ಪ್ರೀಮಿಯರ್ ಮದ್ಯದ ದರ ಇಳಿಕೆ ಬಗ್ಗೆ ಅಬಕಾರಿ ಸಚಿವ ಆರ್ಬಿ ತಿಮ್ಮಾಪುರ ಹೇಳಿದ್ದಿಷ್ಟು
ಕರ್ನಾಟಕದಲ್ಲಿ ನಿನ್ನೆ ಪ್ರೀಮಿಯರ್ ಮದ್ಯದ ದರ ಇಳಿಕೆ ಮಾಡಲಾಗಿದೆ. ಆ ಮೂಲಕ ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಪ್ರತಿಕ್ರಿಯಿಸಿದ್ದು, ಹೊರ ರಾಜ್ಯದಿಂದ ಮದ್ಯ ತರುವುದನ್ನು ತಡೆಯುವುದಕ್ಕೆ ಈ ಕ್ರಮಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ಬೆಂಗಳೂರು, ಆಗಸ್ಟ್ 28: ಹೊರ ರಾಜ್ಯದಿಂದ ಮದ್ಯ ತರುವುದನ್ನು ತಡೆಯುವುದಕ್ಕೆ ಮದ್ಯದ (Liquor) ದರ ಇಳಿಕೆ ಮಾಡಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ. ಕರ್ನಾಟಕದಲ್ಲಿ ಪ್ರೀಮಿಯರ್ ಮದ್ಯದ ದರ ಇಳಿಕೆ ವಿಚಾರವಾಗಿ ಮಾತನಾಡಿದ ಅವರು, ಬೇರೆ ರಾಜ್ಯದಿಂದ ಆಮದು ತಡೆಯಲು ದರ ಕಡಿಮೆ ಮಾಡಿದ್ದೇವೆ. ಇಲ್ಲಿ ಗುಣಮಟ್ಟದ ಮದ್ಯ ಇದ್ದರೂ ಹೊರಗಡೆಯಿಂದ ಬರ್ತಿತ್ತು ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos