AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ, ಇದರ ವಿಶೇಷತೆಗಳೇನು?

ಬೆಂಗಳೂರು ನಗರದ ಅಲಿ ಅಸ್ಗರ್ ರಸ್ತೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಸೇಫ್ ಸಿಟಿ ಯೋಜನೆ (ನಿರ್ಭಯ ನಿಧಿ)ಯಡಿ ‘ಕಮಾಂಡ್ ಸೆಂಟರ್‌’ವನ್ನು ಬೆಂಗಳೂರು ನಗರ ಪೊಲೀಸರು ನಿರ್ಮಿಸಿದ್ದಾರೆ. ಈ ನೂತನ ಕಟ್ಟಡವನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಗೃಹ ಸಚಿವ ಡಾ.ಜಿ ಪರಮೇಶ್ವರ್, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ದೇಶದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ, ಇದರ ವಿಶೇಷತೆಗಳೇನು?
ಕಮಾಂಡ್ ಸೆಂಟರ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
Follow us
Prajwal Kumar NY
| Updated By: ಆಯೇಷಾ ಬಾನು

Updated on: Nov 24, 2023 | 1:53 PM

ಬೆಂಗಳೂರು, ನ.24: ಮೆಟ್ರೋಪಾಲಿಟನ್ ಸಿಟಿ, ಹೈಟೆಕ್ ಸಿಟಿಯಲ್ಲಿ ಕಾನೂನು ಸುವ್ಯವಸ್ಥೆ ಧಕ್ಕೆ ತಂದು, ಅಟ್ಟಹಾಸಗೈವ ಕ್ರಿಮಿಗಳಿಗೆ ಬ್ರೇಕ್ ಹಾಕಲು ಬೆಂಗಳೂರು ಖಾಕಿ ಪಡೆ ಮತ್ತಷ್ಟು ಅಪ್ ಗ್ರೇಡ್ ಆಗಿದೆ. ಮಹಿಳೆಯರು ಮಕ್ಕಳ ಸುರಕ್ಷತೆಗಾಗಿ ದೇಶದಲ್ಲಿ ಮೊದಲ ಬಾರಿಗೆ ಸೇಫ್ ಸಿಟಿ ಯೋಜನೆಯಡಿ ಸುಸಜ್ಜಿತ ಬಹುಮಹಡಿ ಕಮಾಂಡ್ ಸೆಂಟರ್ (Command and Control Centre) ನಿರ್ಮಾಣವಾಗಿದೆ. ಈ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ಉದ್ಘಾಟನೆ ಮಾಡಿದರು.

ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇವತ್ತು ನಿರ್ಭಯ ಯೋಜನೆ ಅಡಿಯಲ್ಲಿ ಸೇಫ್ ಸಿಟಿ ಯೋಜನೆಯಲ್ಲಿ ಕಮಾಂಡ್ ಕಂಟ್ರೋಲ್ ಸೆಂಟರ್ ಮಾಡಲಾಗಿದೆ. ಈ ಯೋಜನೆಗೆ 661.5 ಕೋಟಿ ಆಗಿದೆ. ಕೇಂದ್ರ ಸರ್ಕಾರ ಅರವತ್ತು, ರಾಜ್ಯ ಸರ್ಕಾರ ನಲವತ್ತು ಪರ್ಸೆಂಟ್ ನೀಡಿದೆ. ಇದು ಬೆಂಗಳೂರು ಜನರಿಗೆ ಸುರಕ್ಷತೆ ಒದಗಿಸುತ್ತೆ. ಮಹಿಳೆಯರು ಮಕ್ಕಳಿಗೆ ಸಹಾಯ ಆಗುತ್ತೆ. ದೌರ್ಜನ್ಯ ಅಥವಾ ಅಪಘಾತ ಆದಾಗ ಪೊಲೀಸರು ಕೆಲಸ ಮಾಡ್ತಾರೆ. ನೇರವಾಗಿ ಕರೆ ಮಾಡಬಹುದು ಏಳು ನಿಮಿಷಗಳ ಒಳಗೆ ಸ್ಪಾಟ್ ಗೆ ತಲುಪುತ್ತಾರೆ ಎಂದರು.

