ಪೇ ಸಿಎಂ ಆಯ್ತು, ಈಗ ಪೇ ಎಂಎಲ್​ಎ ಅಭಿಯಾನ; ಬಿಜೆಪಿ ಶಾಸಕ ಜ್ಯೋತಿ ಗಣೇಶ್ ವಿರುದ್ಧ ತುಮಕೂರಿನ ಹಲವೆಡೆ ಪೋಸ್ಟರ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 25, 2023 | 10:13 AM

ಈ ಹಿಂದೆ ಪ್ರತಿಪಕ್ಷಗಳು ರಾಜ್ಯ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ, ಭಷ್ಟ ಸರ್ಕಾರ ಎಂಬಿತ್ಯಾದಿ ಟೀಕೆಗಳನ್ನು ಮಾಡುವುದರ ಜೊತೆಗೆ ಪೇ ಸಿಎಂ (PayCM) ಎಂಬ ಅಭಿಯಾನವನ್ನು ಆರಂಭಿಸಿತ್ತು. ಅದರಂತೆ ಇದೀಗ ತುಮಕೂರಿನಲ್ಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ವಿರುದ್ಧ ಪೇ ಎಂಎಲ್​ಎ(PayMLA) ಎಂಬಂತಹ ಪೋಸ್ಟರ್ ವಾರ್ ಶುರುವಾಗಿದೆ.

ಪೇ ಸಿಎಂ ಆಯ್ತು, ಈಗ ಪೇ ಎಂಎಲ್​ಎ ಅಭಿಯಾನ; ಬಿಜೆಪಿ ಶಾಸಕ ಜ್ಯೋತಿ ಗಣೇಶ್ ವಿರುದ್ಧ ತುಮಕೂರಿನ ಹಲವೆಡೆ ಪೋಸ್ಟರ್
ಬಿಜೆಪಿ ಶಾಸಕ ಜ್ಯೋತಿ ಗಣೇಶ್​ ವಿರುದ್ದ ಪೇ ಎಂಎಲ್​ಎ ಪೋಸ್ಟರ್​ ಅಭಿಯಾನ
Follow us on

ತುಮಕೂರು: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಆರೋಪ, ಪ್ರತ್ಯಾರೋಪಗಳು ಜೋರಾಗಿದ್ದು, ಅದರಂತೆ ಇದೀಗ ತುಮಕೂರಿನಲ್ಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ವಿರುದ್ಧ ಪೇ ಎಂಎಲ್​ಎ(PayMLA) ಎಂಬಂತಹ ಪೋಸ್ಟರ್ ವಾರ್ ಶುರುವಾಗಿದೆ. ಈ ಹಿಂದೆ ಪ್ರತಿಪಕ್ಷಗಳು ರಾಜ್ಯ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ, ಭಷ್ಟ ಸರ್ಕಾರ ಎಂಬಿತ್ಯಾದಿ ಟೀಕೆಗಳನ್ನು ಮಾಡುವುದರ ಜೊತೆಗೆ ಪೇ ಸಿಎಂ (PayCM) ಎಂಬ ಅಭಿಯಾನವನ್ನು ಆರಂಭಿಸಿತ್ತು.

ಇನ್ನು ರಾತ್ರೋರಾತ್ರಿ ನಗರದ ಹಲವೆಡೆ ಶಾಸಕರ ಭಾವಚಿತ್ರ ಇರುವ ಪೋಸ್ಟರ್ ಅಂಟಿಸಿರುವ ಕಾರ್ಯಕರ್ತರು. ‘PayMLA ನಿಮಗೆ ಕೆಲಸ ಆಗಬೇಕೆ, ನನಗೆ ಪೇ ಮಾಡಿ, ಭ್ರಷ್ಟಾಚಾರವೇ ನನ್ನ ಮೊದಲ ಆಧ್ಯತೆ’ ಎಂದು ಬರೆದಿರುವ ಪೋಸ್ಟರ್ ಅಂಟಿಸಲಾಗಿದೆ. ಇನ್ನು ಈ ಪೋಸ್ಟರ್​ನ್ನು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಅಂಟಿಸಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ:‘ಪೇ ಸಿಎಂ’ ಅಭಿಯಾನ ಮಾಡುತ್ತಿರುವ ಪ್ರತಿಪಕ್ಷದ ವಿರುದ್ಧ ಮಠಾಧೀಶರು ಅಸಮಾಧಾನ ; ಸಿಎಂ ಬೊಮ್ಮಾಯಿ ಪರ ಬ್ಯಾಟ್

ಇನ್ನು ಕಳೆದ ವರ್ಷ ಸೆ.23 ರಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್, ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಸೇರಿದಂತೆ ಪೇ ಸಿಎಂ ಎಂಬಂತಹ ಪೋಸ್ಟರ್ ಅಂಟಿಸಲು ಮುಂದಾಗಿದ್ದರು. ಈ ವೇಳೆ ಪೋಸ್ಟರ್ ಕಸಿದುಕೊಂಡ ಪೊಲೀಸರು, ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:12 am, Sat, 25 February 23