ರಾಯಚೂರು: ಪತ್ನಿ ಜೊತೆಗೆ ಮತ್ತೋರ್ವ ವ್ಯಕ್ತಿಯ ಅನೈತಿಕ ಸಂಬಂಧ: ಕೊಲೆಗೈದ ಪತಿ

ಹಿಂದೂ ಮಹಿಳೆ ಜೊತೆಗೆ ಮುಸ್ಲಿಂ ವ್ಯಕ್ತಿ ಅನೈತಿಕ ಸಂಬಂಧ ಹಿನ್ನೆಲೆ ಮುಸ್ಲಿಂ ವ್ಯಕ್ತಿಯನ್ನು ಮಹಿಳೆ ಪತಿ ಕೊಚ್ಚಿ ಕೊಲೆಗೈದಿರುವಂತಹ ಘಟನೆ ರಾಯಚೂರು ಜಿಲ್ಲೆಯ ‌ಮಸ್ಕಿ ತಾಲ್ಲೂಕಿನ ಬಳಗನೂರು ಪಟ್ಟಣದಲ್ಲಿ ನಡೆದಿದೆ. ಸ್ಥಳಕ್ಕೆ ಬಳಗನೂರು ಪೊಲೀಸರು ಭೇಟಿ ಮಾಡಿ ಪರಿಶೀಲನೆ ಮಾಡಿದ್ದು, ಸದ್ಯ ಆರೋಪಿ ಮಾರುತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ರಾಯಚೂರು: ಪತ್ನಿ ಜೊತೆಗೆ ಮತ್ತೋರ್ವ ವ್ಯಕ್ತಿಯ ಅನೈತಿಕ ಸಂಬಂಧ: ಕೊಲೆಗೈದ ಪತಿ
ಮೃತ ಖಾದರ್ ಬಾಬಾಸಾಬ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Apr 23, 2024 | 3:08 PM

ರಾಯಚೂರು, ಏಪ್ರಿಲ್ 23: ರಾಜ್ಯದಲ್ಲಿ ಕೋಮು, ಸಂಘರ್ಷ ಸೇರಿದಂತೆ ಹತ್ಯೆಗಳು ಹೆಚ್ಚಾದಂತೆ ಕಾಣುತ್ತಿದೆ. ಈಗಾಗಲೇ ಹುಬ್ಬಳ್ಳಿಯ ನೇಹ ಕೊಲೆ (Neha Murder) ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ನಿನ್ನೆ ಯಾದಗಿರಿಯಲ್ಲಿ ಮುಸ್ಲಿಂ (Muslim) ಯುವಕನಿಂದ ದಲಿತ ಯುವಕನ ಹತ್ಯೆ ಮಾಡಲಾಗಿತ್ತು. ಇದೀಗ ಅದೇ ರೀತಿಯಾಗಿ ರಾಯಚೂರಿನಲ್ಲೊಂದು ಘಟನೆ ನಡೆದಿದೆ. ತನ್ನ ಪತ್ನಿಯೊಂದಿಗೆ ಮುಸ್ಲಿಂ ವ್ಯಕ್ತಿ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆ ಮುಸ್ಲಿಂ ವ್ಯಕ್ತಿಯನ್ನು ಪತಿ ಕೊಚ್ಚಿ ಕೊಲೆಗೈದಿರುವಂತಹ ಘಟನೆ ಜಿಲ್ಲೆಯ ‌ಮಸ್ಕಿ ತಾಲ್ಲೂಕಿನ ಬಳಗನೂರು ಪಟ್ಟಣದಲ್ಲಿ ನಡೆದಿದೆ.

ಮಾರುತಿ(29) ಎಂಬಾತನಿಂದ ಡ್ರೈವರ್​​ ಆಗಿದ್ದ ಖಾದರ್ ಬಾಬಾಸಾಬ್ (32) ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಬಳಗನೂರು ಪೊಲೀಸರು ಭೇಟಿ ಮಾಡಿ ಪರಿಶೀಲನೆ ಮಾಡಿದ್ದು, ಸದ್ಯ ಆರೋಪಿ ಮಾರುತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಯಾದಗಿರಿ ಮುಸ್ಲಿಂ ಯುವಕನಿಂದ ದಲಿತ ಯುವಕ ಕೊಲೆ

