ತುಮಕೂರು: ಸ್ವಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ (Congress) ಮಾಜಿ ಸಂಸದ ಮುದ್ದಹನುಮೇಗೌಡ (Muddahanumegowda), ನಾನು ಕುಣಿಗಲ್ ಕ್ಷೇತ್ರದಲ್ಲಿ ಸ್ಪರ್ದೇ ಮಾಡೇ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಸಣ್ಣ ಜನ, ಕುಬ್ಜರು ರಾಜಕೀಯವಾಗಿ ದೊಡ್ಡವರು ಆಗಲ್ಲ. ಅಂತಹವರ ಹೆಸರು ಹೇಳಲ್ಲ. ಪಕ್ಷ ಸೌಜನ್ಯಕ್ಕಾದರೂ ಮಾತನಾಡಬೇಕಿತ್ತು. ಪಟ್ಟಿಯಲ್ಲಿ ಯಾರ್ಯಾನೋ ತೆಗೆದುಕೊಂಡು ಹೋಗಿ ಯಾವುದೋ ರಾಜ್ಯಕ್ಕೆ ಅವಕಾಶ ನೀಡಿದ್ದಾರೆ. ಚುನಾವಣೆಯಲ್ಲಿ ಸೋತಿರುವವರಿಗೆ ಅವಕಾಶ ನೀಡಿದ್ದಾರೆ. ಇವರಿಗೆ ಕಾಂಗ್ರೆಸ್ ಕಾರ್ಯಕರ್ತರು ದುಡಿಯಬೇಕು. ಇತ್ತೀಚಿನ ಪಕ್ಷದ ಬೆಳವಣಿಗೆ ಗಮನಿಸಿದರೆ ಕುಗ್ಗುತ್ತಿದೆ ಅನಿಸುತ್ತಿದೆ ಎಂದರು.
ಟಿವಿ9 ಜೊತೆ ಮಾತನಾಡಿದ ಮಾಜಿ ಸಂಸದರು, ನಾನು ಕುಣಿಗಲ್ ಕ್ಷೇತ್ರದಲ್ಲಿ ಸ್ಪರ್ದೇ ಮಾಡಿಯೇ ಮಾಡುತ್ತೇನೆ. ಕ್ಷೇತ್ರದ ಜನರ ಅಭಿಪ್ರಾಯ ತಿಳಿದು ಸ್ಪರ್ಧಿಸಲಿದ್ದೇನೆ. ತಾಲೂಕಿನಲ್ಲಿ ಇಬ್ಬರು ನಾಯಕರು 4-5 ವರ್ಷಗಳಿಂದ ಅಧಿಕಾರದಲ್ಲಿ ಇದ್ದಾರೆ. ಕುಣಿಗಲ್ ತಾಲ್ಲೂಕಿಗೂ ಅವರಿಗೆ ಸಂಬಂದ ಇರಲಿಲ್ಲ. ತಾಲ್ಲೂಕಿನ ಹುಚ್ಚಮಾಸ್ತಿಗೌಡರು, ವೈಕೆ ರಾಮಯ್ಯ, ಅಂದನಾಯ್ಯವರು, ಪಕ್ಷಕ್ಕೆ ಶ್ರಮವಿದೆ. 30-35 ವರ್ಷದಿಂದ ನನ್ನ ಕಾಣಿಕೆ ಕೂಡ ಸ್ವಲ್ಪ ಇದೆ. ಆದರೆ ಇವರು ಯಾರು ಇರಲಿಲ್ಲ ಎಂದು ಹೆಸರು ಹೇಳದೆ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ (D.K.Shivakumar) ಹಾಗೂ ಡಿ.ಕೆ ಸುರೇಶ್ (D.K.Suresh) ವಿರುದ್ಧ ಟೀಕಾಪ್ರಹಾರ ನಡೆಸಿದರು.
ಇದನ್ನೂ ಓದಿ: ತಪಸ್ಸು ಕಡಿಮೆಯಾಯ್ತು: ಪವನ್ ಖೇರಾ, ನಗ್ಮಾಗೆ ಟಿಕೆಟ್ ನಿರಾಕರಣೆ, ಬಯಲಿಗೆ ಬಂದ ಕಾಂಗ್ರೆಸ್ ಭಿನ್ನಮತ
ಇವರು ಯಾರು ಬರೋಕೆ, ಇವರ ಕೊಡುಗೆ ಏನು ಅಂತಿದ್ದಾರೆ. ಇವರು ಯಾರು ತಾಲೂಕಿನ ಚಿತ್ರಣದಲ್ಲಿ ಇರಲಿಲ್ಲ. ಕೆಲ ದಿನಗಳ ಹಿಂದೆ ಒಬ್ಬ ನಾಯಕರು ಹೇಳಿದ್ದಾರೆ, ಇನ್ನೋಬ್ಬ ನಾಯಕ ಎಲ್ಲಾ ಕಡೆ ಹೇಳಿಕೊಂಡು ಓಡಾಡುತ್ತಿದ್ದಾರೆ ಇವರು ಯಾರು ಬರೋಕೆ ಅಂತಾ. ಕಾಂಗ್ರೆಸ್ ಪಕ್ಷ ಬೆಳೆಯಲು ಕೆಲವರದ್ದು ಶ್ರಮವಿದೆ. ಇವರದ್ದು ಏನಿದೆ? ನಿಮ್ಮದು ಏನಿದೆ? ಜನರು ಸರಿಯಾಗಿ ಪಾಠ ಕಲಿಸುತ್ತಾರೆ ಎಂದು ಡಿಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದರು.
