ರಾಜ್ಯದಲ್ಲಿಂದು ಹೊಸದಾಗಿ 78 ಜನರಿಗೆ ಕೊರೊನಾ ಸೋಂಕು; ಓರ್ವ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 22, 2023 | 8:21 PM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು(ಡಿ.22) ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇನ್ನು ಬೆಂಗಳೂರು(Bengaluru)ನಗರದಲ್ಲೇ ಹೊಸದಾಗಿ 68 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸಕ್ರಿಯ ಕೇಸ್‌ಗಳ ಸಂಖ್ಯೆ 175ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿಂದು ಹೊಸದಾಗಿ 78 ಜನರಿಗೆ ಕೊರೊನಾ ಸೋಂಕು; ಓರ್ವ ಸಾವು
ಕರ್ನಾಟಕದಲ್ಲಿ ಕೋವಿಡ್ ಕೇಸ್​
Follow us on

ಬೆಂಗಳೂರು, ಡಿ.22: ರಾಜ್ಯದಲ್ಲಿ ಇಂದು ಹೊಸದಾಗಿ 78 ಜನರಿಗೆ ಕೊರೊನಾ ಸೋಂಕು (Corona virus) ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇನ್ನು ಬೆಂಗಳೂರು(Bengaluru)ನಗರದಲ್ಲೇ ಹೊಸದಾಗಿ 68 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸಕ್ರಿಯ ಕೇಸ್‌ಗಳ ಸಂಖ್ಯೆ 175ಕ್ಕೆ ಏರಿಕೆಯಾಗಿದ್ದು, 162 ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಇದ್ದರೆ, 13 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನಲೆ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇಕಡಾ 3.29 ಕ್ಕೆ ಏರಿಕೆಯಾಗಿದೆ.

ಕೋವಿಡ್ ನಿಯಂತ್ರಣಕ್ಕೆ ಸಂಪುಟ ಉಪ ಸಮಿತಿ ರಚನೆ

ರಾಜ್ಯದಲ್ಲಿ ಕೊರೊನಾ ವೈರಸ್​ ಹೆಚ್ಚಾಗುತ್ತಿರುವ ಹಿನ್ನಲೆ ರಾಜ್ಯ ಸರ್ಕಾರ ಕೋವಿಡ್​ ನಿರ್ವಹಣೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಮೂರು ಸಚಿವರನ್ನೊಳಗೊಂಡ ಸಂಪುಟ ಉಪಸಮಿತಿ ರಚಿಸಿದೆ. ಸಚಿವರಾದ ಹಚ್. ಸಿ.ಮಹದೇವಪ್ಪ, ಶರಣು ಪ್ರಕಾಶ್ ಪಾಟೀಲ್ ಹಾಗೂ ಎಂ. ಸಿ ಸುಧಾಕರ್ ಅವರನ್ನು ಉಪಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿದೆ. ಈ ಸಮಿತಿಯು ಕೊವಿಡ್ ಸೇರಿ ಸಾಂಕ್ರಾಮಿಕ ರೋಗಗಳ ಕುರಿತು ಪರಾಮರ್ಶಿಸಲಿದೆ.

ಇದನ್ನೂ ಓದಿ:ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಪುಟ ಉಪ ಸಮಿತಿ ರಚನೆ: ಸಮಿತಿಯಲ್ಲಿ ಯಾರ್ಯಾರು ಇದ್ದಾರೆ?

ಬೆಂಗಳೂರು ನಗರದ ಆಸ್ಪತ್ರೆಗಳಲ್ಲಿ ಸಿದ್ಧತೆ

ಇನ್ನು ಕೊರೊನಾ ಹಾಟ್​ಸ್ಪಾಟ್​ ಆಗುತ್ತಿರುವ ವಿಕ್ಟೋರಿಯಾ, ವಾಣಿ ವಿಲಾಸ, ಮಿಂಟೋ ಆಸ್ಪತ್ರೆಗಳಲ್ಲಿ ಸಿ‌ದ್ಧತೆ ಮಾಡಿಕೊಳ್ಳಲಾಗಿದೆ. ಆಸ್ಪತ್ರೆಯ ಒಪಿಡಿ ಬ್ಲಾಕ್​ಗಳಲ್ಲಿ ಟ್ರಯಾಜ್ ಸೆಂಟರ್ ನಿರ್ಮಾಣ ಮಾಡಲಾಗಿದೆ. ನಿತ್ಯ ಆಸ್ಪತ್ರೆ ಕ್ಯಾಂಪಸ್​ನಲ್ಲಿ ಸಿಬ್ಬಂದಿಗಳು RT-PCR ಟೆಸ್ಟ್ ಮಾಡುತ್ತಿದ್ದಾರೆ. ಅದರಂತೆ ನಿನ್ನೆ 200 ಜನರಿಗೆ ಟೆಸ್ಟ್ ಮಾಡಲಾಗಿದ್ದು, 10 ಜನರಿಗೆ ಪಾಸಿಟಿವ್​ ಕಂಡುಬಂದಿತ್ತು. ಕೊವಿಡ್ ಸೋಂಕಿತರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಪುರುಷರು, ಮಹಿಳೆಯರು, ಮಕ್ಕಳಿಗೆ ಪ್ರತ್ಯೇಕ ವಾರ್ಡ್​ ನಿರ್ಮಾಣ ಮಾಡಲಾಗಿದೆ. ಐಸಿಯುನಲ್ಲಿ 6 ಬೆಡ್​ಗಳನ್ನು ಇರಿಸಲಾಗಿದೆ. ಚಿಕಿತ್ಸೆ ನೀಡಲು ನರ್ಸ್, ವೈದ್ಯರು, ಟೆಕ್ನಷಿಯನ್ಸ್​​​ಗಳನ್ನು ಆಸ್ಪತ್ರೆ ಹೊಂದಿದೆ. ಆಸ್ಪತ್ರೆಯಲ್ಲಿ ಪಿಪಿಇ ಕಿಟ್, ಮಾಸ್ಕ್, ಆಕ್ಸಿಜನ್ ಸಿಲಿಂಡರ್, ಲಿಕ್ವಿಡ್ ಆಕ್ಸಿಜನ್ ಹಾಗೂ ಆಕ್ಸಿಜನ್ ಜನರೇಟರ್​ಗಳನ್ನ ಪರಿಶೀಲಿಸಿ ಸಿದ್ಧಗೊಳಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:59 pm, Fri, 22 December 23