Train Cancelled: ಏಪ್ರಿಲ್ 10ರಿಂದ ಬೆಂಗಳೂರಿನಲ್ಲಿ ಈ ರೈಲಗಳ ಸಂಚಾರ ಭಾಗಶಃ ರದ್ದು, ಮಾರ್ಗ ಬದಲಾವಣೆ: ಇಲ್ಲಿದೆ ವಿವರ
ಕೆಎಸ್‌ಆರ್ ಬೆಂಗಳೂರು ನಿಲ್ದಾಣದ ಯಾರ್ಡ್ನ ಲೈನ್-2 ರಲ್ಲಿ ಗರ್ಡರ್ನ ಅಳವಡಿಕೆಗೆ ಸಂಬಂಧಿಸಿದಂತೆ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕಾಮಗಾರಿ ಆರಂಭವಾಗುವುದರಿಂದ ಏಪ್ರಿಲ್ 10 ರಿಂದ ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತದೆ.
ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು (KSR Bengaluru) ನಿಲ್ದಾಣದ ಯಾರ್ಡ್ನ ಲೈನ್-2 ರಲ್ಲಿ ಗರ್ಡರ್ನ ಅಳವಡಿಕೆಗೆ ಸಂಬಂಧಿಸಿದಂತೆ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕಾಮಗಾರಿ ಆರಂಭವಾಗುವುದರಿಂದ ಏಪ್ರಿಲ್ 10 ರಿಂದ ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತದೆ. ಕೆಲವು ರೈಲುಗಳ ಮಾರ್ಗ ಬದಲಾಯಿಸಲಾಗುತ್ತದೆ. ಮತ್ತೆ ಕೆಲವು ರೈಲುಗಳನ್ನು ಶೆಡ್ಯೂಲ್ ಮಾಡಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ.
ರದ್ದುಗೊಳ್ಳಬಹುದಾದ ರೈಲುಗಳು
1. ಚಾಮರಾಜನಗರ ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16220) : ಏಪ್ರಿಲ್ 10 ರಂದು ತಿರುಪತಿಯಿಂದ ಹೊರಡುವ ರೈಲು ವೈಟ್‌ಫೀಲ್ಡ್ – ಚಾಮರಾಜನಗರ ನಡುವೆ ರದ್ದುಗೊಳ್ಳುವ ಸಾಧ್ಯತೆ ಇದೆ.
2. ನಾಂದೇಡ್ – ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ. 16594) : ಏಪ್ರಿಲ್ 10 ರಂದು ನಾಂದೇಡ್‌ನಿಂದ ಹೊರಡುವ ರೈಲು ಯಲಹಂಕ-ಕೆಎಸ್‌ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಗೊಳ್ಳುತ್ತದೆ.
3. ದೇವನಹಳ್ಳಿ – ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ (ರೈಲು ಸಂಖ್ಯೆ. 06532): ಏಪ್ರಿಲ್ 10 ರಂದು ದೇವನಹಳ್ಳಿಯಿಂದ ಹೊರಡಲಿದ್ದು, ಬೆಂಗಳೂರು ಕಂಟೋನ್ಮೆಂಟ್-ಕೆಎಸ್‌ಆರ್ ಬೆಂಗಳೂರು ನಡುವೆ ರದ್ದುಗೊಳ್ಳಬಹುದು.
4. ಕೆಎಸ್‌ಆರ್ ಬೆಂಗಳೂರು-ದೇವನಹಳ್ಳಿ ಮೆಮು ವಿಶೇಷ (ರೈಲು ಸಂಖ್ಯೆ. 06531) : ಕೆಎಸ್‌ಆರ್ ಬೆಂಗಳೂರಿನಿಂದ ಏಪ್ರಿಲ್ 11 ರಂದು ಹೊರಡಲಿದ್ದು, ಕೆಎಸ್‌ಆರ್ ಬೆಂಗಳೂರು-ಬೆಂಗಳೂರು ಕಂಟೋನ್ಮೆಂಟ್ ನಡುವೆ ಭಾಗಶಃ ರದ್ದಾಗಲಿದೆ.
5. ಎರ್ನಾಕುಲಂ – ಕೆಎಸ್‌ಆರ್ ಬೆಂಗಳೂರು ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ. 12678) : ಎರ್ನಾಕುಲಂನಿಂದ ಏಪ್ರಿಲ್ 10 ರಂದು ಹೊರಡುತ್ತದೆ. ಈ ರೈಲು ಬೈಯ್ಯಪ್ಪನಹಳ್ಳಿ-ಕೆಎಸ್‌ಆರ್ ಬೆಂಗಳೂರು ನಡುವಿನ ಸಂಚಾರ ರದ್ದಾಗಬಹದು. ಈ ರೈಲು ಬೈಯ್ಯಪ್ಪನಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ.
6. ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ. 12677): ಏಪ್ರಿಲ್ 11 ರಂದು ಕೆಎಸ್‌ಆರ್ ಬೆಂಗಳೂರು-ಬೈಯ್ಯಪ್ಪನಹಳ್ಳಿ ನಡುವೆ ಭಾಗಶಃ ರದ್ದುಗೊಳ್ಳುತ್ತದೆ. ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಬೆಳಗ್ಗೆ 6.10 ಕ್ಕೆ ಹೊರಡುತ್ತದೆ.
7: ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ಮೆಮು ಸ್ಪೆಷಲ್ (ರೈಲು ಸಂಖ್ಯೆ. 01772) : ಏಪ್ರಿಲ್ 11 ರಂದು ಮಾರಿಕುಪ್ಪಂನಿಂದ ಹೊರಡುತ್ತದೆ. ಕೆಎಸ್‌ಆರ್ ಬೆಂಗಳೂರು ಮತ್ತು ಬೆಂಗಳೂರು- ಬೆಂಗಳೂರು ಕಂಟೋನ್ಮೆಂಟ್ ನಡುವೆ ಭಾಗಶಃ ರದ್ದಾಗಲಿದೆ.
