ಗುಬ್ಬಿ: ಫೋನ್​​ ಪೇ ಮೂಲಕ ಲಂಚ ಪಡೆದಿದ್ದ ಪಿಎಸ್‌ಐ ಜ್ಞಾನಮೂರ್ತಿ ಗಣೇಶನ ಹಬ್ಬದ ದಿನ ಸಸ್ಪೆಂಡ್​!

| Updated By: ಸಾಧು ಶ್ರೀನಾಥ್​

Updated on: Sep 10, 2021 | 2:44 PM

ತುಮಕೂರು: ಮಾಹಿತಿ ತಂತ್ರಜ್ಞಾನ ಅಗಾಧವಾಗಿ ಬೆಳೆಯುತ್ತಿದೆ. ಅದರೊಂದಿಗೆ ಹಣಕಾಸು ವ್ಯವಹಾರವೂ ಸರಳವಾಗುತ್ತಿವೆ. ಮನಿ ಗೇಟ್​ ವೇ ಗಳ ಮೂಲಕ ಹಣಕಾಸು ವಿನಿಮಯ ಈಗ ಸಲೀಸಾಗಿ ನಡೆಯುತ್ತಿದೆ. ಆದರೆ ಇಲ್ಲೊಬ್ಬ ಆರೋಪಿ ಪೊಲೀಸ್​ ಅಧಿಕಾರಿ ಕಾಲಕ್ಕೆ ತಕ್ಕಂತೆ ಫೋನ್​​ ಪೇ ಮೂಲಕವೂ ಲಂಚ ಪಡೆದಿದ್ದು, ನೋಡಿದಿರಾ! ನಾವು ಹೆಂಗೆ ಎಂದು ವ್ಯಂಗ್ಯವಾಗಿ ಕೇಳುವಂತಿದೆ. ಆದರೆ ಪೊಲೀಸ್​ ಇಲಾಖೆ ಆತನನ್ನು ಗಣೇಶನ ಹಬ್ಬದ ದಿನ ಸಸ್ಪೆಂಡ್​ ಮಾಡಿ ಮನೆಗೆ ಕಳಿಸಿದೆ. ಗುಬ್ಬಿ ಪೊಲೀಸ್​ ಠಾಣೆ ಪಿಎಸ್‌ಐ ಜ್ಞಾನಮೂರ್ತಿ ಅಮಾನತುಗೊಂಡ ಕಿರಿಯ […]

ಗುಬ್ಬಿ: ಫೋನ್​​ ಪೇ ಮೂಲಕ ಲಂಚ ಪಡೆದಿದ್ದ ಪಿಎಸ್‌ಐ ಜ್ಞಾನಮೂರ್ತಿ ಗಣೇಶನ ಹಬ್ಬದ ದಿನ ಸಸ್ಪೆಂಡ್​!
ಗುಬ್ಬಿ: ಫೋನ್​​ ಪೇ ಮೂಲಕ ಲಂಚ ಪಡೆದಿದ್ದ ಪಿಎಸ್‌ಐ ಜ್ಞಾನಮೂರ್ತಿ ಗಣೇಶನ ಹಬ್ಬದ ದಿನ ಸಸ್ಪೆಂಡ್​!
Follow us on

ತುಮಕೂರು: ಮಾಹಿತಿ ತಂತ್ರಜ್ಞಾನ ಅಗಾಧವಾಗಿ ಬೆಳೆಯುತ್ತಿದೆ. ಅದರೊಂದಿಗೆ ಹಣಕಾಸು ವ್ಯವಹಾರವೂ ಸರಳವಾಗುತ್ತಿವೆ. ಮನಿ ಗೇಟ್​ ವೇ ಗಳ ಮೂಲಕ ಹಣಕಾಸು ವಿನಿಮಯ ಈಗ ಸಲೀಸಾಗಿ ನಡೆಯುತ್ತಿದೆ. ಆದರೆ ಇಲ್ಲೊಬ್ಬ ಆರೋಪಿ ಪೊಲೀಸ್​ ಅಧಿಕಾರಿ ಕಾಲಕ್ಕೆ ತಕ್ಕಂತೆ ಫೋನ್​​ ಪೇ ಮೂಲಕವೂ ಲಂಚ ಪಡೆದಿದ್ದು, ನೋಡಿದಿರಾ! ನಾವು ಹೆಂಗೆ ಎಂದು ವ್ಯಂಗ್ಯವಾಗಿ ಕೇಳುವಂತಿದೆ. ಆದರೆ ಪೊಲೀಸ್​ ಇಲಾಖೆ ಆತನನ್ನು ಗಣೇಶನ ಹಬ್ಬದ ದಿನ ಸಸ್ಪೆಂಡ್​ ಮಾಡಿ ಮನೆಗೆ ಕಳಿಸಿದೆ.

