ಪ್ರೇಮಿಗಳ ನಡುವೆ ಕಿರಿಕ್: ಆ ವಿಡಿಯೋದಿಂದಲೇ ದುರಂತ ಸಾವುಕಂಡ ಪ್ರೇಯಸಿ

ಆಕೆ ಚೆಂದುಳ್ಳಿ ಚೆಲುವೆ.. ಓದಿನ ಜೊತೆ ಮಾಡೆಲ್ ಲೋಕದಲ್ಲಿ ಸಾಧನೆಯ ಕನಸು ಕಂಡಿದ್ದಳು. ಹೀಗಾಗಿ ಸಾಮಾಜಿಕ ಜಾಲತಾಣಗಲ್ಲಿ ವೆರೈಟಿ ವೆರೈಟಿಯಾಗಿ ಒಂದಷ್ಟು ರೀಲ್ಸ್ ಮಾಡಿ ಅಪ್ಲೋಡ್ ಮಾಡುತಿದ್ದಳು. ಆದ್ರೆ ಈ ರೀಲ್ಸ್ ಮುಂದೊಂದು ದಿನ ಆಕೆಯ ಸಾವಿಗೆ ಕಾರಣವಾಗತ್ತೆ ಎಂದು ಊಹಿಸಿರಲಿಲ್ಲ. ಹೌದು...ಆಕೆಯ ರೀಲ್ಸ್ ಆಕೆಯನ್ನೇ ಬಲಿಪಡೆದುಕೊಂಡಿದೆ. ಒಂದು ರೀಲ್ಸ್ ಪ್ರೇಮಿಗಳ ನಡುವೆ ನಡೆದ ಜಗಳ, ಕೊನೆಗೆ ಯುವತಿಯ ದುರಂತ ಸಾವಿನಲ್ಲಿ ಅಂತ್ಯಗೊಂಡಿದ್ದು, ಈ ಇಬ್ಬರ ಜಗಳ ಹಾಗೂ ಸಾವಿಗೆ ಸ್ಟ್ರೀಟ್ ಫೋಟೋಗ್ರಾಫರ್ ಕಾರಣವಾದನೇ ಎಂಬ ಅನುಮಾನ ಹುಟ್ಟಿಕೊಂಡಿದೆ.

ಪ್ರೇಮಿಗಳ ನಡುವೆ ಕಿರಿಕ್: ಆ ವಿಡಿಯೋದಿಂದಲೇ ದುರಂತ ಸಾವುಕಂಡ ಪ್ರೇಯಸಿ
Chaitanya
Updated By: ರಮೇಶ್ ಬಿ. ಜವಳಗೇರಾ

Updated on: Jun 24, 2025 | 7:26 PM

ತುಮಕೂರು, (ಜೂನ್ 24): ಪ್ರೇಮಿಗಳ (Lovers) ನಡುವೆ ರೀಲ್ಸ್​ ನ (Reels) ಫೋಟೋಸ್ ತಂದ ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಹೌದು…ರೀಲ್ಸ್​ ನಿಂದ ಪ್ರೇಮಿಗಳ ನಡುವೆ ಜಗಳವಾಗಿದ್ದು, ಬಳಿಕ ಪ್ರೇಯಿಸಿ ಚೈತನ್ಯ ಏಕಾಏಕಿ ಮನೆಯಲ್ಲಿ ಆತ್ಮಹತ್ಯೆಗೆ (Suicide) ಶರಣಾಗಿದ್ದಾಳೆ. ತುಮಕೂರು (Tumakuru) ಗ್ರಾಮಾಂತರದ ಹೊಸಹಳ್ಳಿ ನಿನ್ನೆ (ಜೂನ್ 23) ರಾತ್ರಿ ಈ ಘಟನೆ ನಡೆದಿದ್ದು, ಚೈತನ್ಯ(22) ಸಾವಿಗೆ ಶರಣಾದ ಯುವತಿ. ಚೈತನ್ಯ ಫೈನಲ್ ಇಯರ್ ಡಿಗ್ರಿ ವ್ಯಾಸಂಗ ಮಾಡುತಿದ್ದಳು. ಜೊತೆಗೆ ಜೊತೆಗೆ ಮಾಡಲಿಂಗ್ ನ ಮೇಕಪ್ ಆರ್ಟಿಸ್ಟ್ ಸಹ ಆಗಿದ್ದಳು. ಹೀಗಾಗಿ ಚೈತನ್ಯಗೆ ಫೋಟೋ ಶೂಟ್ ಮಾಡಿಸುವುದು, ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಳು. ಆದ್ರೆ, ಇದೀಗ ಇದೇ ರೀಲ್ಸ್​ ಚೈತನ್ಯಳನ್ನು ಬಲಿಪಡೆದುಕೊಂಡಿದೆ.

