ಎಚ್ಎಎಲ್ ನಲ್ಲಿ 3ನೇ ಎಲ್‌ಸಿಎ ಉತ್ಪಾದನೆ ಉದ್ಘಾಟಿಸಿದ ರಕ್ಷಣಾ ಕಾರ್ಯದರ್ಶಿ: 100ನೇ ಸುಖೋಯಿ-30 ಎಂಕೆಐ ಆರ್‌ಓಎಚ್ ವಿಮಾನ ವಾಯುಪಡೆಗೆ ಹಸ್ತಾಂತರ

ಎಪ್ರಿಲ್ 7 ರಂದು ಎಚ್ಎಎಲ್​ನಲ್ಲಿ 3ನೇ ಎಲ್‌ಸಿಎ ಉತ್ಪಾದನೆ ಉದ್ಘಾಟಿಸಿದ ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆಯವರು 100ನೇ ಸುಖೋಯಿ-30 ಎಂಕೆಐ ಆರ್‌ಓಎಚ್ ವಿಮಾನ ವಾಯುಪಡೆಗೆ ಹಸ್ತಾಂತರಿಸಿದರು.

ಎಚ್ಎಎಲ್ ನಲ್ಲಿ 3ನೇ ಎಲ್‌ಸಿಎ ಉತ್ಪಾದನೆ ಉದ್ಘಾಟಿಸಿದ ರಕ್ಷಣಾ ಕಾರ್ಯದರ್ಶಿ: 100ನೇ ಸುಖೋಯಿ-30 ಎಂಕೆಐ ಆರ್‌ಓಎಚ್ ವಿಮಾನ ವಾಯುಪಡೆಗೆ ಹಸ್ತಾಂತರ
ಎಚ್ಎಎಲ್​ನಲ್ಲಿ 3ನೇ ಎಲ್‌ಸಿಎ ಉತ್ಪಾದನೆ ಉದ್ಘಾಟಿಸಿದ ರಕ್ಷಣಾ ಕಾರ್ಯದರ್ಶಿ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Apr 08, 2023 | 9:05 AM

ನಾಸಿಕ್/ಬೆಂಗಳೂರು: ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ(Giridhar Aramane) ಅವರು ಮೂರನೇ ಎಲ್‌ಸಿಎ(LCA) ಉತ್ಪಾದನಾ ಸಾಲನ್ನು ಉದ್ಘಾಟಿಸಿ, 100ನೇ ಸುಖೋಯಿ-30 ಎಂಕೆಐ ಆರ್‌ಒಎಚ್ ವಿಮಾನವನ್ನ ಏರ್ ವೈಸ್ ಮಾರ್ಷಲ್ ಸರಿನ್, ವಿಎಸ್ಎಂ, ಅಸಿಸ್ಟೆಂಟ್ ಚೀಫ್ ಆಫ್ ಏರ್ ಸ್ಟಾಫ್, ಭಾರತೀಯ ವಾಯುಪಡೆ ಅವರಿಗೆ ಎಚ್ಎಎಲ್‌ನ(HAL) ನಾಸಿಕ್ ವಿಭಾಗದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಎಪ್ರಿಲ್ 7 ಶುಕ್ರವಾರದಂದು ಹಸ್ತಾಂತರಿಸಿದರು. ಈ ವೇಳೆ ಎಂಐಜಿ ಕಾಂಪ್ಲೆಕ್ಸ್ ಸಿಇಓ, ಸಾಕೇತ್ ಚತುರ್ವೇದಿಯವರು 100ನೇ ಆರ್‌ಒಎಚ್ ವಿಮಾನದ ಸಿಗ್ನಲ್ ಔಟ್ ಸರ್ಟಿಫಿಕೇಟ್ (SOS) ಅನ್ನು ಏರ್ ವೈಸ್ ಮಾರ್ಷಲ್ ಸರಿನ್ ಅವರಿಗೆ ಎಚ್ಎಎಲ್ ಸಿಎಂಡಿ ಸಿಬಿ ಅನಂತಕೃಷ್ಣನ್ ಹಾಗೂ ಇತರ ಹಿರಿಯ ಅಧಿಕಾರಿಗಳ ಉಪಸ್ಥಿತರಿದ್ದರು.