ಯಾದಗಿರಿ: ನಗರದಲ್ಲಿ ನಿನ್ನೆ ರಾತ್ರಿ ವೇಳೆ ನಗರದ ಶಹಾಪುರಪೇಟ ಬಡಾವಣೆಯಲ್ಲಿ ದಲಿತ ಸಮುದಾಯದ ಯುವಕ 22 ವರ್ಷದ ರಾಕೇಶ್ ಕೊಲೆಯಾಗಿದ್ದ. ಈ ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ಬದಲಿಗೆ ಇದೆ ಬಡಾವಣೆಯ ನಿವಾಸಿ ಮುಸ್ಲಿಂ ಸಮುದಾಯದ ಯುವಕ ಫಯಾಜ್ ಅಂಡ್ ಗ್ಯಾಂಗ್. ಈ ರಾಕೇಶ್ ನಿನ್ನೆ ಬೆಳಗ್ಗೆಯಿಂದ ಸಂಜೆ ತನಕ ಕಿರಾಣಾ ಅಂಗಡಿಯಲ್ಲಿ ಕೆಲಸ ಮಾಡಿದ್ದಾನೆ.

ಇದನ್ನೂ ಓದಿ: ಕೊನೆಗೂ ಗದಗ ಕೊಲೆ ಪ್ರಕರಣದ ರಹಸ್ಯ ಭೇದಿಸಿದ ಪೊಲೀಸರು: ಹತ್ಯೆಗಿದೆ ರೋಚಕ ಹಿನ್ನೆಲೆ

ಬಳಿಕ ಸಂಜೆ ವೇಳೆ ಮನೆಗೆ ಬಂದಿದ್ದಾನೆ. ಮನೆಗೆ ಬಂದು ಊಟ ಮಾಡಬೇಕು ಅಂತ ಅಂದುಕೊಂಡಿದ್ದಾನೆ. ಆದರೆ ಮನೆಯಲ್ಲಿ ಜೋಳದ ರೊಟ್ಟಿ ಮಾಡದ ಕಾರಣಕ್ಕೆ ರಾಕೇಶ್ ಪಕ್ಕದಲ್ಲೇ ಇರುವ ಆರೋಪಿ ಫಯಾಜ್ ಅವರ ರೊಟ್ಟಿ ಕೇಂದ್ರಕ್ಕೆ ಹೋಗಿದ್ದಾನೆ.

ಇದನ್ನೂ ಓದಿ: Hubballi: ಹುಬ್ಬಳ್ಳಿಯಲ್ಲಿ ಯುವತಿ ಮೇಲೆ ಅನ್ಯಕೋಮಿನ ಯುವಕನಿಂದ ಹಲ್ಲೆ ಆರೋಪ: ಬಂಧನ

ರಾತ್ರಿ 10 ಗಂಟೆಗೆ ಹೋಗಿ ರೊಟ್ಟಿ ಕೇಂದ್ರದ ಬಾಗಿಲು ಬಡಿದು ರೊಟ್ಟಿ ಕೇಳಿದ್ದಾನೆ. ಇದೆ ವೇಳೆ ಆರೋಪಿ ಫಯಾಜ್ ಸಹೋದರಿ ಬಾಗಿಲು ಓಪನ್ ಮಾಡಿ ರೊಟ್ಟಿ ಇಲ್ಲ ಅಂತ ಹೇಳಿ ರಾತ್ರಿ ವೇಳೆ ಬಂದಿದ್ದಕ್ಕೆ ಬೈದಿದ್ದಾಳೆ. ಇದೆ ವೇಳೆ ರಾಕೇಶ್ ಕೂಡ ಫಯಾಜ್ ಸಹೋದರಿಗೆ ಬೈದು ವಾಪಸ್ ಮನೆಗೆ ಬಂದಿದ್ದಾನೆ. ಬಳಿಕ ಫಯಾಜ್ ತನ್ನ ಮೂರು ಜನ ಸ್ನೇಹಿತರೊಂದಿಗೆ ರಾಕೇಶ್ ಮನೆಗೆ ಬಂದು ಜಗಳ ಮಾಡಿಕೊಂಡಿದ್ದಾನೆ. ಇದೆ ವೇಳೆ ಫಯಾಜ್ ಮತ್ತು ಗ್ಯಾಂಗ್ ರಾಕೇಶ್ ಗುಪ್ತಾಂಗಕ್ಕೆ ಕಾಲಿನಿಂದ ಒದ್ದು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