Tomato Price Hike: ಟೊಮೆಟೊ ಬೆಲೆ ಏರಿಕೆ; ಲಕ್ಷ, ಕೋಟಿ ರೂಪಾಯಿಗಳಲ್ಲಿ ಆದಾಯ ಗಳಿಸುತ್ತಿದ್ದಾರೆ ಕರ್ನಾಟಕದ ರೈತರು

ಕರ್ನಾಟಕದ ಮಂಡ್ಯ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೈತರು ಟೊಮೆಟೊ ಬೆಳೆಯನ್ನು ಮಾರಾಟ ಮಾಡುವ ಮೂಲಕ ಲಕ್ಷ ಅಥವಾ ಕೋಟಿ ರೂಪಾಯಿ ಗಳಿಸುತ್ತಿದ್ದಾರೆ.

Tomato Price Hike: ಟೊಮೆಟೊ ಬೆಲೆ ಏರಿಕೆ; ಲಕ್ಷ, ಕೋಟಿ ರೂಪಾಯಿಗಳಲ್ಲಿ ಆದಾಯ ಗಳಿಸುತ್ತಿದ್ದಾರೆ ಕರ್ನಾಟಕದ ರೈತರು
ಟೊಮೆಟೊ

Updated on: Jul 26, 2023 | 6:19 PM

ಬೆಂಗಳೂರು: ರಿಸ್ಕ್ ತೆಗೆದುಕೊಂಡು ದೊಡ್ಡ ಪ್ರಮಾಣದಲ್ಲಿ ಟೊಮೆಟೊ (Tomato) ಬೆಳೆದ ಕರ್ನಾಟಕದ ರೈತರಿಗೆ ಈ ವರ್ಷ ಭಾರಿ ಲಾಭ ದೊರೆತಿದೆ. ಪ್ರತಿ ವರ್ಷ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಕೋಲಾರ ಜಿಲ್ಲೆಯ ಅನೇಕ ರೈತರು ಟೊಮೆಟೊ ಬೆಳೆಯನ್ನು ಸೂಕ್ತ ದರ ಸಿಗದೆ ಬೇಸರದಿಂದ ಬೆಂಗಳೂರಿನಿಂದ ಚೆನ್ನೈಗೆ ಸಂಪರ್ಕಿಸುವ ಜನನಿಬಿಡ ಹೆದ್ದಾರಿಯಲ್ಲಿ ರಸ್ತೆಗೆ ಎಸೆಯುವ ಬಗ್ಗೆ ವರದಿಯಾಗುತ್ತಿರುತ್ತದೆ. ಇದು ದುರದೃಷ್ಟಕರ. ಆದರೆ, ಇಂದು ಟೊಮೆಟೊದ ತೀವ್ರ ಕೊರತೆಯಿರುವ ಸಮಯದಲ್ಲಿ ಇದನ್ನು ಪೂರೈಸುವ ಮೂಲಕ ಅನೇಕ ರೈತರು ಲಕ್ಷಗಟ್ಟಲೆ ಸಂಪಾದನೆ ಮಾಡಿ ಖುಷಿಯಾಗಿದ್ದಾರೆ.

ಲಕ್ಷ, ಕೋಟಿ ರೂ. ಲಾಭ ಪಡೆಯುತ್ತಿರುವ ಟೊಮೆಟೊ ಬೆಳೆಗಾರರು

ಕರ್ನಾಟಕದ ಮಂಡ್ಯ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೈತರು ಟೊಮೆಟೊ ಬೆಳೆಯನ್ನು ಮಾರಾಟ ಮಾಡುವ ಮೂಲಕ ಲಕ್ಷ ಅಥವಾ ಕೋಟಿ ರೂಪಾಯಿ ಗಳಿಸುತ್ತಿದ್ದಾರೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ. ಒಬ್ಬ ರೈತ 20 ದಿನಗಳ ಅವಧಿಯಲ್ಲಿ 1,000 ಬಾಕ್ಸ್‌ಗಳನ್ನು (15 ಕೆಜಿ ತೂಕ) ಮಾರಾಟ ಮಾಡಿದ್ದು, ಪ್ರತಿ ಬಾಕ್ಸ್ 1,800 ರೂಪಾಯಿಗೆ ಮಾರಾಟವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಅದೇ ರೀತಿ ಮಂಡ್ಯ ಜಿಲ್ಲೆಯ ಮತ್ತೊಬ್ಬ ರೈತ ಟೊಮೆಟೊ ಮಾರಾಟ ಮಾಡಿ 4 ಕೋಟಿ ರೂಪಾಯಿ ಗಳಿಸಿದ್ದಾರಂತೆ. ಆದರೆ, ಹೆಚ್ಚಿನ ರೈತರು ಬೆಳೆದ ಬೆಳೆ ಕೀಟ ಬಾಧೆಯಿಂದ ನಾಶವಾಗಿವೆ. ಅನೇಕ ರೈತರು ಬೆಳೆದಿರುವ ಟೊಮೆಟೊ ಸುಮಾರು ಶೇ 35 ರಿಂದ 40 ರಷ್ಟು ಕೀಟಗಳ ದಾಳಿಗೆ ಹಾಳಾಗಿದ್ದು, ಲಾಭ ಕಡಿಮೆಯಾಗಿದೆ ಎನ್ನಲಾಗಿದೆ.

ಬೇರೆ ರಾಜ್ಯಗಳಿಂದಲೂ ಟೊಮೆಟೊಗೆ ಬೇಡಿಕೆ

ಟೊಮೆಟೊ ಕೊರತೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಹೀಗಾಗಿ ಹಲವು ರಾಜ್ಯಗಳು ಖರೀದಿಗೆ ಮುಂದಾಗಿವೆ ಎಂದು ವರದಿಯಾಗಿದೆ. ಉತ್ತಮ ದರ್ಜೆಯ ಅಥವಾ ಉತ್ಕೃಷ್ಟ ವಿಧದ ಟೊಮೆಟೊಗಳನ್ನು ಇತರ ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಟೊಮೆಟೊ ಬೆಲೆ ಏರಿಕೆಯಾಗಲು ಇದು ಕೂಡ ಒಂದು ಕಾರಣವಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ತಿಳಿಸಿದೆ.

ಇದನ್ನೂ ಓದಿ: Tomato Price Hike: ಟೊಮೆಟೊ ಕೃಷಿಯಿಂದ 1.8 ಕೋಟಿ ರೂ. ಗಳಿಸಿದ ತೆಲಂಗಾಣದ ರೈತ!

ಉತ್ಕೃಷ್ಟ ವಿಧದ ಟೊಮೆಟೊ ಪ್ರತಿ ಬಾಕ್ಸ್‌ಗೆ 1,800 ರಿಂದ 2,000 ರೂ.ಗೆ ಮಾರಾಟವಾದರೆ, ಉಳಿದವು 1.200 ರೂಪಾಯಿಗಳಿಂದ 1,500 ರೂವರೆಗೆ ಮಾರಾಟವಾಗಿವೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:18 pm, Wed, 26 July 23

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us