ತುಮಕೂರು: ಹಿಂಬದಿಯಿಂದ ಲಾರಿಗೆ ಬುಲೆರೋ ವಾಹನ ಡಿಕ್ಕಿ: ಇಬ್ಬರು ಸಾವು
ಮುಂದೆ ಹೋಗುತ್ತಿದ್ದ ಲಾರಿಗೆ ಬುಲೆರೋ ವಾಹನ ಡಿಕ್ಕಿ ಹೊಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿ ಘಟನೆ ನಡೆದಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ಉಮೇಶ್ ನಾಗಪ್ಪ ಹಾಗೂ ಸಂತೋಷ್ ಸುರೇಶ್ ಸಾವನ್ನಪ್ಪಿದ್ದಾರೆ. ದ್ರಾಕ್ಷಿ ತುಂಬಿಕೊಂಡು ಬೆಂಗಳೂರು ಕಡೆ ಹೋಗುತ್ತಿದ್ದ ಬುಲೆರೋ ವಾಹನ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಮಕೂರು, ಏಪ್ರಿಲ್ 25: ಮುಂದೆ ಹೋಗುತ್ತಿದ್ದ ಲಾರಿಗೆ ಬುಲೆರೋ ವಾಹನ ಡಿಕ್ಕಿ (accident) ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿ ನಡೆದಿದೆ. ಬೆಳಗಾವಿ (Belagavi) ಜಿಲ್ಲೆಯ ಅಥಣಿ ಮೂಲದವರಾದ ಉಮೇಶ್ ನಾಗಪ್ಪ ಹಾಗೂ ಸಂತೋಷ್ ಸುರೇಶ್ ಮೃತರು. ಬುಲೆರೋ ವಾಹನ ಚಾಲಕನಿಗೆ ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ದ್ರಾಕ್ಷಿ ತುಂಬಿಕೊಂಡು ಬೆಂಗಳೂರು ಕಡೆ ಹೋಗುತ್ತಿದ್ದ ಲಾರಿಗೆ ಬುಲೆರೋ ವಾಹನ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಗಲಾಟೆ: ಕೊಲೆಯಲ್ಲಿ ಅಂತ್ಯ
ಕೊಡಗು: ಕ್ಷುಲ್ಲಕ ಕಾರಣಕ್ಕೆ ವಿಕೋಪಕ್ಕೆ ತಿರುಗಿದ ಜಗಳ ವ್ಯಕ್ತಿಯೊಬ್ಬನ ಜೀವವನ್ನೇ ಬಲಿ ಪಡೆದ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ. ಕುಶಾಲನಗರ ತಾಲ್ಲೂಕು ಕೇಂದ್ರದಲ್ಲಿರುವ ಹೋಟೆಲ್ ಒಂದರಲ್ಲಿ ಈ ಘಟನೆ ನಡೆದಿದೆ. ಹೋಟೆಲ್ನಲ್ಲಿ ಕ್ಯಾಶಿಯರ್ ಆಗಿದ್ದ ಸಂತೋಷ್ ಕೊಲೆಯಾದ ವ್ಯಕ್ತಿ. ಈತ ಕೆಸಲ ಮಾಡುತ್ತಿದ್ದ ಬಾರ್ಗೆ ರಾತ್ರಿ ಮದ್ಯಪಾನ ಮಾಡಲೆಂದು ಕುಶಾಲನಗರದ ಜನತಾ ಕಾಲೋನಿ ನಿವಾಸಿ ಹರ್ಷ ಆಗಮಿಸಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ಬಾಡಿಗೆ ಮನೆ ನೋಡಲು ಹೋಗಿದ್ದ ವಿದ್ಯಾರ್ಥಿಗಳನ್ನು ಕೂಡಿಹಾಕಿ ಹಲ್ಲೆ
ಗುಂಡೇರಿಸಿದ ಬಳಿಕ ಯಾವುದೋ ಕ್ಷುಲ್ಲಕ ಕಾರಣಕ್ಕೆ ಹರ್ಷ ಹಾಗೂ ಸಂತೋಷ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಹರ್ಷ ತಾಳ್ಮೆ ಕಲೆದುಕೊಂಡು ಬೀರ್ ಬಾಟಲಿಯಿಂದ ಸಂತೋಷ್ ತಲೆಗೆ ಹೊಡೆದಿದ್ದಾನೆ. ಅಲ್ಲದೆ ಅದೇ ಬಾಟಲಿಯಿಂದ ಸಂತೋಷ್ನ ಕುತ್ತಿಗೆಯನ್ನೂ ಇರಿದಿದ್ದಾನೆ. ತೀವ್ರ ರಕ್ತಸ್ರಾವಗೊಂಡ ಸಂತೋಷನ್ನಲ್ಲಿ ಮಡಿಕೇರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ದಾರಿ ಮಧ್ಯೆ ಸಂತೋಷ್ ಉಸಿರು ಚೆಲ್ಲಿದ್ದಾನೆ. ಕೊಲೆ ಆರೋಪಿ ಹರ್ಷನನ್ನ ಕುಶಾಲನಗರ ಟೌನ್ ಪೊಲೀಸರು ಬಂಧಿಸಿದ್ದಾರೆ.
