ಹುಲಿ ಉಗುರು ವಿವಾದ: ಅಕ್ರಮ ವನ್ಯಜೀವಿ ಉತ್ಪನ್ನಗಳನ್ನು ಮರಳಿಸಲು ಕೊನೇ ಅವಕಾಶ ನೀಡಲು ಚಿಂತನೆ; ಸಚಿವ ಈಶ್ವರ ಖಂಡ್ರೆ

Tiger Claw Locket Row: ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಬಗ್ಗೆ ಸಾರ್ವಜನಿಕರಿಗೆ ಪೂರ್ತಿ ಅರಿವು ಇಲ್ಲ ಎಂದು ನನಗೆ ಅನ್ನಿಸುತ್ತಿದೆ. ಅಕ್ರಮ ವನ್ಯಜೀವಿ ಉತ್ಪನ್ನಗಳನ್ನು ಮರಳಿಸಲು ಕೊನೆಯ ಒಂದು ಅವಕಾಶ ನೀಡಬೇಕು ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ಇದೆ ಎಂದುಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ಹುಲಿ ಉಗುರು ವಿವಾದ: ಅಕ್ರಮ ವನ್ಯಜೀವಿ ಉತ್ಪನ್ನಗಳನ್ನು ಮರಳಿಸಲು ಕೊನೇ ಅವಕಾಶ ನೀಡಲು ಚಿಂತನೆ; ಸಚಿವ ಈಶ್ವರ ಖಂಡ್ರೆ
ಸಚಿವ ಈಶ್ವರ ಖಂಡ್ರೆ
Follow us
| Updated By: ಗಣಪತಿ ಶರ್ಮ

Updated on:Oct 26, 2023 | 2:41 PM

ಬೆಂಗಳೂರು, ಅಕ್ಟೋಬರ್ 26: ವನ್ಯಜೀವಿಗಳ (Wildlife) ಚರ್ಮ, ಉಗುರು ಧರಿಸುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಯಡಿ ಕಾನೂನು ಉಲ್ಲಂಘನೆ ಆಗುತ್ತದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ (Eshwara Khandre) ಹೇಳಿದರು. ಬೆಂಗಳೂರಿನಲ್ಲಿ ವಿಕಾಸಸೌಧದ ನಾಲ್ಕನೇ ಮಹಡಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹುಲಿ ಉಗುರು ಲಾಕೆಟ್ ಮತ್ತು ವನ್ಯಜೀವಿ ಉತ್ಪನ್ನಗಳ ಅಕ್ರಮ ದಾಸ್ತಾನು ವಿಚಾರವಾಗಿ ಮಾಹಿತಿ ನೀಡಿದರು. ಯಾವುದೇ ವನ್ಯಜೀವಿ ಉತ್ಪನ್ನ ಸಂಗ್ರಹಣೆ, ಸಾಗಾಣಿಕೆ, ದಾಸ್ತಾನು ಮತ್ತು ಬಳಕೆ ಶಿಕ್ಷಾರ್ಹ ಅಪರಾಧ ಎಂದು ಅವರು ಹೇಳಿದರು.

