ಅಲ್ಲಾ ಹು ಅಕ್ಬರ್ ಎಂದಿದ್ದ ಮಂಡ್ಯ ವಿದ್ಯಾರ್ಥಿನಿ ಮಸ್ಕಾನ್​ ಭಾರತದ ಶ್ರೇಷ್ಠ ಮಹಿಳೆ ಎಂದು ಮೂಗುತೂರಿಸಿದ ಅಲ್​ ಖೈದಾ! ಯುವತಿಯ ತಂದೆ ಏನಂದರು?

| Updated By: ಗಂಗಾಧರ​ ಬ. ಸಾಬೋಜಿ

Updated on: Apr 06, 2022 | 4:19 PM

ಆಲ್ ಖೈದಾಕ್ಕೂ ಮತ್ತು ಭಾರತದ ಉಡುಪಿಯಲ್ಲಿ ಪ್ರಾರಂಭವಾದ ವಿಷಯಕ್ಕೆ ಏನು ಸಂಬಂಧ ವಿಮರ್ಶೆ ಮಾಡಬೇಕು. ಅವರ ಇಸ್ಲಾಮಿಕ್ ರಾಷ್ಟ್ರದ ಸಮಸ್ಯೆ ಬಗೆಹರಿಸಲಿ. ಭಾರತದ ಸಮಸ್ಯೆ ನಮಗೆ ಬಗೆಹರಿಸುವ ಶಕ್ತಿ ನಮಗಿದೆ ಎಂದು ಉಡುಪಿಯಲ್ಲಿ ರಘು ಪತಿ ಭಟ್ ಹೇಳಿಕೆ ನೀಡಿದ್ದಾರೆ.

ಅಲ್ಲಾ ಹು ಅಕ್ಬರ್ ಎಂದಿದ್ದ ಮಂಡ್ಯ ವಿದ್ಯಾರ್ಥಿನಿ ಮಸ್ಕಾನ್​ ಭಾರತದ ಶ್ರೇಷ್ಠ ಮಹಿಳೆ ಎಂದು ಮೂಗುತೂರಿಸಿದ ಅಲ್​ ಖೈದಾ! ಯುವತಿಯ ತಂದೆ ಏನಂದರು?
ಮುಸ್ಕಾನ್, ಉಗ್ರ ಅಲ್ ಜವಾಹಿರಿ
Follow us on

