ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆ ವಲಯದ ಈ ರೈಲುಗಳು ಭಾಗಶಃ ರದ್ದು

|

Updated on: Sep 15, 2024 | 8:51 AM

ಕುಡಗಿ ಯಾರ್ಡ್‌ನಲ್ಲಿ ರಸ್ತೆ 5 ಮತ್ತು 6 ರ ಕಾರ್ಯಾರಂಭದ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ, ಬಾಗಲಕೋಟೆ ಮತ್ತು ಗದಗ ಮಧ್ಯೆ ಸಂಚರಿಸುವ ರೈಲುಗಳು ಭಾಗಶಃ ರದ್ದಾಗಲಿವೆ. ಯಾವ ದಿನಾಂಕದಂದು ಭಾಗಶಃ ರದ್ದಾಗಲಿದೆ? ಇಲ್ಲಿದೆ ಮಾಹಿತಿ

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆ ವಲಯದ ಈ ರೈಲುಗಳು ಭಾಗಶಃ ರದ್ದು
ರೈಲು
Follow us on

ಹುಬ್ಬಳ್ಳಿ, ಸೆಪ್ಟೆಂಬರ್​​ 15: ಕುಡಗಿ ಯಾರ್ಡ್‌ನಲ್ಲಿ (Kudgi Yard) ರಸ್ತೆ 5 ಮತ್ತು 6 ರ ಕಾರ್ಯಾರಂಭದ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲ ರೈಲುಗಳ (Train) ಸಂಚಾರ ಭಾಗಶಃ ರದ್ದಾಗಲಿವೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಭಾಗಶಃ ರದ್ದು

  1. ರೈಲು ಸಂಖ್ಯೆ 06919: ಎಸ್​ಎಸ್​ಎಸ್​ ಹುಬ್ಬಳ್ಳಿ-ವಿಜಯಪುರ ಪ್ಯಾಸೆಂಜರ್ ವಿಶೇಷ ರೈಲು ಸೆಪ್ಟೆಂಬರ್ 22 ರಿಂದ 25 ರವರೆಗೆ ಬಾಗಲಕೋಟೆ- ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ರೈಲು ಬಾಗಲಕೋಟೆ ನಿಲ್ದಾಣದಲ್ಲಿ ಶಾರ್ಟ್ ಟರ್ಮಿನೇಟ್ ಆಗಲಿದೆ.
  2. ರೈಲು ಸಂಖ್ಯೆ 06920: ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಸೆಪ್ಟೆಂಬರ್ 22 ರಿಂದ 25 ರವರೆಗೆ ವಿಜಯಪುರದ ಬದಲಿಗೆ ಬಾಗಲಕೋಟೆ ನಿಲ್ದಾಣದಿಂದ ಹೊರಡಲಿದೆ. ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವೆ ರೈಲು ಭಾಗಶಃ ರದ್ದಾಗಲಿದೆ.
  3. ರೈಲು ಸಂಖ್ಯೆ 07378: ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಸೆಪ್ಟೆಂಬರ್ 21 ರಿಂದ 24ರವರೆಗೆ ಬಾಗಲಕೋಟೆ-ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ರೈಲು ಬಾಗಲಕೋಟೆ ನಿಲ್ದಾಣದಲ್ಲಿ ಶಾರ್ಟ್ ಟರ್ಮಿನೇಟ್ ಆಗಲಿದೆ.
  4. ರೈಲು ಸಂಖ್ಯೆ 07377: ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸೆಪ್ಟೆಂಬರ್ 22 ರಿಂದ 25ರವರೆಗೆ ವಿಜಯಪುರದ ಬದಲಿಗೆ ಬಾಗಲಕೋಟೆ ನಿಲ್ದಾಣದಿಂದ ಹೊರಡಲಿದೆ. ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವೆ ರೈಲು ಭಾಗಶಃ ರದ್ದಾಗಲಿದೆ.
  5. ರೈಲು ಸಂಖ್ಯೆ 17307: ಮೈಸೂರು-ಬಾಗಲಕೋಟ ಬಸವ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 21 ರಿಂದ 24ರವರೆಗೆ ವಿಜಯಪುರ-ಬಾಗಲಕೋಟೆ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ವಿಜಯಪುರ ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ.
  6. ರೈಲು ಸಂಖ್ಯೆ 17308: ಬಾಗಲಕೋಟ-ಮೈಸೂರು ಬಸವ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 22 ರಿಂದ 25ರವರೆಗೆ ಬಾಗಲಕೋಟೆಯ ಬದಲಿಗೆ ವಿಜಯಪುರ ನಿಲ್ದಾಣದಿಂದ ಹೊರಡಲಿದೆ. ಬಾಗಲಕೋಟೆ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ರೈಲು ಭಾಗಶಃ ರದ್ದಾಗಲಿದೆ.
  7. ರೈಲು ಸಂಖ್ಯೆ 06545: ಯಶವಂತಪುರ-ವಿಜಯಪುರ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 21 ರಿಂದ 24ರವರೆಗೆ ಗದಗ-ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ರೈಲು ಗದಗ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ.
  8. ರೈಲು ಸಂಖ್ಯೆ 06546: ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 22 ರಿಂದ 25ರವರೆಗೆ ವಿಜಯಪುರದ ಬದಲಿಗೆ ಗದಗ ನಿಲ್ದಾಣದಿಂದ ಹೊರಡಲಿದೆ. ವಿಜಯಪುರ-ಗದಗ ನಿಲ್ದಾಣಗಳ ನಡುವೆ ರೈಲು ಭಾಗಶಃ ರದ್ದಾಗಲಿದೆ.

