ಬೆಂಗಳೂರು, ಆಗಸ್ಟ್ 28: ಪೂರ್ವ ಅರಬ್ಬೀ ಸಮುದ್ರದ ಕರಾವಳಿ ತೀರಗಳಲ್ಲಿ ಟ್ರಫ್ ಎಫೆಕ್ಟ್ ಹಿನ್ನೆಲೆ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಆ.30ರ ವರೆಗೆ ಹಾಗೂ ಬೆಂಗಳೂರಲ್ಲಿ ಅ.1ರ ವರೆಗೂ ಹಗುರದಿಂದ ಸಾಧಾರಣ ಮಳೆ (Rain) ಸಾಧ್ಯತೆ ಎಂದು ರಾಜ್ಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆ. 40-50 ಕೀ.ಮೀ. ವೇಗದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಗಳಿಗೆ ಆ.30ರ ವರೆಗೆ ಆರೆಂಜ್ ಅಲರ್ಟ್ ಮತ್ತು ಕೊಡಗು, ಬೆಳಗಾವಿ ಜಿಲ್ಲೆಗಳಿಗೆ ಆ.30ರ ವರೆಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: Karnataka Rains: ಕರ್ನಾಟಕದ 6 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆ, ಆರೆಂಜ್ ಅಲರ್ಟ್
ಕ್ಯಾಸಲ್ರಾಕ್, ಕೊಟ್ಟಿಗೆಹಾರ, ಪುತ್ತೂರು, ಭಾಗಮಂಡಲ, ಆಗುಂಬೆ, ಮಂಕಿ, ಶಿರಾಲಿ, ಲಿಂಗನಮಕ್ಕಿ, ಮಾಣಿ, ಸಿದ್ದಾಪುರ, ಗೇರುಸೊಪ್ಪ, ಬೆಳ್ತಂಗಡಿ, ಶೃಂಗೇರಿ, ಪೊನ್ನಂಪೇಟೆ, ಹೊನ್ನಾವರ, ಉಪ್ಪಿನಂಗಡಿ, ಕಳಸ, ಹುಂಚದಕಟ್ಟೆ, ಕಮ್ಮರಡಿ, ಮೂರ್ನಾಡು, ನಾಪೋಕ್ಲು, ಪಣಂಬೂರು, ಉಡುಪಿ, ಮಂಗಳೂರು, ಕುಮಟಾದಲ್ಲಿ ಮಳೆಯಾಗಿದೆ.
ಶಿರೂರು ಗುಡ್ಡ ಕುಸಿತದಿಂದ ಆತಂಕಗೊಂಡಿದ್ದ, ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಮತ್ತೆ ವರುಣಾಘಾತ ಎದುರಾಗಿದೆ. 403.6 ಮಿಲಿ ಮೀಟರ್ನಷ್ಟು ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಹೊನ್ನಾವರದಲ್ಲಿ 74.6 ಮಿಲಿ ಮೀಟರ್ನಷ್ಟು ಮಳೆ ಆಗಿದ್ದು, ಕಾರವಾರದಲ್ಲಿ 48 ಮಿಲಿ ಮೀಟರ್ನಷ್ಟು ಆರ್ಭಟಿಸಿದೆ. ಇತ್ತ ಅಂಕೋಲಾದಲ್ಲಿ 45 ಮಿಲಿ ಮೀಟರ್ನಷ್ಟು ಮಳೆ ದಾಖಲಾಗಿತ್ತು. ಮತ್ತೆ ವರುಣದೇವ ಆರ್ಭಟಿಸ್ತಿರೋದು ಉತ್ತರಕನ್ನಡ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿತ್ತು.
ಇದನ್ನೂ ಓದಿ: Karnataka Rains: ಕರ್ನಾಟಕದ ಕರಾವಳಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಭಾರಿ ಮಳೆ
ಇತ್ತೀಚೆಗೆ ವಿಜಯನಗರ ಜಿಲ್ಲೆಯಲ್ಲೂ ವರುಣಾರ್ಭಟ ಜೋರಾಗಿತ್ತು. ಹೀಗಾಗಿ ಹೊಸಪೇಟೆ ತಾಲೂಕಿನ ಜಿ.ನಾಗಲಾಪೂರ ಗ್ರಾಮದಲ್ಲಿ ಹೆಣ ಸಾಗಿಸಲು ಹೆಣಗಾಡುವಂತಾಗಿತ್ತು. ಹರಿಯುವ ಹಳ್ಳದಲ್ಲಿಯೇ ಹೆಣ ಹೊತ್ತು ಸಾಗೋ ಸ್ಥಿತಿ ಗ್ರಾಮಸ್ಥರಿಗೆ ಎದುರಾಗಿತ್ತು. ಇತ್ತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜಿಟಿ ಜಿಟಿ ಮಳೆ ಸುರಿದಿತ್ತು. ಜನಜೀವನ ಅಸ್ತವ್ಯಸ್ತಗೊಂಡಿತ್ತು. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:57 pm, Wed, 28 August 24