ಇನ್ನು ಈ ವೇಳೆ ಮಾತನಾಡಿದ ರಕ್ಷಣಾ ಕಾರ್ಯದರ್ಶಿಯವರು ‘ಸು-30 ಎಂಕೆಐಗಾಗಿ ಆರ್‌ಒಎಚ್ ವ್ಯವಸ್ಥೆಯನ್ನು ಆರಂಭಿಸಿದ್ದಕ್ಕೆ ಹಾಗೂ ಎಲ್‌ಸಿಎ ನೂತನ ಉತ್ಪಾದನಾ ಸಾಲು ಆರಂಭಿಸಿದ್ದಕ್ಕಾಗಿ ಅಭಿನಂದಿಸಿದರು. ‘ಎಚ್ಎಎಲ್ ಭಾರತದ ಭದ್ರತೆಯ ಅಗತ್ಯತೆಗಳನ್ನು ಪೂರೈಸುತ್ತಿದೆ ಎಂದು ಅಭಿಪ್ರಾಯ ಪಟ್ಟರು. “ಭಾರತ ಸರ್ಕಾರ ಹಲವು ಆತ್ಮನಿರ್ಭರ ಭಾರತಕ್ಕಾಗಿ ಹಲವು ನೀತಿಗಳನ್ನು ಜಾರಿಗೆ ತಂದಿದೆ. ಇದು ಎಚ್ಎಎಲ್ ಅನ್ನು ಒಂದು ಪ್ರಮುಖ ಸ್ಥಾನದಲ್ಲಿ ಸ್ಥಾಪಿಸಿದೆ. ಮುಂದಿನ ವರ್ಷಗಳಲ್ಲಿ ಎಚ್ಎಎಲ್ ಇನ್ನಷ್ಟು ಉತ್ಪಾದನೆ ಕೈಗೊಳ್ಳಲಿದೆ. ಎಚ್ಎಎಲ್ ಭವಿಷ್ಯದ ಅಭಿವೃದ್ಧಿಗಾಗಿ ನೂತನ ಪರಿಕಲ್ಪನೆಗಳು ಹಾಗೂ ವೇದಿಕೆಗಳನ್ನು ಸೃಷ್ಟಿಸಲಿದೆ” ಎಂದರು.

ಇದನ್ನೂ ಓದಿ:2022-23ನೇ ಸಾಲಿನಲ್ಲಿ ಹೆಚ್​​ಎಎಲ್​ಗೆ ಅತ್ಯಧಿಕ ಆದಾಯ: ಶೇ 8 ರಷ್ಟು ಏರಿಕೆ

ಎಚ್ಎಎಲ್ ಸಂಸ್ಥೆ ಮುಂದಿನ ದಿನಗಳಲ್ಲಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡು, ರಕ್ಷಣಾ ಮಾರುಕಟ್ಟೆಯಲ್ಲಿ ಪ್ರಬಲವಾಗಿ ಸ್ಪರ್ಧಿಸಿ, ಭಾರತಕ್ಕೆ ಅಗತ್ಯವಿರುವಂತಹ ಅನ್ ಮ್ಯಾನ್ಡ್ ವೆಹಿಕಲ್‌ನಂತಹ ನೂತನ ತಂತ್ರಜ್ಞಾನ ವಲಯಗಳಲ್ಲಿ ಗಮನ ಹರಿಸಲು ಸಲಹೆ ನೀಡಿದರು. ನೂತನ ಉಪಕ್ರಮಗಳು, ನಾವೀನ್ಯತೆ ಮತ್ತು ಶ್ರೇಷ್ಠತೆಯ ಸಾಧನೆಯೆಡೆಗೆ ಹೆಚ್ಚಿನ ಒತ್ತು ನೀಡುವಂತೆ ತಿಳಿಸಿದರು. ಬಳಿಕ ಎಲ್‌ಸಿಎ ಜೋಡಣಾ ಸಂಕೀರ್ಣ, ಸು-30 ಆರ್‌ಒಎಚ್ ಫ್ಲೈಟ್ ಹ್ಯಾಂಗರ್ ಹಾಗೂ ಅಂತಿಮ ಜೋಡಣಾ ಹ್ಯಾಂಗರ್‌ಗಳಿಗೆ ಭೇಟಿ ನೀಡಿದರು.

