ಕಣ್ಣು ಆಪರೇಷನ್ ಮಾಡಿಸುವ ನೆಪದಲ್ಲಿ ಬಂದು ದರೋಡೆ! ತುಮಕೂರು ವೃದ್ಧ ದಂಪತಿಗೆ ವಂಚಿಸಿ ಆಭರಣ ದೋಚಿ ಪರಾರಿ

| Updated By: sandhya thejappa

Updated on: May 18, 2022 | 8:17 AM

ವ್ಯಕ್ತಿ ಮನೆಗೆ ಬಂದು ವೃದ್ಧರನ್ನ ನಂಬಿಸಲು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಪಡೆದು ಅಧಿಕಾರಿಗಳಿಗೆ ಫೋನ್ ಮಾಡುವ ನಾಟಕವಾಡಿದ್ದಾನೆ. ಬಳಿಕ ವೃದ್ಧೆಯನ್ನ ಕೂರಿಸಿಕೊಂಡು ಸಾರ್ವಜನಿಕ ಆಸ್ಪತ್ರೆ ಮುಂಭಾಗ ಬಂದಿದ್ದಾನೆ.

ಕಣ್ಣು ಆಪರೇಷನ್ ಮಾಡಿಸುವ ನೆಪದಲ್ಲಿ ಬಂದು ದರೋಡೆ! ತುಮಕೂರು ವೃದ್ಧ ದಂಪತಿಗೆ ವಂಚಿಸಿ ಆಭರಣ ದೋಚಿ ಪರಾರಿ
ವಂಚನೆಗೊಳಗಾದ ವೃದ್ಧ ಮಹಿಳೆ
Follow us on

ತುಮಕೂರು: ಜಿಲ್ಲೆಯ ಕೊರಟಗೆರೆಯ ದೊಡ್ಡಪೇಟೆಯಲ್ಲಿ ಕಣ್ಣು ಆಪರೇಷನ್ (Eye Operation) ಮಾಡಿಸುವ ನೆಪದಲ್ಲಿ ಬಂದು ವ್ಯಕ್ತಿಯೊಬ್ಬ ದರೋಡೆ (Robbery) ಮಾಡಿದ್ದಾನೆ. ವೃದ್ಧ ದಂಪತಿಗೆ ವಂಚಿಸಿ ಸುಮಾರು 3 ಲಕ್ಷ ರೂ. ಮೌಲ್ಯದ ಆಭರಣ ದೋಚಿ ಪರಾರಿಯಾಗಿದ್ದಾನೆ. ಗಿರಿಜಮ್ಮ, ರೇಣುಕಪ್ಪ ವಂಚನೆಗೆ ಒಳಗಾದ ವೃದ್ಧ ದಂಪತಿ. ಕಣ್ಣು ಆಪರೇಷನ್ ಮಾಡಿಸಿಕೊಂಡರೆ ಆಸ್ಪತ್ರೆಯಲ್ಲಿ 10 ಸಾವಿರ ಕೋಡುತ್ತಾರೆಂದು ಸುಳ್ಳು ಹೇಳಿ ಕೃತ್ಯ ಎಸಗಿದ್ದಾರೆ. ಈ ಪ್ರಕರಣ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ವ್ಯಕ್ತಿ ಮನೆಗೆ ಬಂದು ವೃದ್ಧರನ್ನ ನಂಬಿಸಲು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಪಡೆದು ಅಧಿಕಾರಿಗಳಿಗೆ ಫೋನ್ ಮಾಡುವ ನಾಟಕವಾಡಿದ್ದಾನೆ. ಬಳಿಕ ವೃದ್ಧೆಯನ್ನ ಕೂರಿಸಿಕೊಂಡು ಸಾರ್ವಜನಿಕ ಆಸ್ಪತ್ರೆ ಮುಂಭಾಗ ಬಂದಿದ್ದಾನೆ. ಒಳಗೆ ಹೋಗಿ ಆಪರೇಷನ್ ಮಾಡುತ್ತಾರೆ, ಆಪರೇಷನ್ ಮಾಡುವಾಗ ಒಡವೆಗಳು ಕೇಳುತ್ತಾರೆ. ನನ್ನ ಬಳಿ ಕೊಡಿ ಎಂದು ನಂಬಿಸಿ ವೃದ್ಧೆಯ ಬಳಿ ಒಡವೆಗಳನ್ನು ಪಡೆದಿದ್ದಾನೆ. ನಂತರ ಒಡವೆಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಆಸ್ಪತ್ರೆ ಒಳಗೆ ಯಾರು ಇಲ್ಲದಿದ್ದಾಗ ವ್ಯಕ್ತಿಯ ನಿಜಬಣ್ಣ ಬಯಲಾಗಿದೆ.