ತುಮಕೂರು ಗ್ರಾಮಾಂತರದ ಹೊಸಹಳ್ಳಿ ನಿವಾಸಿಯಾದ ಚೈತನ್ಯ ಈಕೆ ತನ್ನ ತಾಯಿ ಜೊತೆ ವಾಸವಿದ್ದಳು ತಾಯಿ ಮನೆಯ ಬಳಿ ಸಣ್ಣ ಅಂಗಡಿ ಇಟ್ಟುಕೊಂಡಿದ್ರೆ, ಚೈತನ್ಯ ಓದಿನ ಜೊತೆಗೆ ಬಣ್ಣದ ಲೋಕದಲ್ಲಿ ಎಂಟ್ರಿಯಾದ ಈಕೆಗೆ ರೀಲ್ಸ್ ಮಾಡುವ ಹವ್ಯಾಸ ಇತ್ತು. ಆದರೆ ಈ ರೀತಿ ಮಾಡಿದ ಅದೊಂದು ರೀಲ್ಸ್ ಆಕೆಯ ಜೀವಕ್ಕೆ ಕುತ್ತು ತರುತ್ತೆ ಅಂತ ಆಕೆಯೂ ಊಹಿಸಿರಲಿಲ್ಲ.

ಇದನ್ನೂ ಓದಿ: ಅಯ್ಯೋ ವಿಧಿಯೇ..ಸಮವಸ್ತ್ರ ಧರಿಸದೇ ಶಾಲೆಗೆ ಹೋದ್ರೆ ಬೈಯುತ್ತಾರೆಂದು ಜೀವ ಕಳೆದುಕೊಂಡ ವಿದ್ಯಾರ್ಥಿನಿ

ಚೈತನ್ಯ ಪಕ್ಕದ ರಾಮೇನಹಳ್ಳಿ ಊರಿನ ವಿಜಯ್ ಜೊತೆ ಪ್ರೀತಿಯಲ್ಲಿದ್ದಳು. ಹಲವು ವರ್ಷದ ಈ ಪ್ರೀತಿಗೆ ಪೊಷಕರ ವಿರೋಧ ಸಹ ಇತ್ತಂತೆ. ಎರಡು ವರ್ಷದ ಹಿಂದೆ ಕುಟುಂಬಸ್ಥರು ವಿಜಯ್ ಗೆ ಹಾಗೂ ಚೈತನ್ಯಗೆ ವಾರ್ನ್ ಮಾಡಿದ್ದರು. ಆದರೂ ಕುಟುಂಬಸ್ಥರಿಗೆ ಗೊತ್ತಾಗದಂತೆ ಇಬ್ಬರು ತಮ್ಮ ಪ್ರೀತಿ ಮುಂದುವರಿಸಿದ್ದಾರೆ. ಆದರೇ ನಿನ್ನೆ ರಾತ್ರಿ ಈಕೆ ವಾಟ್ಸ್ ಆ್ಯಪ್ ಸ್ಟೇಟಸ್​ಗೆ ಹಾಕಿದ್ದ ರೀಲ್ಸ್ ವಿಚಾರಕ್ಕೆ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಇನ್ನು ಈ ಜಗಳ ತಾಯಿಗೆ ಗೊತ್ತಾಗಬಾರದು ಎಂದು ಚೈತನ್ಯ ಡೋರ್ ಲಾಕ್ ಮಾಡಿದ್ದಾಳೆ. ಅದಾದ ಬಳಿಕ ವಿಜಯ್ ಹಾಗೂ ಚೈತನ್ಯ ನಡುವೆ ಅದೇನು ಚರ್ಚೆಯಾಯ್ತೋ ಗೊತ್ತಿಲ್ಲ. ಚೈತನ್ಯ ಏಕಾಏಕಿ ರೂಮ್​ ನ ಕಿಟಕಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಚೈತನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ
ಉಡುಪಿ: ಬಾಂಬ್ ಬೆದರಿಕೆ ಹಾಕುತ್ತಿದ್ದಾಕೆ ಕೊನೆಗೂ ಪೊಲೀಸ್ ಬಲೆಗೆ
ಯುವತಿ ಮೈಕೈ ಮುಟ್ಟಿ ಎಳೆದಾಡಿದ್ದ ಕಾಮುಕ ಅರೆಸ್ಟ್: ಇಲ್ಲಿದೆ ಕೇಸ್​ನ ಆಳ ಅಗಲ