ಕೊಟ್ಟ ಮಾತು ಉಳಿಸಿಕೊಳ್ಳದ ಹೈಕಮಾಂಡ್ ವಿರುದ್ಧ ಆಕ್ರೋಶ
ಲೋಕಸಭಾ ಚುನಾವಣೆ ವೇಳೆ ಟಿಕೆಟ್ ನೀಡದೇ ದೇವೇಗೌಡರಿಗೆ ಟಿಕೆಟ್ ನೀಡಲಾಗಿತ್ತು. ಈ ವೇಳೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯಸಭೆಗೆ ಟಿಕೆಟ್ ನೀಡುವುದಾಗಿ ಎಂದು ಭರವಸೆ ನೀಡಿತ್ತು. ಆದರೆ, ಜೈರಾಮ್ ರಮೇಶ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ತುಮಕೂರಿನ ಹೆಬ್ಬೂರಿನಲ್ಲಿ ಮಾಜಿ ಸಂಸದರು ಹರಿಹಾಯ್ದರು.
ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ವಿನಾಶದ ಹಂತಕ್ಕೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನ ಇದೆ ಅನ್ನಿಸುತ್ತಿದೆ. ದೇಶದಲ್ಲಿ ಶ್ರಮವಹಿಸಿರುವ ಕಾಂಗ್ರೆಸ್ನ ಕಾರ್ಯಕರ್ತರಿಗೆ ಭಾವನೆ ಬರುತ್ತಿದೆ. ಲೋಕಸಭೆಯಲ್ಲಿ ನನಗೆ ಮಾತ್ರ ಟಿಕೆಟ್ ತಪ್ಪಿಸಿದರು. ನಮ್ಮ ಪಕ್ಷದವರೇ ತಪ್ಪಿಸಿದರು. ಜನತಾ ಜಲಧಾರೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮುದ್ದಹನುಮೇಗೌಡರನ್ನ ಮುಗಿಸಲು ನನ್ನ ಬಲವಂತವಾಗಿ ತಂದು ನಿಲ್ಲಿಸಿದರು ಅಂತಾ ಹೇಳಿದರು. ಇಬ್ರಾಹಿಂ ನಾವು ತಪ್ಪು ಮಾಡಿಲ್ಲ ಅಂತಾ ಪ್ರಮಾಣ ಮಾಡಿ ಎಂದರು. ಈ ಬಗ್ಗೆ ರಾಜ್ಯದ ಕಾಂಗ್ರೆಸ್ ನಾಯಕ ಪ್ರತಿಕ್ರಿಯೆ ನೀಡಿಲ್ಲ ಎಂದರು.
ಇದನ್ನೂ ಓದಿ: ಉಗ್ರರ ಮುಂದೆ ಕಾಂಗ್ರೆಸ್ ನಪುಂಸಕನಂತೆ ಮಂಡಿಯೂರಿತ್ತು; ಆರ್ಎಸ್ಎಸ್ ವಿರುದ್ಧದ ಹೇಳಿಕೆಗೆ ಬಿಜೆಪಿ ತಿರುಗೇಟು
ರಾಜ್ಯಸಭೆಗೆ ಟಿಕೆಟ್ ಕೊಡುವುದಾಗಿ ಹೇಳಿದ್ದ ರಾಹುಲ್ ಗಾಂದಿ, ಕೆಸಿ ವೇಣುಗೋಪಾಲ್ ಅವರು ಕನಿಷ್ಠ ಸೌಜನ್ಯಕ್ಕಾದರೂ ಮೂರು ವರ್ಷಗಳಿಂದ ಒಂದು ಪೋನ್ ಮಾಡಿಲ್ಲ. ನಮ್ಮ ಮಾತುಗಳನ್ನು ಉಳಿಸಿಕೊಳ್ಳಲು ಆಗಿಲ್ಲ, ನೀವು ಯೋಚನೆ ಮಾಡಬೇಡಿ ಅಂತಾ ಹೇಳಿಲ್ಲ. ಇದರ ಅರ್ಥ ರಾಜ್ಯದ ಕೆಲವು ನಾಯಕರಿಗೆ ಎರಡನೇ ಬಾರಿ ಸ್ಪರ್ದೇ ಮಾಡಿ ದೆಹಲಿಗೆ ಹೋಗೊದು ಇಷ್ಟವಿಲ್ಲ. ಕಳೆದ 25-30 ವರ್ಷಗಳಿಂದ ಇದೇ ಆಗಿದೆ. ಇದು ರಾಜಕೀಯ ಕ್ರೂರತನ, ರಾಜಕೀಯ ನಿಂದನೆ ಎಂದರು.
ನಮ್ಮ ಪ್ರಕಾರ ಅವರು ಸಣ್ಣವರು, ಹೆಸರು ಹೇಳಿ ದೊಡ್ಡವರನ್ನಾಗಿ ಮಾಡಲ್ಲ. ಅವಶ್ಯಕತೆ ಬಂದಾಗ ಹೆಸರು ಹೇಳುತ್ತೇನೆ. ನೀವು ರಾಜಕೀಯ ಜೀವನ ಅಂತ್ಯಗೊಳಿಸಲು ಆಗಲ್ಲ. ಇದು ನಿಮ್ಮ ಭ್ರಮೆ. ನನಗೆ ಕಾಂಗ್ರೆಸ್ ಸಾಕಷ್ಟು ಅವಕಾಶ ನೀಡಿದೆ, ನಾನು ಕೂಡ ಶಾಸಕನಾಗಿ ಸಂಸದನಾಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಮಾಡಿದ್ದೇನೆ ಎಂದರು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:09 am, Mon, 30 May 22