ಬೆಂಗಳೂರಲ್ಲಿ ಹಳೆ ವಾಹನಗಳ ಸಂಖ್ಯೆ ಹೆಚ್ಚಳ: ಗುಜರಿಗೆ ಹಾಕಲು ಮಾಲೀಕರು ಹಿಂದೇಟು
ಕರ್ನಾಟಕದಲ್ಲಿ 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಸೇರಿದಂತೆ ಸ್ವಂತ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬ ನಿಯಮ ಇದೆ. ಆದರೆ ವಾಹನಗಳ ಮಾಲೀಕರು ಮಾತ್ರ ಇದಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಇದರಿಂದ ನಗರದಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚುತ್ತಿದೆ ಎಂದು ಪರಿಸರ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು, ಡಿಸೆಂಬರ್ 1: ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ (bangaluru) ಹಳೆಯ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದರಿಂದ ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣವು ಕೂಡ ಹೆಚ್ಚಾಗುತ್ತಿದ್ದು, ವಾಹನ ಮಾಲೀಕರು ಮಾತ್ರ ತಮ್ಮ ಹಳೆಯ ವಾಹನಗಳನ್ನು (old vehicles) ಗುಜರಿಗೆ ಹಾಕಲು ಹಿಂದೇಟು ಹಾಕುತ್ತಿದ್ದಾರೆ.
2023ರಲ್ಲೇ ಗುಜರಿ ನೀತಿ ಜಾರಿ
ರಾಜ್ಯದಲ್ಲಿ ಹಳೆಯ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರ ದೇಶದೆಲ್ಲೆಡೆ 2023 ಏಪ್ರಿಲ್ 1 ರಿಂದ ಗುಜರಿ ನೀತಿ ಜಾರಿಯಾಗಿದ್ದು, 15 ವರ್ಷ ದಾಟಿದ ದೇಶದ ಎಲ್ಲಾ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬ ನಿಯಮವಿದೆ. ಎನ್ಜಿಟಿ ರೂಲ್ಸ್ ಪ್ರಕಾರ ದೆಹಲಿಯಲ್ಲಿ 10 ವರ್ಷ ಮೇಲ್ಪಟ್ಟ ಪೆಟ್ರೋಲ್ ವಾಹನ ಮತ್ತು 15 ವರ್ಷ ಮೇಲ್ಪಟ್ಟ ಡಿಸೇಲ್ ವಾಹನಕ್ಕೆ ನಿಷೇಧ ಹೇರಲಾಗಿದೆ.
ಇದನ್ನೂ ಓದಿ: ಬೆಂಗಳೂರಿನದ್ದು ಅತ್ಯಂತ ಕೆಟ್ಟ ಟ್ರಾಫಿಕ್, ನಿಷ್ಪ್ರಯೋಜಕ ಸಂಚಾರ ಪೊಲೀಸರು: ಉತ್ತರ ಪ್ರದೇಶದ ಎಸ್ಪಿ ಸಂಸದ ಆಕ್ರೋಶ
ರಾಜ್ಯದಲ್ಲೂ 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಮತ್ತು ಸ್ವಂತ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬ ನಿಯಮ ಇದೆ. ತಮ್ಮ ಸ್ವಂತ ವಾಹನಗಳನ್ನು ಗುಜರಿಗೆ ಹಾಕಿದರೆ ಹೊಸ ವಾಹನ ಖರೀದಿಸುವಾಗ ಸಬ್ಸಿಡಿ ಕೂಡ ನೀಡುತ್ತಿದ್ದಾರೆ. ಆದರೆ 15 ವರ್ಷ ಮೇಲ್ಪಟ್ಟ ತಮ್ಮ ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ವಾಹನ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ.
ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ್ ಹೇಳಿದ್ದಿಷ್ಟು
ಈ ಬಗ್ಗೆ ಮಾತಾನಾಡಿರುವ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ್, ನಮ್ಮ ರಾಜ್ಯದಲ್ಲಿ ಕಡ್ಡಾಯವಾಗಿ ಹಳೆಯ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬ ರೂಲ್ಸ್ ಇಲ್ಲ, ಹಾಗಾಗಿ ವಾಹನ ಮಾಲೀಕರು ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ಮುಂದಾಗುತ್ತಿಲ್ಲ. ಕಳೆದ ವರ್ಷ ಸುಮಾರು 4 ಸಾವಿರ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಬೆಂಗಳೂರಲ್ಲಿ 15 ವರ್ಷ ಮೀರಿದ ಬೈಕ್ಗಳ ಸಂಖ್ಯೆ – 24,46,372 ಇದ್ದರೆ, ಕಾರುಗಳ ಸಂಖ್ಯೆ 7,059,39, ಲಾರಿ, ಬಸ್ ಸೇರಿದಂತೆ ಇತರೆ ವಾಹನಗಳ ಸಂಖ್ಯೆ 5,93,028ರಷ್ಟಿವೆ. ಬೆಂಗಳೂರಲ್ಲಿ 15 ವರ್ಷ ಮೀರಿದ 37,45,339 ಲಕ್ಷ ವಾಹನಗಳಿವೆಯಂತೆ.
ಹಳೆಯ ವಾಹನಗಳನ್ನು ಗುಜರಿಗೆ ಹಾಕುವುದು ಒಳ್ಳೆಯದು: ಅರುಣ್ ಪ್ರಸಾದ್
ಕರ್ನಾಟಕದಲ್ಲೇ ಅದರಲ್ಲೂ ಬೆಂಗಳೂರಲ್ಲಿ ಅತೀ ಹೆಚ್ಚು ಹಳೆಯ ವಾಹನಗಳಿವೆ. ಒಟ್ಟು 37 ಲಕ್ಷ ವಾಹನಗಳಿದ್ದು, ಅದರಲ್ಲಿ 24 ಲಕ್ಷ ದ್ವಿಚಕ್ಷ ವಾಹನಗಳು, 7 ಲಕ್ಷ ಕಾರುಗಳಿವೆ. ಈ ಬಗ್ಗೆ ಮಾತಾನಾಡಿರುವ ಪರಿಸರ ಹೋರಾಟಗಾರ ಅರುಣ್ ಪ್ರಸಾದ್, ಹಳೆಯ ವಾಹನಗಳಿಂದ ವಾಯುಮಾಲಿನ್ಯ ಹೆಚ್ಚಾಗುತ್ತದೆ, ಹಾಗಾಗಿ ಹಳೆಯ ವಾಹನಗಳನ್ನು ಗುಜರಿಗೆ ಹಾಕುವುದು ಒಳ್ಳೆಯದು ಎಂದಿದ್ದಾರೆ.
ಇದನ್ನೂ ಓದಿ: ಇದು ಊಟಿ ಅಲ್ಲ, ಬೆಂಗಳೂರು: ನಗರದಲ್ಲಿ ಮೋಡಿ ಮಾಡಿದ ಈ ವಾತಾವರಣ
ಒಟ್ಟಿನಲ್ಲಿ ಹಳೆಯ ವಾಹನಗಳಿಂದ ನಗರದಲ್ಲಿ ವಾಯು ಮಾಲಿನ್ಯದ ಪ್ರಮಾಣವು ಹೆಚ್ಚಾಗುತ್ತಿದ್ದು, ತಮ್ಮ ತಮ್ಮ ಹಳೆಯ ವಾಹನಗಳನ್ನು ಗುಜರಿಗೆ ಹಾಕುವುದು ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ ಹಳೆ ವಾಹನಗಳ ಮಾಲೀಕರು ಏನು ಮಾಡುತ್ತಾರೆ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:33 pm, Mon, 1 December 25



