ವಯೋವೃದ್ದೆಯ ಬಾಳಲ್ಲಿ ಬೆಳಕಾದ ಶಾಸಕ: ಖುದ್ದು ತಾವೇ ಶಸ್ತ್ರ ಚಿಕಿತ್ಸೆ ಮಾಡಿದ ಡಾ ರಂಗನಾಥ್
90 ವರ್ಷದ ವಯೋವೃದ್ದೆಗೆ ಖುದ್ದು ತಾವೇ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಕುಣಿಗಲ್ ಶಾಸಕ ಹಾಗೂ ಅರ್ಥೊಪೆಡಿಕ್ ವೈದ್ಯ ಡಾ.ರಂಗನಾಥ್ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಈ ಹಿಂದೆ ಕ್ಷೇತ್ರದಲ್ಲಿ ನಾಲ್ವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಿದ್ದು, ಶಾಸಕ ಡಾ.ರಂಗನಾಥ್ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತುಮಕೂರು, ನವೆಂಬರ್ 20: 90 ವರ್ಷದ ವಯೋವೃದ್ದೆಗೆ ಖುದ್ದು ತಾವೇ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಕುಣಿಗಲ್ ಶಾಸಕ ಹಾಗೂ ಅರ್ಥೊಪೆಡಿಕ್ ವೈದ್ಯ ಡಾ.ರಂಗನಾಥ್ (MLA Dr Ranganath) ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಕಲ್ಲಯ್ಯಪಾಳ್ಯ ಗ್ರಾಮದ ನಿವಾಸಿ ವಯೋವೃದ್ದೆ ತಿಮ್ಮಮ್ಮ ಹಲವು ದಿನಗಳಿಂದ ಸೊಂಟದ ನೋವಿನಿಂದ ಬಳಲುತ್ತಿದ್ದರು. ಹಾಗಾಗಿ ತಿಮ್ಮಮ್ಮಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಕುಣಿಗಲ್ ಆಸ್ಪತ್ರೆ ವೈದ್ಯರು ಸಲಹೆ ನೀಡಿದ್ದರು. ಆದರೆ ಬಡತನ ಹಿನ್ನೆಲೆ ಶಸ್ತ್ರ ಚಿಕಿತ್ಸೆಗೆ ಹಣ ಒದಗಿಸಲು ಸಂಕಷ್ಟ ಎದುರಿಸುತ್ತಿದ್ದರು.
ಶಾಸಕ ಡಾ.ರಂಗನಾಥ್ ಗಮನಕ್ಕೆ ಬಂದ ಕೂಡಲೇ ವೃದ್ದೆಯ ಕಷ್ಟಕ್ಕೆ ಸ್ಪಂದಿಸಿದ್ದು, ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಸ್ವತಃ ಶಾಸಕ ಡಾ.ರಂಗನಾಥ್ ಹಾಗೂ ವೈದ್ಯರ ತಂಡದಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಈ ಹಿಂದೆ ಕ್ಷೇತ್ರದಲ್ಲಿ ನಾಲ್ವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಿದ್ದು, ಶಾಸಕ ಡಾ.ರಂಗನಾಥ್ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Dr Ranganath: ಮತ್ತೋರ್ವ ಬಡ ವ್ಯಕ್ತಿಗೆ ಉಚಿತ ಆಪರೇಷನ್ ಮಾಡಿ ಜನ ಮನ ಗೆದ್ದ ಕುಣಿಗಲ್ ಕಾಂಗ್ರೆಸ್ ಶಾಸಕ
ಇನ್ನು ಇತ್ತೀಚೆಗೆ ಮಂಡಿ ನೋವಿನಿಂದ ಬಳಲುತ್ತಿದ್ದ ಮಹಿಳಾ ಕ್ರೀಡಾಪಟುವಿಗೆ ಉಚಿತವಾಗಿ ಖುದ್ದಾಗಿ ತಾವೇ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಶಾಸಕ ಡಾ. ರಂಗನಾಥ್ ಅವರು ಮಾನವೀಯತೆಯನ್ನು ಮೆರೆದಿದ್ದರು. ಕುಣಿಗಲ್ ನಿವಾಸಿ ರಗ್ಬಿ ಆಟಗಾರ್ತಿ ಆಗಿರುವ ಭವ್ಯ ಅವರಿಗೆ ಮಂಡಿ ನೋವಿನ ಚಿಕಿತ್ಸೆ ಅಗತ್ಯವಿತ್ತು.
ಇದನ್ನೂ ಓದಿ: ಉಚಿತ ಶಸ್ತ್ರಚಿಕಿತ್ಸೆ ಮಾಡಿ ಮತ್ತೊಮ್ಮೆ ಮಾನವೀಯತೆ ಮೆರೆದ ಶಾಸಕ ಡಾ ರಂಗನಾಥ್
ಬಡತನ ಹಿನ್ನೆಲೆ ಶಸ್ತ್ರಚಿಕಿತ್ಸೆಗೆ ಹಣ ಒದಗಿಸಲು ಕುಟುಂಬ ಸಂಕಷ್ಟ ಎದುರಿಸುತ್ತಿತ್ತು. ಈ ವಿಚಾರ ಶಾಸಕರ ಗಮನಕ್ಕೆ ಬಂದ ಕೂಡಲೇ, ಮಂಡಿ ನೋವಿನಿಂದ ಬಳಲುತ್ತಿದ್ದ ಭವ್ಯಗೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಸ್ವತಃ ಶಾಸಕ ಡಾ ರಂಗನಾಥ್ ಅವರೇ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿದ್ದರು.
ಜಿಲ್ಲೆಯ ಕುಣಿಗಲ್ ತಾಲೂಕಿನ ಯಡವಾಣಿ ಗ್ರಾಮದ ಶಿವನಂಜಯ್ಯ ಎನ್ನುವವರು ಮಂಡಿ ನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಹಣವಿಲ್ಲದೆ ಶಾಸಕ ಡಾ ರಂಗನಾಥ್ ಬಳಿ ಬಂದಾಗ ತಾವೇ ಮತ್ತೊಮ್ಮೆ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಿ ಸೈ ಎನಿಸಿಕೊಂಡಿದ್ದರು. ಡಾ ರಂಗನಾಥ್ರ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ ಜಿ ಪರಮೇಶ್ವರ್ ಕೂಡ ಕೆಡಿಪಿ ಸಭೆಯಲ್ಲಿ ಶ್ಲಾಘಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:44 pm, Mon, 20 November 23