ತುಮಕೂರು: ಮಾಜಿ ಪೊಲೀಸ್ ಅಧಿಕಾರಿ ಲೋಕೇಶ್ವರ್ ಬಿಜೆಪಿ(BJP) ತೊರೆದು ಕಾಂಗ್ರೆಸ್(Congress) ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಲೋಕೇಶ್ವರ್ ಜೊತೆಗೆ ನಾಲ್ವರು ನಗರಸಭೆ ಸದಸ್ಯರು, ಓರ್ವ ಎಪಿಎಂಸಿ ಸದಸ್ಯರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ನಗರದ ಒಕ್ಕಲಿಗರ ಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಲೋಕೇಶ್ವರ್(Lokeshwar) ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಕಾಂಗ್ರೆಸ್ ಮುಖಂಡ ಶಾಂತಕುಮಾರ್ ಜೈಕಾರ ಹಾಕಿದ್ದಕ್ಕೆ ಮಾಜಿ ಶಾಸಕ ಷಡಕ್ಷರಿ ಗರಂ
ತಿಪಟೂರುನಲ್ಲಿ ಡಿಕೆಶಿ ಕಾಂಗ್ರೆಸ್ ಕಾರ್ಯಕ್ರಮ ಹಿನ್ನೆಲೆ ತಿಪಟೂರು ಕಾಂಗ್ರೆಸ್ ಮುಖಂಡ ಶಾಂತಕುಮಾರ್ ಜೈಕಾರ ಹಾಕಿದ್ದಕ್ಕೆ ಮಾಜಿ ಶಾಸಕ ಷಡಕ್ಷರಿ ಗರಂ ಆಗಿದ್ದಾರೆ. ತಿಪಟೂರು ನಗರದ ಒಕ್ಕಲಿಗರ ಭವನದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ, ಮೇಕೆದಾಟು ಪಾದಯಾತ್ರೆ ಬಗ್ಗೆ ಸಭೆ ನಡೆದಿದ್ದು, ಕಾಂಗ್ರೆಸ್ ಮುಖಂಡ ಶಾಂತಕುಮಾರ್ ಜೈಕಾರ ಹಾಕಿದ್ದಕ್ಕೆ ಮಾಜಿ ಶಾಸಕ ಷಡಕ್ಷರಿ ಸಿಟ್ಟಾಗಿದ್ದಾರೆ. ನಮ್ಮ ಪಕ್ಷದಲ್ಲಿ ಕೂಗಾಟ, ಜೈಕಾರ ಯಾವುದೂ ಇಲ್ಲ ಎಂದು ಗರಂ ಆಗಿದ್ದಾರೆ.
ಹೇ ಸುಮ್ಮನಿರಿ. 40 ವರ್ಷದಿಂದ ಪಕ್ಷ ಕಟ್ಟಿಕೊಂಡು ಬಂದಿದ್ದೇವೆ. ಹೀಗೆ ಯಾವತ್ತೂ ಮಾಡಿಲ್ಲ ಸುಮ್ಮನಿರಿ ಎಂದು ಸ್ವಾಗತ ಭಾಷಣದ ವೇಳೆ ಷಡಕ್ಷರಿ ಸಿಟ್ಟಾಗಿದ್ದಾರೆ.
ಕಾಂಗ್ರೆಸ್ ಸದಸ್ಯತ್ವ ನೊಂದಣಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಷಡಕ್ಷರಿಗೆ ನಿರಂತರವಾಗಿ ಕಾಲೇಳೆದ ಡಿಕೆಶಿ
ಕಾಂಗ್ರೆಸ್ ಪಕ್ಷಕ್ಕೆ ನೊಂದಣಿ ಕಾರ್ಯ ಆರಂಭವಾಗಿದೆ. ಇವತ್ತು ಲೋಕೇಶ್ವರ್ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾಗಿದ್ದಾರೆ. ರಾಜಕೀಯ ಪಕ್ಷದ ಸಭೆ ನಡೆಸೋಕೆ ನಾನು ಇಲ್ಲಿಗೆ ಬಂದಿಲ್ಲ. ನಮ್ಮ ಮನೆ ನಾವು ಕಟ್ಬೇಕು ಅದಕ್ಕೆ ಬಂದಿದ್ದೇವೆ. ಸೋನಿಯಾ ಗಾಂಧಿ ಅವರು ಡಿಜಿಟಲ್ ಸದಸ್ಯತ್ವ ನೊಂದಣಿ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. ಹೀಗಾಗಿ ನಾವು ಪ್ರತಿ ಬೂತ್ ಮಟ್ಟದಲ್ಲಿ ಡಿಜಿಟಲ್ ಸದಸ್ಯತ್ವದ ಮೂಲಕ ನೊಂದಣಿ ಕಾರ್ಯ ಮಾಡ್ತಿದ್ದೇವೆ. ತಿಪಟೂರು ತಾಲೂಕಿನಲ್ಲಿ 15 ಜನರನ್ನ ಚಿಪ್ ಎನ್ವೋಲರ್ ಆಗಿ ನೇಮಕ ಮಾಡಲಾಗಿದೆ. ಅವರ ಮುಖಾಂತರ ಡಿಜಿಟಲ್ ಸದಸ್ಯತ್ವ ನೊಂದಣಿ ಮಾಡ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಮ್ಮ ಪಕ್ಷದ ಷಡಕ್ಷರಿ ಅವರೆ ಇನ್ನು ಸದಸ್ಯತ್ವ ನೊಂದಣಿ ಮಾಡಿಕೊಂಡಿಲ್ಲ. ಖಾಲಿ ಬುಟ್ಟಿ ನಮ್ಮ ಷಡಕ್ಷರಿ ಎಂದು ಸ್ಟೇಜ್ ಮೇಲೆ ಎಂದು ಸದಸ್ಯತ್ವ ನೊಂದಣಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಷಡಕ್ಷರಿಗೆ ಡಿಕೆಶಿ ಕಾಲೆಳೆದಿದ್ದಾರೆ.
ಮುದೊಂದು ದಿನ ಷಡಕ್ಷರಿ ಇಲ್ಲಾಂದ್ರು ನಾನು ತಿಪಟೂರಿಗೆ ಬರುತ್ತೀವಿ. ನೀನು ಡಿಜಿಟಲ್ ಸದಸ್ಯತ್ವ ನೊಂದಣಿ ಕಾರ್ಯ ಮಾಡಿಲ್ಲ ಅಂದರೆ ನಿನ್ನ ಜಾಗಕ್ಕೆ ಬೇರೆ ಅವರನ್ನ ತಂದು ಕುರಿಸ್ತಿನಿ ಎಂದು ಮಾಜಿ ಶಾಸಕ ಷಡಕ್ಷರಿಗೆ ಡಿಕೆಶಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:
ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: ಕಾಂಗ್ರೆಸ್ ಗದ್ದಲವೇ ಕೊಲೆಗೆ ಕಾರಣ ಎಂದು ಆರೋಪಿಸಿದ ಸಿಎಂ ಬೊಮ್ಮಾಯಿ
ಮೃತ ಹರ್ಷ ಕುಟುಂಬಸ್ಥರಿಗೆ 6 ಲಕ್ಷ ರೂ. ಕೊಡಲು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ನಿರ್ಧಾರ
Published On - 1:12 pm, Wed, 23 February 22