ಇದನ್ನೂ ಓದಿ: ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ‌ ಹಲ್ಲೆ ಪ್ರಕರಣ; ಮಹಾಂತೇಶ್ ಚೊಳಚಗುಡ್ಡ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಿಂದ ಹೊಡೆದಿದ್ದ ವಕೀಲೆ

ಇದನ್ನೂ ಓದಿ
Fact Check ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿರುವ ಫೋಟೊ ವಿಯೆಟ್ನಾಂನದ್ದು
Microsoft: ಉದ್ಯೋಗಿಗಳ ರಾಜೀನಾಮೆ ತಡೆಯಲು ದುಪ್ಪಟ್ಟು ವೇತನ ನೀಡುವುದಕ್ಕೆ ಮುಂದಾದ ಮೈಕ್ರೋಸಾಫ್ಟ್
Anupama Parameswaran: ಸಿಂಪಲ್ ಗೆಟಪ್​ನಲ್ಲೇ ಅಭಿಮಾನಿಗಳ ಮನಗೆದ್ದ ಅನುಪಮಾ ಪರಮೇಶ್ವರನ್
Bangalore Rain Havoc: ಕಂದಾಯ ಸಚಿವರ ಕ್ಷೇತ್ರದಲ್ಲಿ ಮಳೆ ಬಂದರೆ ಮನೆಗೆ ನೀರು ಬಂತು ಅಂತಲೇ ಲೆಕ್ಕ

4 ದಿನಗಳಿಂದ ವ್ಯಕ್ತಿ ನಾಪತ್ತೆ:
ಮಂಡ್ಯ: ನಾಗಮಂಗಲ ತಾಲೂಕಿನ ನರಗಲು ಗ್ರಾಮದಲ್ಲಿ ವ್ಯಕ್ತಿ ಕಳೆದ 4 ದಿನಗಳಿಂದ ನಾಪತ್ತೆಯಾಗಿದ್ದಾರೆ. ಹೊಲಕ್ಕೆ ಹೋಗುತ್ತೇನೆ ಎಂದು ಹೋಗಿದ್ದ ಮೋಹನ್ ನಾಪತ್ತೆಯಾಗಿದ್ದಾರೆ. 4 ದಿನ ಕಳೆದರೂ ಮೋಹನ್​​ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಮೋಹನ್​ರನ್ನ ಕುಮಾರ್ ಅಪಹರಿಸಿದ್ದಾರೆಂದು ಆರೋಪ ಕೇಳಿಬಂದಿದೆ. ಮೋಹನ್ ತನ್ನ ದೊಡ್ಡಪ್ಪನ ಮಗ ಕುಮಾರ್​ನ ಚುನಾವಣೆಗೆ ನಿಲ್ಲಿಸಿದ್ದರು. ಆದರೆ ಕುಮಾರ್ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರು. ಹೀಗಾಗಿ ಕುಮಾರ್ ಮೋಹನ್​ರನ್ನ ಅಪಹರಿಸಿದ್ದಾನೆ ಎಂದು ಆರೋಪ ಕೇಳಿಬಂದಿದೆ.

ವಿದ್ಯಾರ್ಥಿನಿಯರ ಮಾರಾಮಾರಿ:
ಬೆಂಗಳೂರು: ನಗರದ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ ವಿದ್ಯಾರ್ಥಿನಿಯರ ನಡುವೆ ಮಾರಾಮಾರಿ ನಡೆದಿದೆ. ಖಾಸಗಿ ಶಾಲೆಯ ಬಾಲಕಿಯರ ನಡುವೆ ಜಗಳವಾಗಿದೆ. ನಡು ರಸ್ತೆಯಲ್ಲೇ ಸುಮಾರು 20 ಮಂದಿ ವಿದ್ಯಾರ್ಥಿನಿಯರು ಬಡಿದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ವಿದ್ಯಾರ್ಥಿನಿಯರ ಪೋಷಕರೂ ಭಾಗಿಯಾಗಿದ್ದಾರೆ. ಜಗಳದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಗಲಾಟೆಗೆ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ: Bengaluru Rain: ಬೆಂಗಳೂರಿನಲ್ಲಿ ಮಳೆಯೋ ಮಳೆ: ರಸ್ತೆ ಮೇಲೆ ನೀರು, ತೇಲಿದ ಕಾರು, ಉರುಳಿದ ಮರ, ಜನಜೀವನ ಅಸ್ತವ್ಯಸ್ತ

ಗೃಹಿಣಿ ಶವಪತ್ತೆ:
ಮೈಸೂರು: ನಂಜನಗೂಡಿನ ಮಾಯಣ್ಣ ಬಡಾವಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವಪತ್ತೆಯಾಗಿದೆ. ಚಂಪಕಮಾಲಿನಿ ಮೃತ ಮಹಿಳೆ. ಪತಿ ಕುಟುಂಬಸ್ಥರ ವಿರುದ್ಧ ಮೃತಳ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸದ್ಯ ಚಂಪಕಮಾಲಿನಿ ಪತಿ ವಿದ್ಯಾನಂದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಣವಿಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು:
ಗದಗ: ನಗರದ ಹೊರವಲಯದ ಮುಂಡರಗಿ ರಸ್ತೆಯಲ್ಲಿ ದುಷ್ಕರ್ಮಿಗಳು ಮೇವಿನ ಬಣವಿಗಳಿಗೆ ಬೆಂಕಿ ಹಚ್ಚಿದ್ದಾರೆ. ರೈತ ವೀರುಪಾಕ್ಷಪ್ಪ ಅಣ್ಣಿಗೇರಿ ಎನ್ನುವವರಿಗೆ ಸೇರಿದ ಬಣವಿಗಳು ಬೆಂಕಿಗೆ ಆಹುತಿಯಾಗಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:05 am, Wed, 18 May 22