ಬೆಂಗಳೂರು, ಸೆಪ್ಟೆಂಬರ್ 23: ತಿಮ್ಮಪ್ಪ ಪ್ರಸಾದದ ವಿವಾದದ (Tirupati Laddoo controversy) ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ಕೂಡ ವಿವಿಧ ಬ್ರಾಂಡ್‌ಗಳ ತುಪ್ಪವನ್ನು ಪರೀಕ್ಷೆಗೆ ಒಳಪಡಿಸಲು ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ. ಇವರ ಆದೇಶದಂತೆ ಇದೀಗ ಅಧಿಕಾರಿಗಳು ಫೀಲ್ಡಿಗಿಳಿದಿದ್ದಾರೆ. ತುಪ್ಪದ ಮಾದರಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ. ಮುಂದೆ ಓದಿ.
ನಿನ್ನೆಯಷ್ಟೇ ವಿವಿಧ ಬಗೆಯ ತುಪ್ಪದ ಗುಣಮಟ್ಟ ಪರೀಕ್ಷೆ ಮಾಡಲು ಆಹಾರ ಇಲಾಖೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದರು. ಆದೇಶದ ಬೆನ್ನಲೇ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. ರಾಜ್ಯಕ್ಕೆ ಎಲ್ಲೆಲ್ಲಿಂದ ತುಪ್ಪಗಳು ಬರುತ್ತಿದೆ, ಹೇಗೆಲ್ಲಾ ಅವುಗಳನ್ನ ಮಾರಾಟ ಮಾಡಲಾಗುತ್ತಿದೆ ಹಾಗೂ ತುಪ್ಪದ ಮಾರಾಟದ ಅಂಗಡಿಗಳ ಮೇಲೆ ಕಣ್ಣಿಟ್ಟಿದೆ. ಈ ಹಿನ್ನೆಲೆ ಇಂದಿನಿಂದ ಆಪರೇಷನ್ ಗೀ, ಶುರುವಾಗಿದೆ.
ಇನ್ನು ಈಗಾಗಲೇ ಅಧಿಕಾರಿಗಳು ಫೀಲ್ಡಿಗಿಳಿದು ತುಪ್ಪದ ಸಂಗ್ರಹಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರ, ಯಲಹಂಕ, ದಾಸರಹಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಇಂದು ಆಹಾರ ಇಲಾಖೆಯ ತಂಡ ವಿವಿಧ ಮಾದರಿಯನ್ನ ಸಂಗ್ರಹಿಸಲಾಗಿದೆ. ಜೊತೆಗೆ ನಾಳೆಯೂ ಕೂಡ ತುಪ್ಪದ ಮಾದರಿ ಸಂಗ್ರಹ ಮಾಡಲಿದ್ದಾರೆ. ಈ ಹಿಂದೆಯೂ ಒಮ್ಮೆ ಪರೀಕ್ಷೆ ಮಾಡಿದ್ದಾಗ ತುಪ್ಪದಲ್ಲಿ ಹೆಚ್ಚು ಕೊಬ್ಬಿನ ಅಂಶ ಕಂಡು ಬಂದಿತ್ತು. ಇದೀಗ ಮತ್ತೆ ಈ ರೀತಿಯಾದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇದನ್ನೂ ಓದಿ: ಲಡ್ಡು ವಿವಾದ ಬೆನ್ನಲ್ಲೇ ನಂದಿನಿ ತುಪ್ಪ ಹೊತ್ತು ತಿರುಪತಿಗೆ ಹೋಗುವ ಟ್ಯಾಂಕರ್ಗಳಿಗೆ ಜಿಪಿಎಸ್ ಅಳವಡಿಕೆ
ಒಟ್ಟಿನಲ್ಲಿ ಆಂಧ್ರದ ಬಳಿಕ ರಾಜ್ಯದಲ್ಲೂ ಕೂಡ ತುಪ್ಪದ ಬಗ್ಗೆ ಮುಂಜಾಗೃತೆ ವಹಿಸಲಾಗುತ್ತಿದ್ದು, 10 ದಿನದಲ್ಲಿ ತುಪ್ಪದ ವರದಿ ಬರಲಿದೆ. ಈ ಹಿನ್ನೆಲೆ ಇದರಲ್ಲಿ ಏನೆಲ್ಲಾ ಅಂಶಗಳು ಪತ್ತೆಯಾಗಲಿದೆ ಅಂತ ಕಾದುನೋಡ್ಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.