ್ಲೇವ್ (National Media Conclave)ನ ಎರಡು ಪ್ರಶಸ್ತಿ ಹಾಗೂ ವರ್ಲ್ಡ್​​​ ಮಾರ್ಕೆಟಿಂಗ್​ ಕಾಂಗ್ರೆಸ್​​ (World Marketing Congress)ನ ಗ್ಲೋಬಲ್​ ಮಾರ್ಕೆಟಿಂಗ್​ ಎಕ್ಸಲೆನ್ಸ್​ (Global Marketing Excellence) ಒಂದು ಪ್ರಶಸ್ತಿ ಲಭಿಸಿದೆ. ಗುರುವಾರ (ನ.23) ರಂದು ಭುವನೇಶ್ವರ್​ನ ಕೆ.ಐ.ಐ.ಟಿ ವಿಶ್ವವಿದ್ಯಾನಿಲಯ ಸಭಾಂಗಣದಲ್ಲಿ ನಡೆದ ನ್ಯಾಷನಲ್​ ಮೀಡಿಯಾ ಕಾನ್ಕ್ಲೇವ್ ಅವಾರ್ಡ್​​​ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ನ್ಯಾಷನಲ್​ ಮೀಡಿಯಾ ಕಾನ್ಕ್ಲೇವ್​ ಆಯೋಜಿಸಿದ್ದ ಏಳನೇ ನ್ಯಾಷನಲ್​ ಮೀಡಿಯಾ ಕಾನ್ಕ್ಲೇವ್ ಅವಾರ್ಡ್, ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾಹಿತಿ ಸಾರ್ವಜನಿಕ ಸಂಪರ್ಕ, ಪಂಚಾಯತ್ ರಾಜ್, ಕುಡಿಯುವ ನೀರು ಹಾಗೂ ಅರಣ್ಯ ಮತ್ತು ಪರಿಸರ ಸಚಿವ ಪ್ರದೀಪ್ ಕುಮಾರ್ ಅಮತ್ ಹಾಗೂ ಉನ್ನತ ಶಿಕ್ಷಣ, ಸಹಕಾರ ಸಚಿವ ಅತನು ಸವ್ಯಸಾಚಿ ನಾಯಕ್ ಅವರು ನಿಗಮವು ಜಾರಿ ಮಾಡಿದ ವಿನೂತನ ವಾಹನಗಳ ಪುನಶ್ಚೇತನ ಯೋಜನೆ ಉಪಕ್ರಮ ಹಾಗೂ ಅಂಬಾರಿ ಉತ್ಸವ, ಪಲ್ಲಕ್ಕಿ ಮತ್ತು ವಿದ್ಯುತ್ ವಾಹನಗಳ ಬ್ರಾಂಡಿಂಗ್ ಉಪಕ್ರಮಕ್ಕಾಗಿ Best Communication Campaign by Public Sector Organisation & Best Public Sector Organisation Implementing PR ಪ್ರಶಸ್ತಿಗಳನ್ನು ಸಂಸ್ಥೆಗೆ ಪ್ರಧಾನ ಮಾಡಿದರು.

ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಬಿ. ಜಯಕರ ಶೆಟ್ಟಿ ಹಾಗೂ ಕೆಎಸ್​ಆರ್​ಟಿಸಿ ರಾಮನಗರ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ಜಗದೀಶ್, ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ವರ್ಲ್ಡ್​​​ ಮಾರ್ಕೆಟಿಂಗ್​ ಕಾಂಗ್ರೆಸ್​ ಮುಂಬಯಿಯ ತಾಜ್ ಲ್ಯಾಂಡ್ಸ್ ಎನ್ಡ್ ಹೋಟೆಲ್​​ನಲ್ಲಿ ಆಯೋಜಿಸಿದ 10ನೇ ಆವೃತ್ತಿಯ ಗ್ಲೋಬಲ್​ ಮಾರ್ಕೆಟಿಂಗ್​ ಎಕ್ಸಲೆನ್ಸ್​ ಪ್ರಶಸ್ತಿ-2023 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೆಎಸ್​ಆರ್ಟಿಸಿ ಜಾರಿ ಮಾಡಿದ ಪ್ರತಿಷ್ಟಿತ ವಾಹನಗಳಾದ ಅಂಬಾರಿ ಉತ್ಸವ, ಪಲ್ಲಕ್ಕಿ ಮತ್ತು ವಿದ್ಯುತ್ ವಾಹನಗಳ ಬ್ರಾಂಡಿಂಗ್ ಉಪಕ್ರಮಕ್ಕಾಗಿ Best New Brand Product or Service Launch ಪ್ರಶಸ್ತಿ ಲಭಿಸಿತು. ಅಶುತೋಷ್ ಶರ್ಮ, Sales Head- Major Accounts (North & West) ADP India ಹಾಗೂ ಮಾಧುರಿ ಸಾಥೆ Excecutive Director-Indira Group of Institutes ರವರು ಪ್ರಶಸ್ತಿ ಪ್ರಧಾನ ಮಾಡಿದರು.

ಮಂಗಳೂರು ವಿಭಾಗದ ಹಿರಿಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಹಾಗೂ ಹಾಸನ ಪ್ರಾದೇಶಿಕ ಕಾರ್ಯಾಗಾರ ವ್ಯವಸ್ಥಾಪಕ ಎಸ್.ಆರ್. ಸತೀಶ್ ಬಾಬು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:11 pm, Fri, 24 November 23