AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಯಕ್ತಿಕ ದ್ವೇಷ: ಸೊಗಸಾಗಿ ಬೆಳೆದು ನಿಂತಿದ್ದ ಅಡಿಕೆ, ತೆಂಗು, ಪರಂಗಿ ಮರಗಳಿಗೆ ಕೊಡಲಿ

ಈ ದುಷ್ಕೃತ್ಯ ಮಾಡಿರುವುದು ಜಮೀನು ಮಾರಾಟದ ವಿಚಾರದಲ್ಲಿನ ತಕರಾರು ದ್ವೇಷದಿಂದ ಎಂದು ಆದಿಲ್ ಆರೋಪಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಸಿ.ಎಸ್.ಪುರ ಠಾಣೆಯಲ್ಲಿ ದೂರು ನೀಡಿರುವುದಾಗಿ ಸಂತ್ರಸ್ತ ರೈತ ಆದಿಲ್ ಪಾಷಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ವೈಯಕ್ತಿಕ ದ್ವೇಷ: ಸೊಗಸಾಗಿ ಬೆಳೆದು ನಿಂತಿದ್ದ ಅಡಿಕೆ, ತೆಂಗು, ಪರಂಗಿ ಮರಗಳಿಗೆ ಕೊಡಲಿ
ವೈಯಕ್ತಿಕ ದ್ವೇಷ: ಸೊಗಸಾಗಿ ಬೆಳೆದು ನಿಂತಿದ್ದ ಅಡಿಕೆ-ತೆಂಗು-ಪರಂಗು ಮರಗಳಿಗೆ ಕೊಡಲಿ
TV9 Web
| Updated By: ಸಾಧು ಶ್ರೀನಾಥ್​|

Updated on:Jan 12, 2022 | 10:03 AM

Share

ತುಮಕೂರು: ಸೊಗಸಾಗಿ ಬೆಳೆದು ನಿಂತಿದ್ದ 170 ಅಡಿಕೆ ಸಸಿಗಳು, 15 ತೆಂಗು ಸಸಿಗಳು ಹಾಗೂ 20 ಕ್ಕೂ ಅಧಿಕ ಪರಂಗಿ ಸಸಿಗಳನ್ನು ವೈಯಕ್ತಿಕ ದ್ವೇಷಕ್ಕೆ ಕಿತ್ತುಹಾಕಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಸಿ.ಎಸ್. ಪುರ ಹೋಬಳಿ ಇಡಗೂರು ಗ್ರಾಮದಲ್ಲಿ ನಡೆದಿದೆ. ಇಡಗೂರು ಗ್ರಾಮದ ರೈತ ಎಂ.ಯು. ಆದಿಲ್ ಪಾಷಾ ಅವರಿಗೆ ಸಂಬಂಧಿಸಿದ ಸ.ನಂ. 97/2 ರಲ್ಲಿನ 3 ಎಕರೆ ಪ್ರದೇಶದಲ್ಲಿ ಕಳೆದ ಒಂದು ವರ್ಷದಿಂದ ಪೋಷಿಸುತ್ತಾ ಅಡಿಕೆ, ತೆಂಗು ಮತ್ತು ಪರಂಗಿ ಸಸಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದರು. ಮುಂಜಾನೆ ವೇಳೆ 170 ಕ್ಕೂ ಅಧಿಕ ಅಡಿಕೆ ಸಸಿಗಳನ್ನು ಬೇರು ಸಹಿತ ಕಿತ್ತು ದುಷ್ಕರ್ಮಿಗಳು ಬಿಸಾಡಿದ್ದು, ಬೋರ್ ವೆಲ್ ಪೈಪ್ ಲೈನ್ ಸಹ ಒಡೆದು ಹಾಕಿದ್ದಾರೆ.