ನಾಪತ್ತೆಯಾದ 7 ವರ್ಷದ ಬಾಲಕಿ: ಶವವಾಗಿ ಪತ್ತೆ
ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ನಡೆಯಬಾರದ ಘಟನಯೊಂದು ನಡೆದಿತ್ತು. ಅದೊಂದು ಘಟನೆ ಇಡೀ ಗ್ರಾಮದ ಜನರೇ ಬೆಚ್ಚಿಬೀಳುವಂತೆ ಮಾಡಿತ್ತು. ಏಪ್ರಿಲ್ 19 ರಂದು ಕಿನ್ನಾಳ ಗ್ರಾಮದಲ್ಲಿರುವ ಅನುಶ್ರೀ ಮಡಿವಾಳರ್ ಅನ್ನೋ ಏಳು ವರ್ಷದ ಬಾಲಕಿ, ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಮನೆ ಮುಂದೆ ಆಡುತ್ತಿದ್ದಳಂತೆ. ಹೆತ್ತವರು ಕೊಪ್ಪಳದಲ್ಲಿ ಬಟ್ಟೆ ಐರನ್ ಮಾಡುವ ಕೆಲಸ ಮಾಡುತ್ತಿರುವದರಿಂದ, ಹೆತ್ತವರು ಕೊಪ್ಪಳಕ್ಕೆ ಬಂದಿದ್ದರು. ಅಜ್ಜಿ ಜೊತೆಗೆ ಇದ್ದ ಅನುಶ್ರೀ, ಆಟವಾಡಿಕೊಂಡಿದ್ದಳು. ಆದರೆ ಆಟವಾಡುತ್ತಿದ್ದ ಬಾಲಕಿ ಧಿಡೀರನೆ ನಾಪತ್ತೆಯಾಗಿದ್ದಳು.
ಇದನ್ನೂ ಓದಿ: ರಾಯಚೂರು: ಪತ್ನಿ ಜೊತೆಗೆ ಮತ್ತೋರ್ವ ವ್ಯಕ್ತಿಯ ಅನೈತಿಕ ಸಂಬಂಧ: ಕೊಲೆಗೈದ ಪತಿ
ಏಪ್ರಿಲ್ 19 ರ ಸಂಜೆಯಿಂದ ಅನುಶ್ರೀಯ ಹೆತ್ತವರು, ಗ್ರಾಮದ ಜನರು, ಬಾಲಕಿಗಾಗಿ ಹುಡುಕಾಟ ನಡೆಸಿದ್ದರು. ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಗ್ರಾಮದ ಹೊರವಲಯದಲ್ಲಿರುವ ಕೆರೆ, ಬಾವಿಗಳನ್ನು ಶೋಧ ಮಾಡಿದ್ದರು. ಯಾರಾದರು ನಿಧಿಗಾಗಿ ಬಾಲಕಿಯನ್ನು ಬಲಿ ಕೊಡಲು ಕರೆದುಕೊಂಡು ಹೋಗಿರಬಹುದು ಅಂತ ತಮ್ಮೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸ್ಮಶಾನಗಳನ್ನು ಕೂಡಾ ಹುಡುಕಿ ಬಂದಿದ್ದರು. ಆದರೆ ಎಲ್ಲಿಯೂ ಕೂಡ ಬಾಲಕಿಯ ಸುಳಿವು ಸಿಕ್ಕಿರಲಿಲ್ಲಾ. ಜೊತೆಗೆ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ಕೂಡಾ ಕೊಟ್ಟಿದ್ದರು.
ಪೊಲೀಸರು ಕೂಡ ಬಾಲಕಿಯ ಮಿಸ್ಸಿಂಗ್ ಬಗ್ಗೆ ಎಲ್ಲಡೆ ಮಾಹಿತಿ ನೀಡಿದ್ದರು. ಆದರೂ ಬಾಲಕಿಯ ಸುಳಿವು ಸಿಕ್ಕಿರಲಿಲ್ಲ. ಆದರೆ ಶುಕ್ರವಾರ ಸಂಜೆ ನಾಪತ್ತೆಯಾಗಿದ್ದ ಬಾಲಕಿ, ಭಾನುವಾರ ಸಂಜೆ ಅದೇ ಕಿನ್ನಾಳ ಗ್ರಾಮದಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.