ಇದೇ ವೇಳೆ ಸಿಬಿ ಅನಂತಕೃಷ್ಣನ್ ಅವರು ಮಾತನಾಡಿ “ನೂತನ ಉತ್ಪಾದನಾ ಸರಣಿ ಎಚ್ಎಎಲ್ ಸಂಸ್ಥೆಯ ಎಲ್‌ಸಿಎ ಎಂಕೆ1ಎ ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ 16 ವಿಮಾನಗಳಿಂದ 24 ವಿಮಾನಗಳಿಗೆ ಹೆಚ್ಚಿಸಲು ನೆರವಾಗಲಿದೆ. ಎಚ್ಎಎಲ್‌ನ ನಾಸಿಕ್ ವಿಭಾಗ ಪ್ರಸ್ತುತ ಜಾಗತಿಕ ರಾಜಕಾರಣದ ಕಾರಣದಿಂದ ಪೂರೈಕೆ ಸರಪಳಿಯ ಸಮಸ್ಯೆಗಳ ಹೊರತಾಗಿಯೂ ವರ್ಷಕ್ಕೆ 20 ಸು-30 ವಿಮಾನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಸಾಬೀತುಪಡಿಸಿದೆ” ಎಂದರು.

ಇದನ್ನೂ ಓದಿ:Defence Exports: ದಾಖಲೆ ಮಟ್ಟದಲ್ಲಿ ರಕ್ಷಣಾ ರಫ್ತು; ರಾಜನಾಥ್ ಸಿಂಗ್, ಮೋದಿ ಹರ್ಷ

ವಾಯುಪಡೆಯ ಅಗತ್ಯತೆಗಳನ್ನು ಪೂರೈಸುವ ಪ್ರಪಂಚದ ಪ್ರಥಮ ಘಟಕ

ಎಚ್ಎಎಲ್ ಈಗಾಗಲೇ ಬೆಂಗಳೂರಿನಲ್ಲಿ ಎರಡು ಎಲ್‌ಸಿಎ ಉತ್ಪಾದನಾ ಘಟಕಗಳನ್ನು ಆರಂಭಿಸಿದೆ. ಎಚ್ಎಎಲ್‌ನ ನಾಸಿಕ್ ವಿಭಾಗ 2014ರಲ್ಲಿ ಸು-30 ಎಂಕೆಐ ವಿಮಾನದ ದುರಸ್ತಿ ಮತ್ತು ಪರಿಶೀಲನಾ ಘಟಕವನ್ನು ಸ್ಥಾಪಿಸಿದ್ದು, ವಾಯುಪಡೆಯ ಅಗತ್ಯತೆಗಳನ್ನು ಪೂರೈಸುವ ಪ್ರಪಂಚದ ಇಂತಹ ಪ್ರಥಮ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಿಗ್ ಸರಣಿ ಮತ್ತು ಸು30-ಎಂಕೆಐ ವಿಮಾನಗಳ ಉತ್ಪಾದನೆ ಮತ್ತು ಮಿಗ್ ಸರಣಿಯ ಸಂಪೂರ್ಣ ಪರಿಶೀಲನಾ ಸಾಮರ್ಥ್ಯದ ಪರಿಣಾಮವಾಗಿ ಎಚ್ಎಎಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಸಾಧಿಸಿದೆ.

