Karnataka Lockdown: ರಾಜ್ಯದಲ್ಲಿ ಇಂದಿನಿಂದ ಟೈಟ್‌ ಲಾಕ್‌ಡೌನ್, ಜಿಲ್ಲಾ ಗಡಿಗಳು ಬಂದ್.. ಎಲ್ಲದಕ್ಕೂ ಬೀಗ

ಹೆಮ್ಮಾರಿ ಕೊರೊನಾವನ್ನ ಒದ್ದೋಡಿಸಲು ಖಡಕ್‌ ಲಾಕ್‌ಡೌನ್‌ ಜಾರಿಯಾಗಿದೆ. ಇವತ್ತು ಬೆಳಗ್ಗೆ 6 ಗಂಟೆಯಿಂದಲೇ ಇಡೀ ಕರುನಾಡಿಗೆ ಬೀಗ ಬಿದ್ದಿದೆ. ಕೇವಲ ನಾಲ್ಕೇ ಗಂಟೆ ದಿನಸಿ ಖರೀದಿಗೆ ಅವಕಾಶ ಇದೆ. ಹಾಗಂತ ಬೈಕ್ ಎತ್ಕೊಂಡು ಸುತ್ತಾಡಂಗಿಲ್ಲ. ಇಂದಿನಿಂದ ಬೇಕಾಬಿಟ್ಟಿ ಸುತ್ತಾಡೋರಿಗೆ ಖಾಕಿ ಪಿಕ್ಚರ್ ಬಿಡಿಸಲಿದೆ. ಹಾಗಿದ್ರೆ ಇವತ್ತಿನಿಂದ ಚಿತ್ರಣ ಹೇಗಿರಲಿದೆ ಅನ್ನೋದರ ಕಂಪ್ಲೀಟ್‌ ರಿಪೋರ್ಟ್ ಇಲ್ಲಿದೆ.

Karnataka Lockdown: ರಾಜ್ಯದಲ್ಲಿ ಇಂದಿನಿಂದ ಟೈಟ್‌ ಲಾಕ್‌ಡೌನ್, ಜಿಲ್ಲಾ ಗಡಿಗಳು ಬಂದ್.. ಎಲ್ಲದಕ್ಕೂ ಬೀಗ
ಲಾಕ್​ಡೌನ್​
Follow us
ಆಯೇಷಾ ಬಾನು
|

Updated on:May 10, 2021 | 7:05 AM

ಬೆಂಗಳೂರು: ಲಾಕ್‌ಡೌನ್.. ಕಂಪ್ಲೀಟ್‌ ಲಾಕ್‌ಡೌನ್.. ಬೆಳಗ್ಗೆ 6 ಗಂಟೆಯಿಂದಲೇ ಕಠಿಣಾತಿ ಕಠಿಣ ಲಾಕ್‌ಡೌನ್ ಜಾರಿಯಾಗಿದೆ. ಇಷ್ಟು ದಿನ ಬೆಳಗ್ಗೆಯಾಗ್ತಿದ್ದಂತೆ ಜನ ರಸ್ತೆಗಿಳಿಯುತ್ತಿದ್ರು. ಆದ್ರೆ ಇಂದಿನಿಂದ ಖಾಕಿ ಟೀಮ್ ರಸ್ತೆಗಿಳಿಯುತ್ತೆ. ಗಲ್ಲಿ ಗಲ್ಲಿಯಲ್ಲೂ ನಿಂತು ಬಿಸಿ ಬಿಸಿ ಕಜ್ಜಾಯ ಕೊಡುತ್ತೆ. ಯಾಕಂದ್ರೆ ಈ ಬಾರಿಯ ಲಾಕ್‌ಡೌನ್ ಅಂತಿಂಥದ್ದಲ್ಲ. ಇವತ್ತಿನಿಂದ ಕರುನಾಡಿನ ಚಿತ್ರಣ ಕಂಪ್ಲೀಟ್‌ ಚೇಂಜ್ ಆಗಲಿದ್ದು, ಬೆಂಗಳೂರು ಸೇರಿ ರಾಜ್ಯಾದ್ಯಂತ ಟಫ್ ರೂಲ್ಸ್ ಜಾರಿಯಾಗಿದೆ.

ಯೆಸ್.. ಯಾವುದು ಬರ್ಬಾರ್ದಿತ್ತೋ ಅದೇ ಅಸ್ತ್ರ ಅನಿವಾರ್ಯವಾಗಿದೆ. ಯಾವ ಕರಾಳ ದಿನಗಳು ಮರುಕಳಿಸಬಾರ್ದು ಅಂತಿದ್ವೋ ಆ ದಿನಗಳು ಮತ್ತೆ ಆರಂಭವಾಗಿವೆ. ಒಂಚೂರು ಸಡಿಲಕ್ಕೂ ಅವಕಾಶ ಇಲ್ಲದ ಅಸ್ತ್ರ ಪ್ರಯೋಗವಾಗಿದೆ. ನರಪಿಳ್ಳೆಯೂ ಹೊರಗೆ ಕಾಲಿಡಂಗಿಲ್ಲ. ಇವತ್ತಿನಿಂದ ಮುಂದಿನ 14 ದಿನಗಳವರೆಗೆ ಇಡೀ ಕರುನಾಡಿಗೇ ಕರುನಾಡೇ ಕಂಪ್ಲೀಟ್‌ ಲಾಕ್‌ ಆಗಲಿದೆ. ಒಂದ್ವೇಳೆ ಇದನ್ನ ಮೀರಿಯೂ ನೀವು ಆಚೆ ಕಾಲಿಟ್ಟೇ ಆದ್ರೆ ನಿಮಗೂ ಇದೇ ಗತಿ.

