ಮನಕಲಕುವ ಘಟನೆ: 2 ವರ್ಷದ ಮಗುವಿಗೆ ನೇಣು ಹಾಕಿ ತಾಯಿ ಸಹ ಆತ್ಮಹತ್ಯೆ

ತುಮಕೂರಿನಲ್ಲೊಂದು ಮನಕಲಕುವ ಘಟನೆ ನಡೆದಿದೆ. ಏನು ಅರಿಯದ ಎರಡು ವರ್ಷದ ಮಗುವಿನೊಂದಿಗೆ ತಾಯಿ ಒಂದೇ ಕುಣಿಕೆಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದೃಷ್ಟವಶಾತ್ ಇನ್ನಿಳಿದ ಎರಡು ಮಕ್ಕಳು ಸಾವಿನ ಮನೆಗೆಯಿಂದ ಪಾರಾಗಿವೆ. ತಾಯಿ ಮಗು ಕುಣಿಕೆಯಲ್ಲಿ ನೇತಾಡುವ ದೃಶ್ಯ ನೋಡಿದರೆ ಕರುಳು ಹಿಂಡುವಂತಿದೆ. ಅಷ್ಟಕ್ಕೂ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ? ಇನ್ನಿರಡು ಮಕ್ಕಳು ಸಾವಿನ ದವಡೆಯಿಂದ ಪಾರಾಗಿದ್ಹೇಗೆ? ಎನ್ನುವ ಡಿಟೇಲ್ಸ್ ಇಲ್ಲಿದೆ.

ಮನಕಲಕುವ ಘಟನೆ: 2 ವರ್ಷದ ಮಗುವಿಗೆ ನೇಣು ಹಾಕಿ ತಾಯಿ ಸಹ ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
Image Credit source: deccanchronicle
Edited By:

Updated on: Mar 10, 2026 | 10:25 PM

ತುಮಕೂರು, (ಮಾರ್ಚ್ 10): ಎರಡು ವರ್ಷದ ಮಗುವಿನ ಜೊತೆ ತಾಯಿ ಒಂದೇ ಕುಣಿಕೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತುಮಕೂರು (Tumakuru) ಜಿಲ್ಲೆ ಗುಬ್ಬಿ ತಾಲ್ಲೂಕಿನ ಹಾಗಲವಾಡಿಯಲ್ಲಿ ನಡೆದಿದೆ, ಗಂಗಾಮಣಿ(30), ಪ್ರೇಕ್ಷಾ (2) ಮೃತರು. ಗಂಗಾಮಣಿ ತನ್ನೊಟ್ಟಿಗೆ ಏನು ಅರಿಯದ 2 ವರ್ಷದ ಮಗುವಿನ ಕುತ್ತಿಗೆಗೆ ಕುಣಿಕೆ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.  ಗರ್ಭಕೋಶದ ಸಮಸ್ಯೆಯಿಂದ ಮನನೊಂದು ಮಹಿಳೆ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಇನ್ನೆರಡು ಮಕ್ಕಳು ಸಾವಿನ ಮನೆಯಿಂದ ಪಾರಾಗಿವೆ.

ಎಂಟು ವರ್ಷದ ಹಿಂದೆ ಯತೀಶ್ ಎಂಬಾತನ ಜೊತೆ ಗಂಗಾಮಣಿ ವಿವಾಹವಾಗಿದ್ದು, ದಂಪತಿಗೆ ಮೂರು ಮಕ್ಕಳು. ವೃತ್ತಿಯಲ್ಲಿ ಕ್ಯಾಂಟರ್ ಡ್ರೈವರ್ ಆಗಿರುವ ಯತೀಶ್, ಎಂದಿನಿಂತೆ ಇಂದು(ಮಾರ್ಚ್ 10) ಕೆಲಸಕ್ಕೆ ತೆರಳಿದ್ದಾರೆ. ಇನ್ನು ಇಬ್ಬರು ಮಕ್ಕಳು  ವಿನಯ್ (7) ಹಾಗೂ ರಕ್ಷಿತಾ (5) ಶಾಲೆಗೆ ಹೋಗಿದ್ದಾರೆ. ಆಗ ಮನೆಯಲ್ಲಿ ಯಾರು ಇಲ್ಲದ ವೇಳೆ ಗಂಗಾಮಣಿ ತನ್ನ ಎರಡು ವರ್ಷದ ಪ್ರೇಕ್ಷಾ ಜೊತೆ ನೇಣಿಗೆ ಶರಣಾಗಿದ್ದಾಳೆ.

ಇನ್ನು ಮಕ್ಕಳು ಶಾಲೆಯಿಂದ ಮನೆಗೆ ಬಂದಿದ್ದಾರೆ. ಆದ್ರೆ, ಮನೆ ಒಳಗಿನಿಂದ ಲಾಕ್ ಆಗಿದ್ದು, ಇದನ್ನು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾರೆ. ಬಳಿಕ ಪಕ್ಕದ ಮನೆಯವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us