ಇದಕ್ಕೆ ಭಾರತೀಯ ವಾಯುಪಡೆ ಮತ್ತು ಇತರ ನಿಯಂತ್ರಕ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳು ಅವಶ್ಯಕ ಬೆಂಬಲ ಒದಗಿಸಿವೆ. ಎಚ್ಎಎಲ್‌ನ ಹಲವು ಸಹೋದರ ಸಂಸ್ಥೆಗಳೂ ಆರ್‌ಒಎಚ್ ಚಟುವಟಿಕೆಗಳಲ್ಲಿ ಭಾಗಿಯಾಗಿವೆ. ಎಚ್ಎಎಲ್ ಒಇಎಂಗಳ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆಗೊಳಿಸಲು ಆರ್‌ಒಎಚ್‌ಗೆ ಅಗತ್ಯವಿರುವ ಬಹುತೇಕ ಉಪಕರಣಗಳನ್ನು, ಬಿಡಿಭಾಗಗಳನ್ನು ಮುಂದಿನ 3-5 ವರ್ಷಗಳಲ್ಲಿ ನಮ್ಮಲ್ಲಿಯೇ ಉತ್ಪಾದಿಸುವ ಉದ್ದೇಶ ಹೊಂದಿದೆ.

ಇದನ್ನೂ ಓದಿ:ರಕ್ಷಣಾ ಪಡೆಗಳಲ್ಲಿ 1.55 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ; ರಾಜ್ಯ ಸಭೆಗೆ ಕೇಂದ್ರ ಮಾಹಿತಿ

83 ತೇಜಸ್ ಮಾರ್ಕ್ 1-ಎ ಖರೀದಿಗೆ ಆದೇಶಿಸಿದ ವಾಯುಪಡೆ

2028ನೇ ಇಸವಿಯ ತನಕವೂ ಉತ್ಪಾದನೆ ಸಾಗಲು ಎಚ್ಎಎಲ್‌ಗೆ ಭಾರತೀಯ ವಾಯುಪಡೆ 83 ತೇಜಸ್ ಮಾರ್ಕ್ – 1ಎಗಾಗಿ ಆದೇಶಿಸಿದೆ. ಇದು ಪ್ರಸ್ತುತ ಮಾರ್ಕ್-1 ವಿಮಾನದ ವೇಗದ ಮತ್ತು ಹೆಚ್ಚು ಪರಿಷ್ಕೃತ ಆವೃತ್ತಿಯಾಗಿದೆ. ಇದಕ್ಕಾಗಿ ಎಚ್ಎಎಲ್ ಮಾರ್ಕ್-1ಎ ವಿಮಾನದ 800 ಕೆಜಿಯಷ್ಟು ತೂಕವನ್ನು ಕಡಿಮೆಗೊಳಿಸಬೇಕಾಗಿ ಬಂದಿತ್ತು. ಅದರಲ್ಲೂ ವಿಶೇಷವಾಗಿ ಸುರಕ್ಷತೆಗಾಗಿ ನಿರ್ಮಿಸಿದ ವಿಮಾನದ ಭಾರದ ಲ್ಯಾಂಡಿಂಗ್ ಗೇರ್ ತೂಕವನ್ನು ಇಳಿಸಬೇಕಾಗಿತ್ತು. ಅದರೊಡನೆ ಯುದ್ಧ ವಿಮಾನದ ಸಮತೋಲನ ಸಾಧಿಸಲು ಮಾರ್ಕ್-1ರಲ್ಲಿ ಹಂಚಿಹೋಗಿದ್ದ 300 ಕೆಜಿ ‘ಡೆಡ್ ವೆಯ್ಟ್’ ಎಂಬ ಭಾರವನ್ನು ಕಡಿಮೆಗೊಳಿಸಲಾಯಿತು.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