Loading video

ಶಿರಾಡಿಘಾಟ್ ಪ್ರದೇಶದಲ್ಲಿ ಅಗೆತ ಮತ್ತು ಮಳೆಯಿಂದ ಮಣ್ಣು ಶಿಥಿಲಗೊಂಡು ರಸ್ತೆಗುರುಳುತ್ತಿರುವ ಮರಗಳು

Updated on: Jun 16, 2025 | 2:30 PM

ರಸ್ತೆ ಬದಿಯ ಜಾಗ ಮತ್ತು ಮರಗಳು ಖಾಸಗಿಯವರಿಗೆ ಸೇರಿರುವುದರಿಂದ ಚತುಷ್ಪಥ ರಸ್ತೆಯ ಕಾಮಗಾರಿಯಲ್ಲಿ ತೊಡಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮರಗಳನ್ನ ತೆರವುಗೊಳಿಸಲಾಗದು. ಹೀಗಾಗಿ, ಪ್ರಾಧಿಕಾರದ ಅಧಿಕಾರಿಗಳು ಖಾಸಗಿಯವರೊಂದಿಗೆ ಮಾತಾಡಲೇಬೇಕಿದೆ. ಅವರು ಈ ಕೆಲಸವನ್ನು ಬೇಗ ಮಾಡಿದಷ್ಟು ಒಳ್ಳೆಯದು. ಯಾಕೆಂದರೆ ಕೆಲ ಮರಗಳು ಯಾವುದೇ ಕ್ಷಣ ಉರುಳಬಹುದಾದ ಸ್ಥಿತಿಯಲ್ಲಿವೆ.

ಹಾಸನ, ಜೂನ್ 16: ಚಾರ್ಮಾಡಿ ಮತ್ತು ಶಿರಾಡಿ ಘಾಟ್ (Shiradi Ghat) ಪ್ರದೇಶಗಳಲ್ಲಿ ಓಡಾಡುವ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದೇ ವಾಹನ ಓಡಿಸುವ ಸನ್ನಿವೇಶ ಪ್ರತಿಮಳೆಗಾಲದಲ್ಲಿ ಸೃಷ್ಟಿಯಾಗುತ್ತದೆ. ನಮ್ಮ ಹಾಸನ ವರದಿಗಾರ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಎದುರಾಗಿರುವ ಆತಂಕಮಯ ಸನ್ನಿವೇಶದ ಬಗ್ಗೆ ವಿವರಣೆ ನೀಡುತ್ತಿದ್ದಾರೆ. ಸಕಲೇಶಪುರದಿಂದ ಮಾರೇನಹಳ್ಳಿಮ ನಡುವೆ ಇರುವ ದೋಣಿಗಲ್ ಎಂಬಲ್ಲಿ ಮರವೊಂದು ಬುಡಸಮೇತ ಕಿತ್ತು ರಸ್ತೆ ಮೇಲುರುಳಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆಯನ್ನು ನಾಲ್ಕು ಲೇನ್ ಗಳ ರಸ್ತೆಯಾಗಿ ಪರಿವರ್ತಿಸುತ್ತಿರೋದ್ರಿಂದ ಎರಡೂ ಬದಿಯಲ್ಲಿ ಗುಡ್ಡವನ್ನು ಅಗೆದು ರಸ್ತೆಗಾಗಿ ಸ್ಥಳ ಮಾಡಿಕೊಳ್ಳಲಾಗುತ್ತಿದೆ. ಅಗೆತದಿಂದಾಗಿ ಗುಡ್ಡ ಶಿಥಿಲಗೊಳ್ಳುತ್ತಿದ್ದು ಅಂಚಿಗಿರುವ ಮರಗಳು ರಸ್ತೆಗೆ ಉರುಳಿ ಬೀಳುತ್ತಿವೆ. ಸಕಲೇಪುರದಿಂದ ಮಾರೇನಹಳ್ಳಿ ನಡುವಿನ 12 ಕಿಮೀ ಅಂತರದಲ್ಲಿ ಸುಮಾರು ಕಡೆ ಮರಗಳು ಉರುಳಿ ಬಿದ್ದಿವೆ ಎಂದು ವರದಿಗಾರ ಹೇಳುತ್ತಾರೆ.

ಇದನ್ನೂ ಓದಿ:  ಧಾರಾಕಾರ ಮಳೆ: ಚಾರ್ಮಾಡಿ ಘಾಟ್‌ನಲ್ಲಿ ಮತ್ತೆ ಸಾಲು-ಸಾಲು ಗುಡ್ಡ ಕುಸಿತ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