8. ಕೆಎಸ್‌ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ವಿಶೇಷ (ರೈಲು ಸಂಖ್ಯೆ. 06396): ಏಪ್ರಿಲ್ 11 ರಂದು ಕೆಎಸ್‌ಆರ್ ಬೆಂಗಳೂರಿನಿಂದ ಹೊರಡಲಿದ್ದು, ಕೆಎಸ್‌ಆರ್ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಅದು ನಿಗದಿತ ಸಮಯದಲ್ಲಿ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಡಲಿದೆ.
ರೈಲುಗಳ ಮಾರ್ಗಬದಲಾವಣೆ
1. ಮೈಸೂರು – ಎಂಜಿಆರ್ ಚೆನ್ನೈ ಸೆಂಟ್ರಲ್ ಕಾವೇರಿ ಡೈಲಿ ಎಕ್ಸ್‌ಪ್ರೆಸ್: ಏಪ್ರಿಲ್ 10 ರಂದು ಮೈಸೂರಿನಿಂದ ಹೊರಡುತ್ತದೆ. ಇದು ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಬಾಣಸವಾಡಿ, ಬೈಯ್ಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರದ ಮೂಲಕ ಸಂಚರಿಸುತ್ತದೆ. ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಿಲುಗಡೆ ಇರುವುದಿಲ್ಲ.
2. ಎಂಜಿಆರ್ ಚೆನ್ನೈ ಸೆಂಟ್ರಲ್: ಏಪ್ರಿಲ್ 10 ರಂದು ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ಹೊರಡುವ ಮೈಸೂರು ಕಾವೇರಿ ಡೈಲಿ ಎಕ್ಸ್‌ಪ್ರೆಸ್ ಅನ್ನು ಕೃಷ್ಣರಾಜಪುರಂ, ಬೈಯ್ಯಪ್ಪನಹಳ್ಳಿ, ಬಾಣಸವಾಡಿ, ಯಶವಂತಪುರ ಮತ್ತು ಕೆಎಸ್‌ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸುತ್ತದೆ. ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಿಲುಗಡೆ ಇರುವುದಿಲ್ಲ.
3. ಕೆಎಸ್‌ಆರ್ ಬೆಂಗಳೂರು – ನಾಂದೇಡ್ ಡೈಲಿ ಎಕ್ಸ್‌ಪ್ರೆಸ್: ಏಪ್ರಿಲ್ 10 ರಂದು ಕೆಎಸ್‌ಆರ್ ಬೆಂಗಳೂರಿನಿಂದ ಹೊರಡುವ ಸಮಯವನ್ನು 85 ನಿಮಿಷಗಳ ಕಾಲ ಮುಂದಕ್ಕೆ ಹಾಕಲಾಗಿದೆ. ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ ಮತ್ತು ಯಲಹಂಕ ಮೂಲಕ ಮಾರ್ಗವಾಗಿ ಸಂಚರಿಸುತ್ತದೆ. ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಿಲುಗಡೆ ಇರುವುದಿಲ್ಲ.
4. ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮೈಸೂರು ವಿಶೇಷ ಎಕ್ಸ್‌ಪ್ರೆಸ್: ಏಪ್ರಿಲ್ 10 ರಂದು ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಹೊರಟು ಬಾಣಸವಾಡಿ, ಹೆಬ್ಬಾಳ, ಯಶವಂತಪುರ ಮತ್ತು ಕೆಎಸ್‌ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸುತ್ತದೆ. ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಿಲುಗಡೆ ಇರುವುದಿಲ್ಲ.
5. ಬಂಗಾರಪೇಟೆ – ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ (ರೈಲು ಸಂಖ್ಯೆ. 16521): ಏಪ್ರಿಲ್ 10 ರಂದು ಬಂಗಾರಪೇಟೆಯಿಂದ ಹೊರಟು ಕೃಷ್ಣರಾಜಪುರಂ, ಬೈಯ್ಯಪ್ಪನಹಳ್ಳಿ, ಬಾಣಸವಾಡಿ, ಹೆಬ್ಬಾಳ, ಯಶವಂತಪುರ ಮತ್ತು ಕೆಎಸ್‌ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ. ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಿಲುಗಡೆ ಇರುವುದಿಲ್ಲ.
ರಿ ಶೇಡ್ಯೂಲಿಂಗ್
ಮೈಲಾಡುತುರೈ – ಮೈಸೂರು ಡೈಲಿ ಎಕ್ಸ್‌ಪ್ರೆಸ್, ಏಪ್ರಿಲ್ 10 ರಂದು ಮೈಲಾಡುತುರೈಯಿಂದ ಹೊರಡುವ ಸಮಯವನ್ನು 90 ನಿಮಿಷಗಳ ಕಾಲ ಮುಂದಕ್ಕೆ ಹಾಕಲಾಗಿದೆ. ಎಂಜಿಆರ್ ಚೆನ್ನೈ ಸೆಂಟ್ರಲ್ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್, ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ಏಪ್ರಿಲ್ 10 ರಂದು ಹೊರಡಲಿದ್ದು, ದಕ್ಷಿಣ ರೈಲ್ವೆ ಮಾರ್ಗದಲ್ಲಿ 120 ನಿಮಿಷಗಳ ಕಾಲ ನಿಧಾನವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:47 am, Sat, 8 April 23