ರಿಯಾಲಿಟಿ ಶೋದಲ್ಲಿ ಹುಲಿ ಉಗುರು ಧರಿಸಿದ್ದ ವಿಚಾರದಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ದೂರು ಬಂದ ಬೇರೆ ಕಡೆ ಕೂಡಾ ನಮ್ಮ ಅಧಿಕಾರಿಗಳು ಹೋಗಿ ಪರಿಶೀಲನೆ ನಡೆಸಿದ್ದಾರೆ. ಕಾಯ್ದೆ ಬಗ್ಗೆ ಸಾರ್ವಜನಿಕರಿಗೆ ಪೂರ್ತಿ ಅರಿವು ಇಲ್ಲ ಎಂದು ನನಗೆ ಅನ್ನಿಸುತ್ತಿದೆ. ಅಕ್ರಮ ವನ್ಯಜೀವಿ ಉತ್ಪನ್ನಗಳನ್ನು ಮರಳಿಸಲು ಕೊನೆಯ ಒಂದು ಅವಕಾಶ ನೀಡಬೇಕು ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ಇದೆ. ಈ ಕುರಿತು ತಜ್ಞರ ಜೊತೆ ಚರ್ಚಿಸಿ ವರದಿ ಸಲ್ಲಿಸಲು ಈಗಾಗಲೇ ತಂಡ ರಚಿಸಲಾಗಿದೆ. ವರದಿ ಬಂದ ಬಳಿಕ ಸಾರ್ವಜನಿಕರಿಗೆ ಮಾಹಿತಿ ಕೊಟ್ಟು ಶಾಶ್ವತ ಪರಿಹಾರ ಕಂಡುಕೊಳ್ಳಲು ಇಲಾಖೆ ಬದ್ಧವಾಗಿ ಇದೆ ಎಂದು ಖಂಡ್ರೆ ಹೇಳಿದರು.

ಹುಲಿ ಉಗುರು ಧರಿಸಿದ ಹಲವರ ವಿರುದ್ಧ ದೂರುಗಳು ಬಂದಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳುತ್ತಾರೆ. ವನ್ಯಜೀವಿಗಳ ಚರ್ಮ, ಉಗುರು ಬಳಕೆ ಮಾಡುವುದಕ್ಕೆ ನಿಷೇಧವಿದೆ. ಈ ಬಗ್ಗೆ ಕಾನೂನಿನ ಜ್ಞಾನದ ಕೊರತೆ ಇದೆ, ಜನರಲ್ಲಿ ಅರಿವು ಇಲ್ಲ. ಹೀಗಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಲಿದೆ. ಯಾರು ಬಳಿ ವ್ಯನ್ಯಜೀವಿಗಳ ಚರ್ಮ, ಉಗುರು, ಇತರೆ ವಸ್ತು ಇದೆಯೋ, ಪ್ರಾಣಿಗಳಿಗೆ ಸಂಬಂಧಿಸಿದ ವಸ್ತುಗಳು ಇದೆಯೋ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ. ಪ್ರಾಣಿಗಳ ವಸ್ತುಗಳು ಇದ್ದರೆ ಸ್ವಯಂಪ್ರೇರಿತವಾಗಿ ಹಿಂದಿರುಗಿಸಬಹುದು. ಅರಣ್ಯ ಇಲಾಖೆ ಸುಪರ್ದಿಗೆ ಒಪ್ಪಿಸಲು ಅವಕಾಶ ನೀಡಲಾಗುವುದ ಎಂದು ಈಶ್ವರ ಖಂಡ್ರೆ ಹೇಳಿದರು.

ಇದನ್ನೂ ಓದಿ: ಹುಲಿ ಉಗುರು ಪೆಂಡೆಂಟ್ ಪ್ರಕರಣ: ಯಾರಿಗೆಲ್ಲ ಸಂಕಷ್ಟ? ಯಾರ್ಯಾರ ಮನೆ ಶೋಧ?

ರಿಯಾಲಿಟಿ ಶೋದಲ್ಲಿ ಹುಲಿ ಉಗುರು ಧರಿಸಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕರ್ನಾಟಕದ ಹಲವು ನಟರು, ಸ್ಟಾರ್​​ಗಳ ಬಳಿ ಹುಲಿ ಉಗುರಿನ ಪೆಂಡೆಂಟ್, ಲಾಕೆಟ್ ಇರುವ ಬಗ್ಗೆ ವರದಿಯಾಗಿದ್ದವು. ಇದರ ಬೆನ್ನಲ್ಲೇ ನಟ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅನೇಕ ಮಂದಿಯ ಮನೆಗಳಿಗೆ ದಾಳಿ ನಡೆಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಶೋಧ ಕಾರ್ಯ ನಡೆಸಿದ್ದರು. ಪ್ರಕರಣ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ಅರಣ್ಯ ಇಲಾಖೆಯಲ್ಲಿ 800 ಹುದ್ದೆ ಭರ್ತಿಗೆ ಅನುಮೋದನೆ: ಖಂಡ್ರೆ ಮಾಹಿತಿ