ಕರ್ನಾಟಕದಲ್ಲಿ ಹಿಜಾಬ್ ಗಲಾಟೆ ವಿಚಾರವಾಗಿ ಅಲ್-ಖೈದಾ ನಾಯಕ ಮಂಡ್ಯದ ಮುಸ್ಕಾನ್ (Muskan) ​​ಗೆ ಮೋಸ್ಟ್ ವಾಂಟೆಡ್ ಉಗ್ರನ ಶಹಬ್ಬಾಸ್ ಗಿರಿ ನೀಡಿದ್ದಾನೆ. ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ್ದ ಯುವತಿ ಮುಸ್ಕಾನ್​ಗೆ ಭಾರತದ ಶ್ರೇಷ್ಠ ಮಹಿಳೆ ಎಂದು ಪ್ರತ್ಯೇಕ ಸಾಹಿತ್ಯ ಬರೆದು, ವಿಡಿಯೋ ಮಾಡಿ, ಉಗ್ರ ಅಲ್ ಜವಾಹಿರಿ ಶಹಬ್ಬಾಸ್​ಗಿರಿ ಕೊಟ್ಟಿದ್ದಾನೆ. ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಆಗಿರುವ ಅಯ್ಮಾನ್ ಜವಾಹಿರಿ, ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದಾನೆ. ಬಿನ್ ಲಾಡೆನ್ ನಂತರ ಜವಾಹಿರಿ ಅಲ್ ಖೈದಾದ ಮುಖ್ಯಸ್ಥನಾಗಿದ್ದಾನೆ. ಅಲ್ ಖೈದ ನಾಯಕ ಜವಾಹಿರಿ ಮುಸ್ಕಾನ್ ಪರ ಬ್ಯಾಟಿಂಗ್ ಮಾಡಿದ್ದಾನೆ. ಈ ಘಟನೆ ಕುರಿತು ಟಿವಿ9ಗೆ ಮುಸ್ಕಾನ್ ತಂದೆ ಪ್ರತಿಕ್ರಿಯೆ ನೀಡಿದ್ದಾರೆ. ದಯವಿಟ್ಟು ಇದನ್ನು ಬೆಳೆಸಬಾರದು ಎಂದು ಮನವಿ ಮಾಡುತ್ತೇನೆ. ನಮ್ಮ ದೇಶದಲ್ಲಿ ನೆಮ್ಮದಿಯಿಂದ ಇದ್ದೇವೆ, ನಮ್ಮನ್ನ ಬಿಟ್ಟುಬಿಡಿ. ಜವಾಹಿರಿ ಬಗ್ಗೆ ನಮಗೆ ಯಾವುದೇ ರೀತಿಯ ಮಾಹಿತಿ ಇಲ್ಲ. ಜವಾಹಿರಿ ಅವರನ್ನು ನಾನು ನೋಡಿದ್ದೇ ಇದೆ ಮೊದಲು. ಎಲ್ಲರನ್ನೂ ಹಾಳು ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮ ಪಾಡಿಗೆ ನಾವು ಜೀವನ ಮಾಡಿಕೊಂಡು ಹೋಗುತ್ತಿದ್ದೇವೆ. ನಮಗೆ ಯಾರ ಸಹಾಯ ಬೇಡ. ನಮ್ಮ ಪಾಡಿಗೆ ನಮ್ಮನ್ನ ಬಿಡಿ. ನಮ್ಮನ್ನ ನೆಮ್ಮದಿಯಾಗಿ ಬದುಕಲು ಬಿಟ್ಟುಬಿಡಿ ಎಂದು ಮುಸ್ಕಾನ್ ತಂದೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ. ಇಂತಹ ಉಗ್ರ ಸಂಘಟನೆಗಳ ಹೇಳಿಕೆಯನ್ನ ಖಂಡಿಸುತ್ತೇನೆ. ನಮ್ಮ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸೋದು ಬೇಡ. ನಮ್ಮ ಸರ್ಕಾರ ಯಾವುದೇ ವಿರೋಧಿ ನೀತಿ ಅನುಸರಿಸುತ್ತಿಲ್ಲ. ಈಗ ಇರುವ ಕಾನೂನುಗಳನ್ನ ನಾವು ಜಾರಿ ಮಾಡುತ್ತಿದ್ದೇವೆ. ಹೊಸ ಕಾನೂನು ಯಾವುದೂ ನಾವು ಜಾರಿ ಮಾಡಿಲ್ಲ. ಸುಮ್ಮನೆ ಇಂತಹ ಹೇಳಿಕೆಯಿಂದ ಒಡಕು ಸೃಷ್ಟಿಸುವ ಕೆಲಸ ಮಾಡಬಾರದು. ಅಲ್ಪಸಂಖ್ಯಾತರು ಕಾನೂನು ಅರ್ಥ ಮಾಡಿಕೊಳ್ಳಬೇಕು. ಯಾರೋ ಹೇಳ್ತಾರೆ ಅಂತ ಬೆಲೆ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಆಲ್ ಖೈದಾಕ್ಕೂ ಮತ್ತು ಭಾರತದ ಉಡುಪಿಯಲ್ಲಿ ಪ್ರಾರಂಭವಾದ ವಿಷಯಕ್ಕೆ ಏನು ಸಂಬಂಧ ವಿಮರ್ಶೆ ಮಾಡಬೇಕು. ಅವರ ಇಸ್ಲಾಮಿಕ್ ರಾಷ್ಟ್ರದ ಸಮಸ್ಯೆ ಬಗೆಹರಿಸಲಿ. ಭಾರತದ ಸಮಸ್ಯೆ ನಮಗೆ ಬಗೆಹರಿಸುವ ಶಕ್ತಿ ನಮಗಿದೆ ಎಂದು ಉಡುಪಿಯಲ್ಲಿ ರಘು ಪತಿ ಭಟ್ ಹೇಳಿಕೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಷಡ್ಯಂತ್ರ ಇದೆ ಎಂದು ಈ ಹಿಂದೆ ತಿಳಿಸಿದ್ದೆ. ಈಗ ಒಂದೊಂದೆ ಘಟನೆಗಳ ಮೂಲಕ ಸಾಭೀತಾಗುತ್ತಿದೆ. ಭಾರತದ ಮಾಧ್ಯಮಗಳಲ್ಲಿ ಬರುವ ಮುಂಚೆ ಪಾಕಿಸ್ತಾನದ ಮಾಧ್ಯಮದಲ್ಲಿ ಬಂದಿದೆ. ಮಂಡ್ಯದ ಹುಡುಗಿ ಅಲ್ಲಾ ಹು ಅಕ್ಬರ್ ಎಂದ ವಿದ್ಯಾರ್ಥಿನಿಗೆ ಬೆಂಬಲ ನೀಡಲಾಗಿದೆ. ಸೌಹಾರ್ದ ದೇಶವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧಿಗಳು ಮಾಡುತ್ತಿದ್ದಾರೆ. ಇಲ್ಲಿನ ದೇಶದ್ರೋಹಿಗಳ ಸಂಘಟನೆಗಳು ಬೆಂಬಲ ನೀಡುತ್ತಿದೆ. ಹಾಗಾಗಿ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೇ ಎನ್.ಐ.ಎ ತನಿಖೆಗೆ ನಾನು ಒತ್ತಾಯಿಸಿದ್ದೇನೆ. ರಾಜ್ಯದ ಪೋಲಿಸರ ಮೇಲೆ ವಿಶ್ವಾಸವಿದೆ. ಆದರೆ ಎನ್.ಐ.ಎ ಯಿಂದ ಅಂತರಾಷ್ಟ್ರೀಯ ವಿಷಯ ಹೊರಗೆ ಬರಲು ಸಾಧ್ಯವಿದೆ. ದೊಡ್ಡ ಸಂಖ್ಯೆಯಲ್ಲಿರುವ ದೇಶಪ್ರೇಮಿ ಮುಸಲ್ಮಾನರಿಗೆ ವಿನಂತಿ ಮಾಡುತ್ತೇನೆ. ಒಳ್ಳೆಯ ಮುಸಲ್ಮಾನರು ಬೆದರಿಕೆ, ಒತ್ತಡದಿಂದ ಮೌನವಾಗಿದ್ದಾರೆ. ಅದರಿಂದ ಅವರು ಹೊರಗೆ ಬರಬೇಕು. ಉಗ್ರ ಸಂಘಟನೆಯ ಸಂಪರ್ಕ, ದೇಶದ್ರೋಹಿ ಸಂಘಟನೆ, ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡದವರು ಬೆರಳೆಣಿಕೆಯಷ್ಟು ಮುಸ್ಲಿಂರು ಇದ್ದಾರೆ ಎಂದು ಅವರು ಹೇಳಿದ್ದಾರೆ.

