ಮೃತ ಹರ್ಷ ಕುಟುಂಬಸ್ಥರಿಗೆ 6 ಲಕ್ಷ ರೂ. ಕೊಡಲು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ನಿರ್ಧಾರ
ಈಗಾಗಲೇ ಹರ್ಷ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಹೇಳಿದ್ದೆ. ಆ ಪ್ರಕಾರ ಬೆಂಗಳೂರಿನಿಂದ ನೇರವಾಗಿ ಶಿವಮೊಗ್ಗಕ್ಕೆ ಬಂದು ಆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುವೆ ಅಂತ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆ: ಮೃತ ಹರ್ಷ (Harsha) ಕುಟುಂಬಸ್ಥರಿಗೆ 6 ಲಕ್ಷ ರೂ. ಕೊಡುತ್ತೇನೆ ಅಂತ ಟಿವಿ9ಗೆ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ಹೇಳಿಕೆ ನೀಡಿದ್ದಾರೆ. ಸದ್ಯ ನಾನು ಬೆಂಗಳೂರಿನಲ್ಲಿ ಇರುವೆ. ನಾಳೆ ಬೆಳಿಗ್ಗೆ ನಾನು ಶಿವಮೊಗ್ಗಕ್ಕೆ ಬರುವೆ ಎಂದು ತಿಳಿಸಿದ ರೇಣುಕಾಚಾರ್ಯ, ಈಗಾಗಲೇ ಹರ್ಷ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಹೇಳಿದ್ದೆ. ಆ ಪ್ರಕಾರ ಬೆಂಗಳೂರಿನಿಂದ ನೇರವಾಗಿ ಶಿವಮೊಗ್ಗಕ್ಕೆ ಬಂದು ಆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುವೆ. ಆ ಮನೆಗೆ ಒಬ್ಬನೇ ಗಂಡು ಮಗ. ಮೇಲಾಗಿ ಇಬ್ಬರು ಸಹೋದರಿಯರು ಇದ್ದಾರೆ. ಇವರನ್ನ ಮಾತಾಡಿಸುವೇ. ಸ್ಥಳದಲ್ಲಿಯೇ ಆ ಕುಟುಂಬ ಸದಸ್ಯರಿಗೆ ಆರು ಲಕ್ಷ ರೂಪಾಯಿ ನೀಡುವೆ ಎಂದಿದ್ದಾರೆ.
ಇನ್ನು ಹರ್ಷನ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ನೀಡುವುದಾಗಿ ರಾಮನಗರದಲ್ಲಿ ಮಾಜಿ ಸಚಿವ ಸಿಪಿ ಯೋಗೇಶ್ವರ್ ಘೋಷಣೆ ಮಾಡಿದ್ದಾರೆ.
ಶಾಂತವಾಗಿದ್ದ ಶಿವಮೊಗ್ಗದಲ್ಲಿ ಕಾಣದ ಕೈಗಳು ಅಶಾಂತಿ ಸೃಷ್ಟಿ ಮಾಡಿವೆ- ಬಿ ವೈ ರಾಘವೇಂದ್ರ: 24 ಘಂಟೆಯಲ್ಲಿ ಹರ್ಷ ಕೊಲೆ ಆರೋಪಿಗಳ ಬಂಧನವಾಗಿದೆ ಅಂತ ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಶಾಂತವಾಗಿದ್ದ ಶಿವಮೊಗ್ಗದಲ್ಲಿ ಕಾಣದ ಕೈಗಳು ಅಶಾಂತಿ ಸೃಷ್ಟಿ ಮಾಡಿವೆ. ಈ ಘಟನೆಗೆ ಹಿಂದೆ ಯಾರು ಇದ್ದಾರೆ ಎನ್ನುವುದನ್ನು ಬೇರು ಮಟ್ಟದಿಂದ ಕಿತ್ತು ಬಿಸಾಕಬೇಕಿದೆ. ಇದು ಕೇವಲ ಶಿವಮೊಗ್ಗ ಸಮಸ್ಯೆ ಮಾತ್ರವಲ್ಲ. ಇದು ದೇಶದ ಸಮಸ್ಯೆ ಆಗಿದೆ. ಈಗಾಗಲೇ ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕೇಂದು ಕೇಂದ್ರ ನಾಯಕರು ಚರ್ಚೆ ಮಾಡಿದ್ದಾರೆ. ಈ ಕುರಿತು ಸಂಸತ್ತನಲ್ಲಿ ಚರ್ಚೆ ಮಾಡಲಾಗುವುದು. ಪದೇ ಪದೇ ಹಿಂದು ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿವೆ. ಇದು ಆತಂಕಕಾರಿ ಬೆಳವಣಿಗೆ ಆಗಿದೆ. ಹರ್ಷ ಕುಟುಂಬಕ್ಕೆ ತುಂಬಾಲಾರದ ನಷ್ಟ ಆಗಿದೆ ಅಂತ ಹೇಳಿದರು.
ಹರ್ಷ ಭೀಕರ ಕೊಲೆ ಖಂಡಿಸಿ ಬೃಹತ್ ಪ್ರತಿಭಟನೆ: ಕಲಬುರಗಿ: ಬಜರಂಗದಳ ಕಾರ್ಯಕರ್ತ ಹರ್ಷ ಭೀಕರ ಕೊಲೆ ಖಂಡಿಸಿ ಕಲಬುರಗಿ ನಗರದಲ್ಲಿ ಚೌಕ್ ವೃತ್ತದಿಂದ ಜಗತ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪಿಎಫ್ಐ ಹಾಗೂ ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ, ಹಂತಕರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದ್ದಾರೆ.
ರಕ್ತಕ್ಕೆ ರಕ್ತವೆ ಪರಿಹಾರ: ಇನ್ನು ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಭಜರಂಗದಳ ಕಾರ್ಯಕ್ರತರು ಪ್ರತಿಭಟನೆ ನಡೆಸುತ್ತಿದ್ದಾರೆ. ಶಿವಾಜಿ ಸರ್ಕಲ್ನಿಂದ ಅಥಣಿ ತಹಶೀಲ್ದಾರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದಾರೆ. ಪರಿಹಾರ ಪರಿಹಾರ ರಕ್ತಕ್ಕೆ ರಕ್ತವೆ ಪರಿಹಾರ.. ಜೈ ಶ್ರೀರಾಮ್ ಜೈ ಜೈ ಶ್ರೀರಾಮ್ ಅಂತ ನೂರಾರು ಭಜರಂಗದಳ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಾರೆ.
ಇದನ್ನೂ ಓದಿ
ಶಿವಮೊಗ್ಗದಲ್ಲಿ ಹರ್ಷ ಕೊಲೆ ನಂತರ ಪರಿಸ್ಥಿತಿ ವಿಕೋಪಕ್ಕೆ; ಶಾಂತಿ ಕಾಪಾಡುವಂತೆ ಹರ್ಷನ ಸಹೋದರಿ ಅಶ್ವಿನಿ ಮನವಿ
ಶಿವಾಜಿ ರೂಪದಲ್ಲಿ ಚಿತ್ರ ಬಿಡಿಸಿ ಹರ್ಷನಿಗೆ ಶ್ರದ್ಧಾಂಜಲಿ; ಸಾಮಾಜಿಕ ಜಾಲತಾಣದಲ್ಲಿ ವೈರಲ್
Published On - 12:18 pm, Wed, 23 February 22