ಗುಬ್ಬಿ ಪೊಲೀಸ್​ ಠಾಣೆ ಪಿಎಸ್‌ಐ ಜ್ಞಾನಮೂರ್ತಿ ಅಮಾನತುಗೊಂಡ ಕಿರಿಯ ಅಧಿಕಾರಿ. ಈತನನ್ನು ಅಮಾನತುಗೊಳಿಸಿ ತುಮಕೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (ಎಸ್​ಪಿ) ರಾಹುಲ್ ಇಂದು ಆದೇಶ ಹೊರಡಿಸಿದ್ದಾರೆ.

ಏನಿದು ಲಂಚ ವೃತ್ತಾಂತ:
ಕಳೆದ ವಾರ ವಿನಾಕಾರಣ ಮ್ಯಾಕ್ಸಿಕ್ಯಾಬ್ ವೊಂದನ್ನು ತಡೆದು ಚಾಲಕನಿಗೆ ಕಿರುಕುಳ ನೀಡಿದ ಆರೋಪವನ್ನು ಪಿಎಸ್ಐ ಎದುರಿಸುತ್ತಿದ್ದರು. ಕ್ಯಾಬ್ ಚಾಲಕನಿಂದ 7 ಸಾವಿರ ರೂ. ಲಂಚವನ್ನು ಫೋನ್ ಪೇ ಮೂಲಕ ಪಿಎಸ್‌ಐ ಪಡೆದುಕೊಂಡಿದ್ದರು. ಜೀಪ್ ಚಾಲಕ ಕರಿಯಪ್ಪ ಮೊಬೈಲ್ ನಂಬರಿಗೆ ಪಿಎಸ್ಐ ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡದ್ದರು!

ಗುಬ್ಬಿ ಪೊಲೀಸ್​ ಠಾಣೆಯ PSI ಜ್ಞಾನಮೂರ್ತಿ ಲಂಚ ಸ್ವೀಕರಿಸುತ್ತಿದ್ದಾರೆಂದು ಆರೋಪಿಸಿ, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಟ್ಯಾಕ್ಸಿ ಚಾಲಕರು ತುಮಕೂರು ಜಿಲ್ಲೆ ಗುಬ್ಬಿ ಠಾಣೆ ಮುಂದೆ ಮಿಂಚಿನ ಪ್ರತಿಭಟನೆ, ಧರಣಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪಿಎಸ್‌ಐ ಜ್ಞಾನಮೂರ್ತಿಯನ್ನು ಅಮಾನತು ಮಾಡಿ ತುಮಕೂರು ಎಸ್‌ಪಿ ರಾಹುಲ್ ಕುಮಾರ್ ಶಹಾಪುರ್ ಆದೇಶಿಸಿದ್ದಾರೆ.

Also Read:
ಮೃತದೇಹ ಸಾಗಿಸೋಲ್ಲ ಎಂದ ಮ್ಯಾಕ್ಸಿ ಕ್ಯಾಬ್ ಚಾಲಕ, ದಂಡ ಹಾಕಿ ಲಂಚ ಪಡೆದ ಪಿಎಸ್ಐ; ಗುಬ್ಬಿ ಚಾಲಕರ ಮಿಂಚಿನ ಪ್ರತಿಭಟನೆ

Also Read:
ತುಮಕೂರು ಸಂಸದ ಮತ್ತು ಗುಬ್ಬಿ ಶಾಸಕರ ನಡುವೆ ವಾಕ್ಸಮರ; ಎಂಎಸ್ಎಸ್ ಸ್ಟೇಷನ್ ಉದ್ಘಾಟನೆ ಕಾರ್ಯಕ್ರಮಲ್ಲೇ ಪರಸ್ಪರ ಜಗಳ

(bribe through phonepe Gubbi police station sub inspector jnana murthy suspended)

Published On - 1:57 pm, Fri, 10 September 21