ಇನ್ನು  ಜಗಳ ನಂತರ ವಿಜಯ್ ಸ್ಥಳದಿಂದ ಹೊರಟಿದ್ದ. ಕೆಲವೇ ಕ್ಷಣಗಳಲ್ಲಿ ಚೈತನ್ಯ ವಿಜಯ್‌ಗೆ ಕರೆ ಮಾಡಿ ‘ನಾನು ಸಾಯ್ತೀನಿ’ ಎಂದು ತಿಳಿಸಿದ್ದಾಳೆ. ತಕ್ಷಣ ವಿಜಯ್ ಈ ವಿಷಯವನ್ನು ಆಕೆಯ ಸಂಬಂಧಿಕರಿಗೆ ತಿಳಿಸಿದ್ದಾರೆ. ಸಂಬಂಧಿಕರು ಧಾವಿಸಿದಾಗ, ಚೈತನ್ಯ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ್ದಾಳೆ.

ಸಾವಿಗೆ ಫೋಟೋ ಗ್ರಾಫರ್ ಕಾರಣ?

ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬ ಮೇಡಂ ನೀವು ಚೆನ್ನಾಗಿ ಕಾಣಿಸ್ತೀರಿ, ನಿಮ್ಮ ಫೋಟೋ ತೆಗೆಯಬಹುದೇ ಎಂದು ಕೇಳಿ ಬರೋಬ್ಬರಿ 25 ಫೋಟೋಗಳನ್ನು ತನ್ನ ಕ್ಯಾಮೆರಾದಲ್ಲಿ ತೆಗೆದಿದ್ದಾನೆ. ಈ ಫೋಟೋಗಳನ್ನು ಹಾಗೂ ವಿಡಿಯೋವನ್ನು ಚೈತನ್ಯ ಕೂಡ ಇನ್‌ಸ್ಟಾಗ್ರಾಮ್‌ಗೆ ಹಾಕಿಕೊಂಡಿದ್ದಾಳೆ. ಆದರೆ, ಇದನ್ನು ನೋಡಿ ಸಹಿಸದ ಪ್ರೇಮಿ ವಿಜಯ್ ಪ್ರಶ್ನಿಸಲು ಗೆಳತಿಯ ಮನೆಗೆ ಬಂದು ಜಗಳ ಆರಂಭಿಸಿದ್ದಾನೆ. ಈ ವೇಳೆ ಚೈತನ್ಯ ತಾಯಿ ಸೌಭಾಗ್ಯಮ್ಮ ಮನೆ ಒಳಗೇ ಇದ್ದರು. ಅವರು ಇದ್ದ ಕೋಣೆಯ ಬಾಗಿಲು ಲಾಕ್ ಆಗಿದ್ದರಿಂದ ಚೈತನ್ಯ ಹಾಗೂ ವಿಜಯ್ ಮನೆಯ ಕಿಟಕಿಯ ಬಳಿ ಜಗಳ ಮಾಡಿಕೊಂಡಿದ್ದರು. ಬಳಿಕ ಚೈತನ್ಯ ಸಾವಿಗೆ ಶರಣಾಗಿದ್ದಾಳೆ,

