ತುಮಕೂರು: ಕೊಟ್ಟಿಗೆಗೆ ಬೆಂಕಿ ಬಿದ್ದು 9 ಜಾನುವಾರು, 20 ಮೇಕೆ, ಕುರಿ ಸಾವು
ಬೆಂಕಿ ಬಿದ್ದ ಪರಿಣಾಮ ಕೊಟ್ಟಿಗೆಯಲ್ಲಿದ್ದ 9 ಹಸುಗಳು ಮತ್ತು 20 ಮೇಕೆಗಳು ಮೃತಪಟ್ಟಿರುವ ಘಟನೆ ತುಮಕೂರು ತಾಲೂಕಿನ ಕಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಲ್ಲದೆ ಒಂದು ಟ್ರ್ಯಾಕ್ಟರ್, ಅಡಕೆ, ಕೃಷಿ ಉಪಕರಣಗಳು ಬೆಂಕಿಗಾಹುತಿಯಾಗಿವೆ.
ತುಮಕೂರು, ಜನವರಿ 14: ಬೆಂಕಿ (Fire) ಬಿದ್ದ ಪರಿಣಾಮ ಕೊಟ್ಟಿಗೆಯಲ್ಲಿದ್ದ 9 ಹಸುಗಳು ಮತ್ತು 20 ಮೇಕೆಗಳು ಮೃತಪಟ್ಟಿರುವ ಘಟನೆ ತುಮಕೂರು (Tumakuru) ತಾಲೂಕಿನ ಕಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಲ್ಲದೆ ಒಂದು ಟ್ರ್ಯಾಕ್ಟರ್, ಅಡಕೆ, ಕೃಷಿ ಉಪಕರಣಗಳು ಬೆಂಕಿಗಾಹುತಿಯಾಗಿವೆ. ನಾಲ್ಕೈದು ಜಾನುವಾರುಗಳ ರಕ್ಷಣೆ ಮಾಡಲಾಗಿದೆ. ಕಾರನಹಳ್ಳಿ ನಿವಾಸಿ ಚಿಕ್ಕಣ್ಣಗೆ ಸೇರಿದ ದನದ ಕೊಟ್ಟಿಗೆ ಬೆಂಕಿ ಬಿದ್ದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಂಕಿ ಕೆನ್ನಾಲಿಗೆ ಸುಟ್ಟು ಕರಕಲಾದ 40 ಟ್ರ್ಯಾಕ್ಟರ್ ಹುಲ್ಲಿನ ಬಣವೆ
ಬಳ್ಳಾರಿ: ಬುದ್ಧಿಮಾಂದ್ಯನೋರ್ವ ಭತ್ತದ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿರುವ ಘಟನೆ ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. 40 ಟ್ರ್ಯಾಕ್ಟರ್ ಹುಲ್ಲಿನ ಬಣವೆ ಸುಟ್ಟು ಕರಕಲಾಗಿದೆ. ತಾಯಣ್ಣ, ರಾಘವೇಂದ್ರ, ಶೇಖರ್ ಎಂಬುವರ ಬಣವೆಗಳು ಬೆಂಕಿಗಾಹುತಿಯಾಗಿವೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಸಿರಗುಪ್ಪ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಬೆಂಕಿ ಹಚ್ಚಿಕೊಂಡ ದಂಪತಿ ಆತ್ಮಹತ್ಯೆಗೆ ಯತ್ನ, ಪತ್ನಿ ಸಾವು
ಕಬ್ಬಿನ ಗದ್ದೆಯಲ್ಲಿ ಲಾರಿ ಹರಿದು ಕುರಿಗಾಹಿಗಳು ಸಾವು
ಬಳ್ಳಾರಿ: ಕಬ್ಬಿನ ಗದ್ದೆಯಲ್ಲಿ ಲಾರಿ ಹರಿದು ಇಬ್ಬರು ಕುರಿಗಾಹಿಗಳು ಮೃತಪಟ್ಟಿರುವ ಘಟನೆ ಬಳ್ಳಾರಿ ತಾಲೂಕಿನ ಬೆಂಚಿಕೊಟ್ಟಲು ಗ್ರಾಮದಲ್ಲಿ ನಡೆದಿದೆ. ಮ್ಯಾಗಳಹಟ್ಟಿ ಸಿದ್ದಪ್ಪ(51), ಯರಿಽಸ್ವಾಮಿ(20) ಮೃತ ದುರ್ದೈವಿಗಳು. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲೂಕಿನ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಕುರಿಗಳನ್ನು ಕಟ್ಟಿಹಾಕಿ, ಕುರಿಗಾಹಿಗಳು ಮಲಗಿದ್ದರು. ಈ ವೇಳೆ ಕಬ್ಬು ಲೋಡ್ ಮಾಡಿಕೊಳ್ಳಲು ಲಾರಿ ಬಂದಿದ್ದು, ಮಲಗಿದವರ ಮೇಲೆ ಹರಿದಿದೆ. ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