ತುಮಕೂರು ನ.21: ಸರ್ಕಾರಿ ಶಾಲೆಯ (Government School) ಶಿಕ್ಷಕರಿಬ್ಬರ (Teachers) ನಡುವಿನ ಮುಸುಕಿನ ಗುದ್ದಾಟಕ್ಕೆ 18 ಮಕ್ಕಳು ಶಾಲೆ (School) ಬಿಟ್ಟಿದ್ದಾರೆ. ಶಿಕ್ಷಕರ ಜಗಳಕ್ಕೆ ಬೇಸತ್ತ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಕೋರಾ ತಾಲೂಕಿನ ಗೇರೆಹಳ್ಳಿ ಸರ್ಕಾರಿ ಉರ್ದು ಶಾಲೆಯ ಕನ್ನಡ ಶಿಕ್ಷಕನ ವಿರುದ್ಧ ಎರಡುವರೆ ತಿಂಗಳ ಹಿಂದೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು. ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಕ್ರಮ ಕೈಗೊಳ್ಳುವಂತೆ ಬಿಇಒಗೆ ಮುಖ್ಯಶಿಕ್ಷಕಿ ನೂರುಜಾನ್ ದೂರು ನೀಡಿದ್ದರು. ಅದರಂತೆ ಪೋಕ್ಸೋ ಕಾಯ್ದೆಯಡಿ ತುಮಕೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ ಪೋಷಕರು ಮುಖ್ಯಶಿಕ್ಷಕಿ ನೂರುಜಾನ್ ಅವರ ನಡೆ ಖಂಡಿಸಿದ್ದು, ನಮ್ಮ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿಲ್ಲವೆಂದು ಪೋಷಕರು ಹೇಳಿದ್ದರು. ಈ ಪ್ರಕರಣದ ಬಳಿಕ ದಸರಾ ರಜೆ ಬಂದಿತ್ತು. ಇದೀಗ ದಸರಾ ರಜೆಗೆ ತೆರಳಿದ ಮಕ್ಕಳು ಶಾಲೆಗೆ ವಾಪಸ್ ಬರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಸುಳ್ಳು ದೂರು ನೀಡಿರುವ ಮುಖ್ಯಶಿಕ್ಷಕಿಯನ್ನು ವರ್ಗಾಹಿಸುವಂತೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದೆ ಪಟ್ಟು ಹಿಡಿದಿದ್ದಾರೆ.
ಗೇರಹಳ್ಳಿ ಶಾಲೆಯಲ್ಲಿ ಸುಮಾರು ದಿನಗಳಿಂದ ಮಕ್ಕಳು ಗೈರಾಜಾರಗುತ್ತಿದ್ದಾರೆಂದು ಮಾಹಿತಿ ಪಡೆದುಕೊಂಡಿದ್ದೇನೆ. ಈ ಹಿಂದೆ ಪೋಕ್ಸೊ ಕಾಯ್ದೆಯಡಿ ಶಿಕ್ಷಕ ಬಂಧನವಾಗಿ ಬಿಡುಗಡೆಯಾಗಿ ಬಂದಿದ್ದಾರೆ. ಶಿಕ್ಷಕರು ಬಂದ ಮೇಲೆ ನನ್ನದು ಏನು ತಪ್ಪಿಲ್ಲ ಅಂತಾ ಹೇಳಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಹೀಗಾಗಿ ನಾನು ಹೆಚ್ಚು ಮಾತನಾಡಲು ಬರುವುದಿಲ್ಲ. 18 ಮಕ್ಕಳು ಶಾಲೆಗೆ ಹಾಜರಾಗಿಲ್ಲ ಅಂತ ರಿಪೋರ್ಟ್ ಬಂದಿದೆ. ಈ ಬಗ್ಗೆ ಬಿಇಒಗೆ ಮಾಹಿತಿ ನೀಡಿದ್ದೇನೆ ಎಂದು ಡಿಡಿಪಿಐ ರಂಗದಾಮಯ್ಯ ಹೇಳಿದರು.
ಇದನ್ನೂ ಓದಿ: ಶತಮಾನ ಕಂಡ ಗದಗ ಮುನ್ಸಿಪಲ್ ಪ್ರೌಢಶಾಲೆ ಅವ್ಯವಸ್ಥೆಯ ಆಗರ, ಮುರುಕುಲ ಕೊಠಡಿಯಲ್ಲಿ ಮಕ್ಕಳಿಗೆ ಪಾಠ
ಬಿಇಒ ಶಾಲೆಗೆ ಭೇಟಿ ನೀಡಿ ಶಿಕ್ಷಕರು, ಪೋಷಕರು ಮತ್ತು ಎಸ್ಡಿಎಮ್ಸಿ ಸದಸ್ಯರ ಜೊತೆ ಸಮಾಲೋಚನಾ ಸಭೆ ನಡೆಸಿದ್ದಾರೆ. ಪೋಷಕರು ಮುಖ್ಯಶಿಕ್ಷಕರು ಬೇಡ ಎಂದಿದ್ದಾರೆ. ನಾವು ಕಲಿಕೆಗೆ ತೊಂದರೆ ಆಗಬಾರದೆಂದು ಶಾಲೆಗೆ ಕಳಿಸಿ ಅಂತ ಮನವಿ ಮಾಡಿದ್ದೇವೆ. ಬೇರೆ ಕನ್ನಡ ಶಿಕ್ಷಕರನ್ನು ನಿಯೋಜನೆ ಮಾಡುತ್ತೇವೆ. ಪೋಷಕರು ಯಾವುದೇ ಒಂದು ಉದ್ದೇಶಕ್ಕೆ ಮಕ್ಕಳನ್ನು ಶಾಲೆಗೆ ಕಳಿಸಬೇಡಿ ಎಂದಿದ್ದೇವೆ. ಮುಖ್ಯಶಿಕ್ಷಕಿ ವಿರುದ್ಧ ಗ್ರಾಮಸ್ಥರು ದೂರು ನೀಡಿದ್ದಾರೆ. ನಾನು ಕೂಡ ಶಾಲೆಗೆ ಭೇಟಿ ನೀಡಲಿದ್ದೇನೆ ಎಂದರು.
ಈ ಹಿಂದೆ ಸಮಸ್ಯೆ ಆಗಿತ್ತು. ಸದ್ಯ ಶಿಕ್ಷಕರನ್ನು ಬದಲಾಯಿಸುತ್ತೆವೆ ಅಂತ ಹೇಳಿದ್ದಾರೆ. ಹೀಗಾಗಿ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಏನು ಸಮಸ್ಯೆ ಇಲ್ಲ. ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ಗಲಾಟೆ ಮಾಡಿಕೊಂಡಿದ್ದರು. ಈ ಬಗ್ಗೆ ಬಿಇಒಗೆ ದೂರು ನೀಡಲಾಗಿತ್ತು. ಸದ್ಯ ಬೇರೆ ಶಿಕ್ಷಕರನ್ನ ನೇಮಿಸುತ್ತೇವೆ ಎಂದಿದ್ದಾರೆ. ಎರಡು ತಿಂಗಳ ಕಾಲ ಮಕ್ಕಳು ಶಾಲೆಗೆ ಹೋಗಿರಿಲಿಲ್ಲ ಪೋಷಕ ಜಬಿ ಬೇಗ್ ಹೇಳಿದ್ದಾರೆ.