ಸರ್ ಅಲ್ಲಿಗೆ ಹೋಗಿದ್ದೆ.. ಇಲ್ಲಿಗೆ ಹೋಗಿದ್ದೆ.. ಮನೆ ಇಲ್ಲೇ ಇರೋದು.. ಅಂತೇನಾದ್ರೂ ರಸ್ತೆಗಿಳಿದ್ರೆ ಪೊಲೀಸರು ಬೆವರಿಳಿಸಿಬಿಡ್ತಾರೆ. ಅಗತ್ಯ ವಸ್ತುಗಳನ್ನ ಖರೀದಿಗಷ್ಟೇ ಅವಕಾಶವಿದ್ದು, ಅದಾದ ಬಳಿಕ ಯಾವುದೇ ವಾಹನಗಳು ರಸ್ತೆಗಿಳಿಯುವಂತಿಲ್ಲ. ಒಂದ್ವೇಳೆ ವಾಹನ ರಸ್ತೆಗಿಳಿಸಿ ಸುತ್ತಾಟ ನಡೆಸಿದ್ರೆ ಲಾಠಿ ಏಟಿನ ಜೊತೆಗೆ ವಾಹನಗಳನ್ನ ಸೀಟ್‌ ಮಾಡಿ, ನಿಮ್ಮನ್ನ ಅರೆಸ್ಟ್ ಮಾಡೋದು ಪಕ್ಕಾ.

ರಾಜ್ಯಾದ್ಯಂತ ಇಂದಿನಿಂದ ಕಂಪ್ಲೀಟ್‌ ಟೈಟ್‌ ಲಾಕ್‌ಡೌನ್ ಇಷ್ಟು ದಿನಗಳ ಜನರ ಆಟ ಮುಗೀತು.. ಇಂದಿನಿಂದ ನರಪಿಳ್ಳೆಯೂ ಓಡಾಡದಂತೆ ಖಾಕಿ ಫುಲ್ ಟೈಟ್ ಮಾಡಲಿದೆ. ಬೆಳಗ್ಗೆ 6 ಗಂಟೆಯಿಂದಲೇ ಪೊಲೀಸರು ಫೀಳ್ಡಿಗಿಳಿದಿದ್ದು, ಕಂಪ್ಲೀಟ್ ಲಾಕ್ ಮಾಡ್ತಿದೆ. ಅಗತ್ಯ ಸೇವೆಗಳ ನೆಪದಲ್ಲಿ ಅನಗತ್ಯವಾಗಿ ಸುತ್ತಾಡೋರನ್ನೂ ಚೆಕ್‌ ಮಾಡುತ್ತೆ.

14 ದಿನ ಟೈಟ್‌ ಲಾಕ್‌ಡೌನ್ ರಾಜ್ಯಾದ್ಯಂತ ಇಂದು ಬೆಳಗ್ಗೆ 6 ಗಂಟೆಯಿಂದಲೇ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಾಗಿದೆ. ಬೇಕಾಬಿಟ್ಟಿಯಾಗಿ ಓಡಾಡೋರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ. ಈ ಟೈಟ್‌ ರೂಲ್ಸ್ ನಡುವೆಯೂ ಬೆಳಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಈ ಟೈಮ್‌ನಲ್ಲಿ ನಡೆದುಕೊಂಡೇ ಹೋಗಿ ಅಗತ್ಯ ವಸ್ತುಗಳನ್ನ ಖರೀದಿ ಮಾಡಬೇಕು. ಅದನ್ನ ಬಿಟ್ಟು ಇದೇ ಸಮಯವನ್ನ ಮಿಸ್‌ಯೂಸ್‌ ಮಾಡಿಕೊಂಡು ಬೈಕ್‌ನಲ್ಲಿ ಸುತ್ತಾಡಿದ್ರೆ ಪೊಲೀಸರು ಚೆಕ್‌ ಮಾಡ್ತಾರೆ.