ನಿರ್ಭಯಾ ಯೋಜನೆಯಡಿ ಈಗಾಗಲೇ ಬೆಂಗಳೂರು, ಅಹಮದಾಬಾದ್‌, ಚೆನ್ನೈ, ದೆಹಲಿ, ಹೈದರಾಬಾದ್‌, ಕೋಲ್ಕತ್ತಾ, ಲಖನೌ ಹಾಗೂ ಮುಂಬೈ ನಗರಗಳಲ್ಲಿ ಸೇಫ್ ಸಿಟಿ ಯೋಜನೆ ಜಾರಿಯಾಗುತ್ತಿದ್ದು ಈ ಪೈಕಿ ವೇಗವಾಗಿ ಕಮಾಂಡ್ ಸೆಂಟರ್ ನಿರ್ಮಿಸಿ ಅನುಷ್ಠಾನಕ್ಕೆವಾಗುತ್ತಿರುವ ನಗರಗಳ ಪೈಕಿ ಬೆಂಗಳೂರು ಮೊದಲನೆಯದಾಗಿದೆ. ರಾಜಧಾನಿಯಲ್ಲಿ ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ಆತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನ ಕಡಿಮೆಗೊಳಿಸಿ ಅವರಲ್ಲಿ ಸುರಕ್ಷತೆ ಭಾವ ಮೂಡಿಸುವುದೇ ಯೋಜನೆಯ ಮೊದಲ ಆದ್ಯತೆಯಾಗಿದೆ. ಜೊತೆಗೆ ಕಳ್ಳತನ, ಸುಲಿಗೆ, ಸರಗಳ್ಳತನ, ಸಾರ್ವಜನಿಕ ಪ್ರದೇಶಗಳಲ್ಲಿ ದೊಂಬಿ ಸೇರಿದಂತೆ ಗಣನೀಯ ಪ್ರಮಾಣದಲ್ಲಿ ನಡೆಯುತ್ತಿರುವ ಅಪರಾಧ ಚಟುಚಟಿಕೆಗಳನ್ನ ನಿಯಂತ್ರಿಸಲು ಯೋಜನೆ ಸಹಕಾರಿಯಾಗಲಿದೆ.

ಸೇಫ್ ಸಿಟಿ ಯೋಜನೆಯಡಿ ವಾಹನ ದಟ್ಟಣೆ ಹಾಗೂ ಜನದಟ್ಟಣೆ ಅಧಿಕವಿರುವ ಜಾಗ ಸೇರಿದಂತೆ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಸ್ಥಳ ಸೇರಿ 3 ಸಾವಿರ ಜಾಗಗಳಲ್ಲಿ ಈಗಾಗಲೇ ಸುಮಾರು 3500 ಸಿಸಿಟಿವಿ ಕ್ಯಾಮರ ಅಳವಡಿಸಲಾಗಿದೆ. ಮುಂದಿನ ವರ್ಷ ಮಾರ್ಚ್ ಅಂತ್ಯದೊಳಗೆ ಇನ್ನೂ 4500 ಕ್ಯಾಮರ ಅಳವಡಿಸಲಿದೆ.‌ ಒಟ್ಟು 7500 ಆತ್ಯಾಧುನಿಕ ಕ್ಯಾಮರ ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: 165 ದಿನಗಳಲ್ಲಿ ಶತಕೋಟಿ ದಾಟಿದ ಮಹಿಳೆಯರ ಉಚಿತ ಪ್ರಯಾಣ, ವ್ಯಯವಾಗಿದ್ದು ಎಷ್ಟು ಕೋಟಿ ಗೊತ್ತಾ?

ಕಮಾಂಡ್ ಸೆಂಟರ್ ವಿಶೇಷವೇನು ?