ಅರಣ್ಯ ಇಲಾಖೆಯಲ್ಲಿ 4 ಸಾವಿರ ಹುದ್ದೆಗಳು ಖಾಲಿಯಿವೆ. 4 ಸಾವಿರ ಹುದ್ದೆಗಳ ಪೈಕಿ 800 ಹುದ್ದೆ ಭರ್ತಿಗೆ ಅನುಮೋದನೆ ನೀಡಲಾಗಿದೆ. 800 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಬಾಕಿಯಿರುವ ಖಾಲಿ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಗೆ ಮನವಿ ಮಾಡಲಾಗಿದೆ. ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಕೆ ಮಾಡಲಾಗಿದೆ ಎಂದು ಖಂಡ್ರೆ ಹೇಳಿದರು. ಅರಣ್ಯ ಇಲಾಖೆಗೆ ಸಂಬಂಧಿಸಿದ ದೂರುಗಳಿದ್ದರೆ ಸಹಾಯವಾಣಿ ಸಂಖ್ಯೆ 1926ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದೂ ಅವರು ಮಾಹಿತಿ ನೀಡಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:30 pm, Thu, 26 October 23

ತಾಜಾ ಸುದ್ದಿ
ನನ್ನ ಹೆಸರೇ ಬೆಂಕಿ, ಹಾಟ್ ಆಗಿ ಇರಲೇ ಬೇಕಲ್ಲ: ತನಿಷಾ ಕುಪ್ಪಂಡ
ನನ್ನ ಹೆಸರೇ ಬೆಂಕಿ, ಹಾಟ್ ಆಗಿ ಇರಲೇ ಬೇಕಲ್ಲ: ತನಿಷಾ ಕುಪ್ಪಂಡ
ಪ್ರಧಾನಿ ಮೋದಿಯನ್ನು ಭೇಟಿಯಾದ ಟೀಮ್​​​​​ ಇಂಡಿಯಾ
ಪ್ರಧಾನಿ ಮೋದಿಯನ್ನು ಭೇಟಿಯಾದ ಟೀಮ್​​​​​ ಇಂಡಿಯಾ
Team India: ಟೀಮ್ ಇಂಡಿಯಾದ ಚಾಂಪಿಯನ್ಸ್​ ಜೆರ್ಸಿ ಅನಾವರಣ
Team India: ಟೀಮ್ ಇಂಡಿಯಾದ ಚಾಂಪಿಯನ್ಸ್​ ಜೆರ್ಸಿ ಅನಾವರಣ
ಮುಂಜಾನೆ ಮಂಜಿನ ನಡುವೆ ಟೀಮ್ ಇಂಡಿಯಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಮುಂಜಾನೆ ಮಂಜಿನ ನಡುವೆ ಟೀಮ್ ಇಂಡಿಯಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ವಿಮಾನದಲ್ಲಿ ಟೀಮ್ ಇಂಡಿಯಾ ಆಟಗಾರರ ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ
ವಿಮಾನದಲ್ಲಿ ಟೀಮ್ ಇಂಡಿಯಾ ಆಟಗಾರರ ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ
ಕೆಅರ್​ಎಸ್ ಗೆ ಹೆಚ್ಚಿದ ಒಳಹರಿವು, ಮಳೆಗಾಲದ ಆರಂಭದಲ್ಲೇ 100 ಅಡಿ ನೀರು!
ಕೆಅರ್​ಎಸ್ ಗೆ ಹೆಚ್ಚಿದ ಒಳಹರಿವು, ಮಳೆಗಾಲದ ಆರಂಭದಲ್ಲೇ 100 ಅಡಿ ನೀರು!
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