ಕುಂಟು ನೆಪ ಹೇಳಿದ್ರೆ ನೀವು ಬೇಕಾಬಿಟ್ಟಿ ಓಡಾಡ್ತಿದ್ದೀರಾ ಅಂತಾ ಗೊತ್ತಾದ್ರೆ ಅರೆಸ್ಟ್ ಆಗೋದು ಗ್ಯಾರಂಟಿ ಹುಷಾರ್. ಇನ್ನು ಅಗತ್ಯ ವಸ್ತು ಖರೀದಿಗೆ ಕೊಟ್ಟಿರೋ ಟೈಮ್‌ ಮುಗೀತಿದ್ದಂತೆ ಅಂದ್ರೆ ಬೆಳಗ್ಗೆ 10 ಗಂಟೆಗೆ ರಾಜ್ಯದ ರಸ್ತೆ ರಸ್ತೆಯನ್ನೂ ಪೊಲೀಸರು ಲಾಕ್ ಮಾಡ್ತಾರೆ. ಬೆಳಗ್ಗೆ 10 ಗಂಟೆ ನಂತರ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ. ತುರ್ತು ಸೇವೆ, ಮೆಡಿಕಲ್ ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಲಿವೆ. ಇನ್ನು ರೋಡ್ ಖಾಲಿ ಇದೆ ಊರಿಗೆ ಹೋಗೋಣ ಅಂದ್ರೂ ಆಗಲ್ಲ. ಇಂದಿನಿಂದಲೇ ಅಂತರ್‌ ಜಿಲ್ಲಾ ಸಂಚಾರ ಬಂದ್ ಆಗಲಿದ್ದು, ಮುಂದಿನ 14 ದಿನ ಗಡಿ ದಾಟಿ ಪಕ್ಕದ ಜಿಲ್ಲೆಗೂ ಹೋಗೋಕೆ ಪೊಲೀಸರು ಬಿಡಲ್ಲ. ಇದೇ ರೂಲ್ಸ್‌ಗಳು ಮೇ 24ರವರೆಗೂ ಜಾರಿಯಲ್ಲಿರುತ್ತೆ.

ರಾಜ್ಯದ ಲಾಕ್‌ಡೌನ್‌ ಬಗ್ಗೆ ಮಾಹಿತಿ ಪಡೆದ ಮೋದಿ ಕರ್ನಾಟಕದಲ್ಲಿ ಕೊರೊನಾ ರಣಕೇಕೆ ಹಾಕ್ತಿದ್ದು, ಈ ಬಗ್ಗೆ ಖುದ್ದು ಪಿಎಂ ಮೋದಿ ಸಿಎಂ ಬಿಎಸ್‌ವೈಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಈ ವೇಳೆ ಇಂದಿನಿಂದ ಜಾರಿಯಾಗ್ತಿರೋ ಲಾಕ್‌ಡೌನ್‌ ಬಗ್ಗೆಯೂ ಸಿಎಂ ಮಾಹಿತಿ ಕೊಟ್ಟಿದ್ದಾರೆ. ಹೀಗಾಗಿ ಇಂದಿನಿಂದ ಜಾರಿಯಾಗಿರೋ ಲಾಕ್‌ಟೌನ್ ಸ್ಟ್ರಿಕ್ಟ್ ಆಗಿರುತ್ತೆ. ಪೊಲೀಸರ ಕೈಯಲ್ಲಿ ಲಾಕ್‌ಡೌನ್ ಕೀ ಕೊಟ್ಟಿರೋ ಸಿಎಂ ಮುಲಾಜಿಲ್ಲದೆ ಸುಖಾಸುಮ್ಮನೆ ಓಡಾಡೋರಿಗೆ ಬಿಸಿ ಮುಟ್ಟಿಸಿ ಎಂದಿದ್ದಾರೆ.

ಒಟ್ನಲ್ಲಿ ಬೆಂಗಳೂರು ಸೇರಿ ಜಿಲ್ಲೆ ಜಿಲ್ಲೆಯಲ್ಲೂ ಟ್ರೇಲರ್ ರಿಲೀಸ್ ಮಾಡಿ ಲಾಠಿ ರುಚಿ ತೋರಿಸಿರೋ ಪೊಲೀಸರು, ಇಂದಿನಿಂದ ಲಾಠಿಗೆ ಮತ್ತಷ್ಟಿ ಕೆಲ್ಸ ಕೊಡ್ತಾರೆ. ಇವತ್ತಿನಿಂದ ಪೊಲೀಸರ ಕಣ್ತಪ್ಪಿಸಿ ನೀವು ಹೋಗೋದಕ್ಕೆ ಸಾಧ್ಯವೇ ಇಲ್ಲ. ಮನೆಯಲ್ಲೇ ಇರ್ತೀರಾ ಅಥವಾ ಲಾಠಿ ಏಟು ತಿಂದು ಬಾಸುಂಡೆ ಬರಿಸ್ಕೋತೀರಾ ಅನ್ನೋದನ್ನ ನೀವೇ ಡಿಸೈಡ್ ಮಾಡಿ.

ಇದನ್ನೂ ಓದಿ: Karnataka Lockdown: ಕರ್ನಾಟಕ ಲಾಕ್​ಡೌನ್​ ಅವಧಿಯಲ್ಲಿ ಯಾವೆಲ್ಲಾ ಸೇವೆ ಲಭ್ಯವಿರಲಿದೆ, ಯಾವುದು ಇಲ್ಲ? ಇಲ್ಲಿದೆ ಮಾಹಿತಿ

Published On - 6:56 am, Mon, 10 May 21

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