ಕಮಾಂಡ್ ಸೆಂಟರ್​ನಲ್ಲಿ ಸಿಬ್ಬಂದಿಗಳು ದಿನದ 24 ಗಂಟೆಗಳು ಹದ್ದಿನ ಕಣ್ಣಿಡಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಮಹಿಳೆಯರ ಮೇಲೆ ಕಿರುಕುಳ, ಅಸಭ್ಯ ವರ್ತನೆ, ಚುಡಾಯಿಸುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಸೇರಿದಂತೆ ಕಾನೂನು‌ ಸುವ್ಯವಸ್ಥೆ ಧಕ್ಕೆಯಾಗುವ ಘಟನೆಗಳು ನಡೆದರೆ ಅತ್ಯಾಧುನಿಕ ಸಿಸಿ ಕ್ಯಾಮರಗಳು ವಿಡಿಯೋ ಸೆರೆಹಿಡಿದು ಕೂಡಲೇ ಆಯಾ ಪೊಲೀಸ್ ಠಾಣೆಗಳ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ರವಾನಿಸಿ ಆರೋಪಿತರನ್ನ ತ್ವರಿತಗತಿಯಲ್ಲಿ ಹಿಡಿಯುವ ಕೆಲಸವಾಗಲಿದೆ. ಪದೇ‌‌ ಪದೇ ಅಪರಾಧ ಕೃತ್ಯವೆಸಗುವ ಚಾಳಿಯಿರುವ ಸುಮಾರು 30 ಸಾವಿರಕ್ಕೂ ಹೆಚ್ಚು ಆರೋಪಿಗಳ ಭಾವಚಿತ್ರಗಳನ್ನ ಸಾಫ್ಟ್ ವೇರ್ ನಲ್ಲಿ ಮಾಹಿತಿ ಸಂಗ್ರಹಿಸಿ ಜೋಡಿಸಲಾಗಿದೆ. ಒಂದು ವೇಳೆ ಅಪರಾಧವೆಸಗುವುದು ಕಂಡುಬಂದರೆ ತಂತ್ರಜ್ಞಾನ ನೆರವಿನಿಂದ ಸುಲಭವಾಗಿ ಆಯಾ ವ್ಯಕ್ತಿಯನ್ನ ಗುರುತು ಹಿಡಿಯಬಹುದಾಗಿದೆ. ಕಮಾಂಡ್ ಸೆಂಟರ್ ಮಾತ್ರವಲ್ಲದೆ ಆಯಾ ವಿಭಾಗದ 8 ಡಿಸಿಪಿ ಕಚೇರಿಗಳು, ಕಾನೂನು ಸುವ್ಯವಸ್ಥೆಯ ಪೊಲೀಸ್ ಠಾಣೆಗಳಲ್ಲಿ ಕಮಾಂಡ್ ಸೆಂಟರ್ ಫೀಡ್ ನ ನೇರ ಸಂಪರ್ಕವನ್ನ ವೀಕ್ಷಿಸಬಹುದಾಗಿದೆ.

ನಮ್ಮ ಡಯಲ್ 112 ಉನ್ನತೀಕರಣ

ಮಹಿಳೆಯರ ಸುರಕ್ಷತೆಗೆ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸದ್ಯ 35 ಐಸ್ ಲ್ಯಾಂಡ್ ನಿರ್ಮಿಸಲಾಗಿದ್ದು‌ ಇದರ ಸಂಪರ್ಕವನ್ನ ಕಮಾಂಡ್ ಸೆಂಟರ್ ಗೆ ನೀಡಲಾಗಿದೆ. ಮುಂದಿನ‌ ದಿನಗಳಲ್ಲಿ ಇನ್ನೂ 15 ಸೇಫ್ಟಿ ಐಲ್ಯಾಂಡ್ ಅಳವಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಯಾಧುನಿಕ ಡೇಟಾ‌ ಸೆಂಟರ್ ‌ನಲ್ಲಿ 30 ದಿನಗಳ ನಿರಂತರವಾಗಿ ವಿಡಿಯೋ ಸಂಗ್ರಹಣೆಗೆ ಅವಕಾಶವಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿ ಸಂಬಂಧಿಸಿದಂತೆ ಸುಮಾರು 60 ದಿನಗಳ ಡೇಟಾ ಸಂಗ್ರಹಿಸಬಹುದಾಗಿದೆ. ಅಸ್ಥಿತ್ವದಲ್ಲಿರುವ ನಮ್ಮ ಡಯಲ್ 112 ಉನ್ನತೀಕರಣ, ಸಂಪರ್ಕ ಕೇಂದ್ರದ ನವೀಕರಣ, ಜಿಐಎಸ್ ಮತ್ತು ಸ್ಥಳ ಆಧಾರಿತ ಪತ್ತೆ ವಿವಿಧ ತುರ್ತು ಪ್ರತಿಕ್ರಿಯೆ ವ್ಯವಸ್ಥೆಗ ಕಮಾಂಡ್ ಸೆಂಟರ್ ಸಾಕ್ಷಿಯಾಗಲಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