ಸರ್ಕಾರದ ಮೌನದಿಂದ ಇಂತಹ ಘಟನೆಗಳು ನಡೆಯುತ್ತವೆ. ಇಂತಹ ವಾತಾವರಣ ನಿರ್ಮಾಣ ಮಾಡುವುದನ್ನು ನಿಲ್ಲಿಸಬೇಕು. ಅಲ್​​ಖೈದಾ ಉಗ್ರ ಸಂಘಟನೆ ಕಟ್ಟಿಕೊಂಡು ಏನೂ ಆಗಬೇಕಿಲ್ಲ. ಅಷ್ಟು ಸುಲಭವಾಗಿ ರಾಜ್ಯದವರು ಭಯೋತ್ಪಾದನೆ ಪೋಷಿಸಲ್ಲ. ಅಲ್​ಖೈದಾ ಮುಖ್ಯಸ್ಥ ಜವಾಹಿರಿ ಹೇಳಿಕೆ ನಮ್ಮಲ್ಲಿ ನಡೆಯಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:

ವಿಮರ್ಶಾತ್ಮಕ ಚಿಂತನೆಯ ಕೌಶಲ್ಯ ಅಭಿವೃದ್ಧಿಗೆ ಪ್ರಾದೇಶಿಕ ಭಾಷೆ ಕಲಿಯುವುದು ಮುಖ್ಯ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್

Published On - 3:11 pm, Wed, 6 April 22