ನಾಲ್ಕು ಪೈಪ್ ಲೈನ್ ಧ್ವಂಸ ಮಾಡಿದ್ದಾರೆ. ಈ ದುಷ್ಕೃತ್ಯ ಮಾಡಿರುವುದು ಜಮೀನು ಮಾರಾಟದ ವಿಚಾರದಲ್ಲಿನ ತಕರಾರು ದ್ವೇಷದಿಂದ ಎಂದು ಆದಿಲ್ ಆರೋಪಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಸಿ.ಎಸ್.ಪುರ ಠಾಣೆಯಲ್ಲಿ ದೂರು ನೀಡಿರುವುದಾಗಿ ಸಂತ್ರಸ್ತ ರೈತ ಆದಿಲ್ ಪಾಷಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಜಮೀನು ಮಾರಾಟ ವಿಚಾರದಲ್ಲಿ ಬೆಂಗಳೂರು ವಾಸಿ ಗಂಗಾರಾಮಯ್ಯ ಎನ್ನುವವರ ಜೊತೆ ಕರಾರು ಪತ್ರ ಮಾಡಿಸಲಾಗಿ ನಂತರ ಹಣದ ವ್ಯವಹಾರ ನಡೆದಿತ್ತು. ಆದರೆ ಇದ್ದಕ್ಕಿದ್ದಂತೆ ನನ್ನ ಜಮೀನಿನಲ್ಲಿ ರಸ್ತೆ ಮಾಡಲು ಮುಂದಾಗಿದ್ದರು. ಈ ವಿಚಾರ ಜಗಳಕ್ಕೆ ತಿರುಗಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಜಮೀನು ಅವರಿಗೆ ನೀಡಲು ಹಿಂದೇಟು ಹಾಕಿದ ನನ್ನ ಕುಟುಂಬದ‌ ಸದಸ್ಯರು ಹಣ ವಾಪಸ್ ನೀಡಿ ಅಗ್ರಿಮೆಂಟ್ ರದ್ದು ಮಾಡಲು ನಿರ್ಧಿರಿಸಿ ಅವರಿಗೆ ತಿಳಿಸಿದ ನಂತರದಲ್ಲಿ ವೈಷಮ್ಯದಿಂದಲೇ ನ್ಯಾಯಾಲಯದ ಮೆಟ್ಟಿಲು ಹತ್ತಲಾಗಿದೆ.

ನಂತರದಲ್ಲೂ ನನ್ನ ಜಮೀನಿಗೆ ಕಲ್ಲು ಕಂಬ ನೆಡಲು ಮುಂದಾದರು. ನಾವು ತಡೆದ ನಂತರದಲ್ಲಿ ನನ್ನ ಮೇಲಿನ ದ್ವೇಷಕ್ಕೆ ಕೆಲವರು ಸಮೃದ್ಧವಾಗಿ ಬೆಳೆದ ಅಡಿಕೆ, ತೆಂಗು ಸಸಿಗಳನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಿ.ಎಸ್. ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

– ಮಹೇಶ್, ಟಿವಿ9, ತುಮಕೂರು

ಇದನ್ನೂ ಓದಿ: 3ನೇ ದಿನ ಮೌನ ಮುರಿದು ಯುವ ನಾಯಕಿ ಸೌಮ್ಯಾ ರೆಡ್ಡಿ ಜತೆ ಡಿಕೆ ಶಿವಕುಮಾರ್​ ಮುಕ್ತ ಮಾತು!

Published On - 9:58 am, Wed, 12 January 22

ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಿಎಂ ಸಿದ್ದರಾಮಯ್ಯರನ್ನು ವಿನಾಕಾರಣ ದೂಷಿಸಲಾಗುತ್ತಿದೆ: ಕಾಶಪ್ಪನವರ್
ಸಿಎಂ ಸಿದ್ದರಾಮಯ್ಯರನ್ನು ವಿನಾಕಾರಣ ದೂಷಿಸಲಾಗುತ್ತಿದೆ: ಕಾಶಪ್ಪನವರ್