ಹಾವೇರಿ: ಅಪಘಾತದಲ್ಲಿ ಮೃತಪಟ್ಟ ಪುತ್ರನ ನೆನಪಿಗಾಗಿ ಗೋಶಾಲೆ ತೆರೆದ ತಾಯಿ
ಮಗನ ನೆನಪಿಗಾಗಿ ತಾಯಿ ಹಾವೇರಿ ತಾಲೂಕಿನ ಗಾಂಧಿಪುರ ಗ್ರಾಮದ ಬಳಿ ಒಂದು ಎಕರೆ ಜಮೀನು ಖರೀದಿಸಿ ಆತನ ಹೆಸರಿನಲ್ಲಿಯೇ ಸಂದೇಶ ಗೋಶಾಲೆ ಸ್ಥಾಪನೆ ಮಾಡಿದ್ದಾರೆ. ಹುಕ್ಕೇರಿಮಠದ ಸದಾಶಿವ ಶ್ರೀಗಳು ಸಂದೇಶ ಗೋಶಾಲೆಯನ್ನ ಉದ್ಘಾಟನೆ ಮಾಡಿದ್ದಾರೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಬೆಳಗಾವಿಗೆ ಹೋದಾಗ ಅಪಘಾತದಲ್ಲಿ ಮೃತಪಟ್ಟಿದ್ದ.