ಇದನ್ನೂ ಓದಿ: ಓಣಂ ವಿಶೇಷ: ಹುಬ್ಬಳ್ಳಿ-ಬೆಂಗಳೂರು-ಕೇರಳ ಮಧ್ಯೆ ವಿಶೇಷ ರೈಲು

ರೈಲುಗಳ ನಿಯಂತ್ರಣ:

  1. ಸೆಪ್ಟೆಂಬರ್ 25, 2024 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 11305 ಸೋಲಾಪುರ-ಹೊಸಪೇಟೆ ಎಕ್ಸ್‌ಪ್ರೆಸ್ ಪ್ರಯಾಣವನ್ನು 45 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 17347/17348 ಎಸ್‌ಎಸ್‌ಎಸ್ ಹುಬ್ಬಳ್ಳಿ- ಚಿತ್ರದುರ್ಗ-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ಚಿಕ್ಕಜಾಜೂರು-ಚಿತ್ರದುರ್ಗ-ಚಿಕ್ಕಜಾಜೂರು ನಡುವೆ ಕಳಪೆ ಆಕ್ಯುಪೆನ್ಸಿಯ ಕಾರಣದಿಂದ ಭಾಗಶಃ ರದ್ದತಿಯ ಮುಂದುವರೆಯತ್ತದೆ.

ವಿವರಗಳು ಈ ಕೆಳಗಿನಂತಿವೆ:

  1. ರೈಲು ಸಂಖ್ಯೆ 17347: ಎಸ್​ಎಸ್​ಎಸ್​ ಹುಬ್ಬಳ್ಳಿ-ಚಿತ್ರದುರ್ಗ ಎಕ್ಸ್‌ಪ್ರೆಸ್ ಚಿಕ್ಕಜಾಜೂರ್-ಚಿತ್ರದುರ್ಗ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ರೈಲು ಚಿತ್ರದುರ್ಗ ನಿಲ್ದಾಣದ ಬದಲಾಗಿ ಚಿಕ್ಕಜಾಜೂರಿನಲ್ಲಿ ಕೊನೆಗೊಳ್ಳುತ್ತದೆ. ಈ ಭಾಗಶಃ ರದ್ದತಿಯನ್ನು ಈ ಹಿಂದೆ ಸೆಪ್ಟೆಂಬರ್ 30ರವರೆಗೆ ಸೂಚಿಸಲಾಗಿತ್ತು, ಇದೀಗ ಅಕ್ಟೋಬರ್ 1 ರಿಂದ ಮಾರ್ಚ್ 31, 2025ರವರೆಗೆ ವಿಸ್ತರಿಸಲಾಗಿದೆ.
  2. ರೈಲು ಸಂಖ್ಯೆ 17348: ಚಿತ್ರದುರ್ಗ-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ಕೂಡ ಚಿತ್ರದುರ್ಗ ಮತ್ತು ಚಿಕ್ಕಜಾಜೂರ್ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಚಿತ್ರದುರ್ಗ ನಿಲ್ದಾಣದ ಬದಲಾಗಿ ಚಿಕ್ಕಜಾಜೂರಿನಿಂದ ಹೊರಡಲಿದೆ. ಭಾಗಶಃ ರದ್ದತಿಯನ್ನು ಈ ಹಿಂದೆ ಸೆಪ್ಟೆಂಬರ್ 30ರವರೆಗೆ ಸೂಚಿಸಲಾಗಿದ್ದು, ಅಕ್ಟೋಬರ್ 1ರಿಂದ ಮಾರ್ಚ್ 31, 2025 ರವರೆಗೆ ವಿಸ್ತರಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:51 am, Sun, 15 September 24