ಕರ್ನಾಟಕಕ್ಕೆ 6862 ಎಲೆಕ್ಟ್ರಿಕ್ ಬಸ್: ಪರಿಸರ ಸ್ನೇಹಿ ವಾತಾವರಣಕ್ಕೆ ಮೋದಿ ಸರ್ಕಾರ ಬದ್ಧ ಎಂದ ತೇಜಸ್ವಿ ಸೂರ್ಯ

ಫೇಮ್ (FAME) ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳ ನಿಯೋಜನೆ ಕುರಿತು ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಅವರು ಸದನದಲ್ಲಿ ಧ್ವನಿ ಎತ್ತಿದ್ದು, ಇದಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ರಾಜ್ಯ ಖಾತೆ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮಾ ಅವರು ಉತ್ತರ ನೀಡಿದ್ದಾರೆ. ಹಾಗಾದ್ರೆ, ಫೇಮ್-2 ಯೋಜನೆಯಡಿ ಕರ್ನಾಟಕಕ್ಕೆ ಎಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲಾಗಿದೆ ಎನ್ನುವ ಮಾಹಿತಿ ಇಲ್ಲಿದೆ.

ಕರ್ನಾಟಕಕ್ಕೆ 6862 ಎಲೆಕ್ಟ್ರಿಕ್ ಬಸ್: ಪರಿಸರ ಸ್ನೇಹಿ ವಾತಾವರಣಕ್ಕೆ ಮೋದಿ ಸರ್ಕಾರ ಬದ್ಧ ಎಂದ ತೇಜಸ್ವಿ ಸೂರ್ಯ
Tejaswi Surya

Updated on: Dec 02, 2025 | 10:26 PM

ನವದೆಹಲಿ, (ಡಿಸೆಂಬರ್ 02): ಫೇಮ್-2 ಯೋಜನೆಯಡಿ ಕರ್ನಾಟಕಕ್ಕೆ (Karnataka) ಪ್ರಸ್ತುತ 6,862 ಮತ್ತು ಪಿ.ಎಂ. ಇ-ಡ್ರೈವ್ ಯೋಜನೆಯಡಿ 13,800 ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲಾಗಿದೆ. ಇವುಗಳಲ್ಲಿ ಬೆಂಗಳೂರು ನಗರಕ್ಕೆ (ಬಿಎಂಟಿಸಿ) ಫೇಮ್-2 ಯೋಜನೆಯಡಿಯಲ್ಲಿ 1,221 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವಾಲಯವು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejaswi Surya) ಇಂದು (ಡಿಸೆಂಬರ್ 02) ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದೆ.

ಅಲ್ಲದೆ, ಪಿ.ಎಂ. ಇ-ಡ್ರೈವ್ ಯೋಜನೆಯ ಮೊದಲ ಹಂತದ 10,900 ಇ-ಬಸ್‌ಗಳ ಹಂಚಿಕೆಯಲ್ಲಿ ಬೆಂಗಳೂರಿಗೆ 4,500 ಇ-ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಫೇಮ್-2 ಯೋಜನೆಗೆ ಒಟ್ಟು 517.23 ಕೋಟಿ ಅನುದಾನವನ್ನು ನೀಡಲಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ರಾಜ್ಯ ಖಾತೆ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮಾ ಸದನಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಒದಿ: ಬೆಂಗಳೂರಲ್ಲಿ ಹಳೆ ವಾಹನಗಳ ಸಂಖ್ಯೆ ಹೆಚ್ಚಳ: ಗುಜರಿಗೆ ಹಾಕಲು ಮಾಲೀಕರು ಹಿಂದೇಟು


ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ಪತ್ರಿಕಾ ಪ್ರಕರಣ ಹೊರಡಿಸಿದ್ದು, ಕರ್ನಾಟಕಕ್ಕೆ ಹಂಚಿಕೆಯಾದ ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆಯ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ, ಪರಿಸರ ಸ್ನೇಹಿ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.