ತಾಯಿ ಮಾತಿಗೆ ಬೆಲೆ ಕೊಡಲಿಲ್ಲ

ಫೋಟೋಗ್ರಾಫರ್ ತೆಗೆದ ಫೋಟೊಗಳಿಗೆ ಸಾಂಗ್ ಹಾಕಿ ರೀಲ್ಸ್ ಮಾಡಿದ್ದಾಳೆ. ಬಳಿಕ ನಿನ್ನೆ ರಾತ್ರಿ 8ಗಂಟೆಗೆ ಮೊದಲು ಈ ವಿಡಿಯೋವನ್ನು ತಾಯಿ ಸೌಭಾಗ್ಯಗೆ ಚೈತನ್ಯ ತೊರಿಸಿದ್ದಾಳೆ. ಆಗ ತಾಯಿ ಈ ವಿಡಿಯೋ ಹಾಕಬೇಡ ಅಂತಲೂ ಬುದ್ದಿವಾದ ಹೇಳಿದ್ದಾಳೆ. ಆದರೂ ಚೈತನ್ಯ ರೀಲ್ಸ್ ಅಪ್ಲೋಡ್ ಮಾಡಿದ್ದಾಳೆ. ಇದನ್ನು ನೋಡಿದ ವಿಜಯ್, ಫೋನ್ ಮಾಡಿ ಜಗಳ ಮಾಡಿದ್ದಾನೆ. ಹೀಗಾಗಿ ಒಂದು ರೀಲ್ಸ್ ಪ್ರೇಮಿಗಳ ನಡುವೆ ನಡೆದ ಜಗಳ, ಕೊನೆಗೆ ಯುವತಿಯ ದುರಂತ ಮರಣದಲ್ಲಿ ಅಂತ್ಯಗೊಂಡಿದ್ದು, ಈ ಇಬ್ಬರ ಜಗಳ ಹಾಗೂ ಸಾವಿಗೆ ಸ್ಟ್ರೀಟ್ ಫೋಟೋಗ್ರಾಫರ್ ಕಾರಣವಾದನೇ ಎಂಬ ಅನುಮಾನ ದಟ್ಟವಾಗುತ್ತಿದೆ.

ಸದ್ಯ ಚೈತನ್ಯ ಸಾವಿಗೆ ವಿಜಯ್ ಕಾರಣ ಎಂದಿದ್ದಾರೆ. ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಜಯ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತಿದ್ದಾರೆ. ಆದ್ರೆ ಪೊಲೀಸರ ಮಾಹಿತಿ ಪ್ರಕಾರ ಇಬ್ಬರ ನಡುವೆ ಪ್ರೀತಿ ಇದ್ದು ಈ ನಡುವೆ ಬಂದ ಜಗಳ ಸಾವಿಗೆ ಕಾರಣ ಎನ್ನಲಾಗುತ್ತಿದ್ದು, ಪೊಲೀಸರ ತನಿಖೆಯಲ್ಲಿ ನಿಜವಾದ ಕಾರಣ ತಿಳಿದುಬರಬೇಕಿದೆ.

ಒಟ್ಟಿನಲ್ಲಿ ಅದೇನೇ ಇದ್ದರೂ ಇನ್ನು ಆಕೆಗೆ ಚಿಕ್ಕ ವಯಸ್ಸು ಭವಿಷ್ಯದ ಬಗ್ಗೆ ನಾನ ಕನಸು ಕಂಡಿದ್ದಳು. ಆದ್ರೆ, ರೀಲ್ಸ್ ವಿಚಾರಕ್ಕೆ ಸಾವನಪ್ಪಿದ್ದು ನಿಜಕ್ಕೂ ದುರಂತ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