AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಪುಟ ಉಪ ಸಮಿತಿ ರಚನೆ: ಸಮಿತಿಯಲ್ಲಿ ಯಾರ್ಯಾರು ಇದ್ದಾರೆ?

Covid cabinet sub committee: ಕರ್ನಾಟಕದಲ್ಲಿ ಮತ್ತೆ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೋವಿಡ್​ ನಿರ್ವಹಣೆಗೆ ಸಂಪುಟ ಉಪ ಸಮಿತಿ ರಚಿಸಿದೆ. ಹಾಗಾದ್ರೆ, ಈ ಸಂಪುಟ ಉಪ ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ? ಈ ಸಮಿತಿಯ ಕೆಲಸ-ಕಾರ್ಯಗಳೇನು? ಎನ್ನುವ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಪುಟ ಉಪ ಸಮಿತಿ ರಚನೆ: ಸಮಿತಿಯಲ್ಲಿ ಯಾರ್ಯಾರು ಇದ್ದಾರೆ?
ವಿಧಾನಸೌಧ
TV9 Web
| Edited By: |

Updated on:Dec 22, 2023 | 5:09 PM

Share

ಬೆಂಗಳೂರು, (ಡಿಸೆಂಬರ್ 22): ಕೋವಿಡ್​ (Coronavirus) ನಿರ್ವಹಣೆಗೆ ರಾಜ್ಯ ಸರ್ಕಾರ ಸಂಪುಟ ಉಪ ಸಮಿತಿ(cabinet sub committee) ರಚಿಸಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (dinesh gundu rao) ಅಧ್ಯಕ್ಷತೆಯಲ್ಲಿ ಮೂರು ಸಚಿವರನ್ನೊಳಗೊಂಡ ಸಂಪುಟ ಉಪಸಮಿತಿ ರಚಿಸಲಾಗಿದೆ. ಸಚಿವರಾದ ಹಚ್. ಸಿ.ಮಹದೇವಪ್ಪ, ಶರಣು ಪ್ರಕಾಶ್ ಪಾಟೀಲ್ ಹಾಗೂ ಎಂ. ಸಿ ಸುಧಾಕರ್ ಅವರನ್ನು ಉಪಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿದೆ. ಈ ಸಮಿತಿಯು ಕೊವಿಡ್ ಸೇರಿ ಸಾಂಕ್ರಾಮಿಕ ರೋಗಗಳ ಕುರಿತು ಪರಾಮರ್ಶಿಸಲಿದೆ.

ರಾಜ್ಯದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ(ಡಿಸೆಂಬರ್ 21) ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ಮಾಡಿದ್ದರು. ಈ ಸಭೆಯಲ್ಲಿ ಅಧಿಕಾರಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದರು. ಅಲ್ಲದೇ ಕೋವಿಡ್ ನಿರ್ವಹಣೆಗೆಂದು ಒಂದು ಸಂಪುಟ ಉಪಸಮಿತಿ ರಚಿಸುವುದಾಗಿ ಹೇಳಿದ್ದರು. ಈ ಬಗ್ಗೆ ನಿನ್ನೆ ನಡೆದ ಸಚಿವ ಸಂಪುಟದಲ್ಲೂ ಸಮಿತಿ ರಚನೆಗೆ ತೀರ್ಮಾನಿಸಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕೊರೊನಾ: ಆಸ್ಪತ್ರೆಗಳಲ್ಲಿ ಸರ್ವ ಸಿದ್ಧ

ಅದರಂತೆ ಇದೀಗ ರಾಜ್ಯ ಸರ್ಕಾರ ಅಧಿಕೃತವಾಗಿ ಸಂಪುಟ ಉಪಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದೆ. ಇನ್ನು ಈ ಸಮಿತಿ ಔಷಧ ಖರೀದಿ, ಮಾಸ್ಕ್​ ಕಡ್ಡಾಯ ಸೇರಿದಂತೆ ಎಲ್ಲಾ ವಿಷಯವನ್ನು ನಿರ್ಧರಿಸಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:39 pm, Fri, 22 December 23

ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​