ತುಮಕೂರಿನಲ್ಲಿ ಬೆಂಕಿ ತಗುಲಿ ಮನೆ ಭಸ್ಮ; ಸುಟ್ಟು ಕರುಕಲಾದ ವೃದ್ಧ

ದೊಡ್ಡಬಸವಯ್ಯ ಎಂಬ ವೃದ್ಧ ಬೆಂಕಿಗಾಹುತಿಯಾದ ದುರ್ದೈವಿ. ಮನೆಗೆ ವಿದ್ಯುತ್ ಸಂಪರ್ಕವಿಲ್ಲದೆ, ವೃದ್ಧ ದೀಪ ಹೊತ್ತಿಸಿದ್ದರು.

ತುಮಕೂರಿನಲ್ಲಿ ಬೆಂಕಿ ತಗುಲಿ ಮನೆ ಭಸ್ಮ; ಸುಟ್ಟು ಕರುಕಲಾದ ವೃದ್ಧ
ಮನೆಯೊಂದಿಗೆ ಸುಟ್ಟು ಕರಕಲಾಗಿರುವ ವೃದ್ಧ
Follow us
TV9 Web
| Updated By: sandhya thejappa

Updated on:Aug 11, 2021 | 11:56 AM

ತುಮಕೂರು: ಬೆಂಕಿ (Fire) ತಗುಲಿ ಮನೆ ಭಸ್ಮವಾಗಿರುವ ಘಟನೆ ತುಮಕೂರು ತಾಲೂಕಿನ ಅಸಲೀಪುರದಲ್ಲಿ ನಡೆದಿದೆ. ಮನೆಯೊಂದಿಗೆ 70 ವರ್ಷದ ವೃದ್ಧ ಕೂಡಾ ಸಜೀವವಾಗಿ  ಸುಟ್ಟು ಕರುಕಲಾಗಿದ್ದಾರೆ. ದೊಡ್ಡಬಸವಯ್ಯ ಎಂಬ ವೃದ್ಧ ಬೆಂಕಿಗಾಹುತಿಯಾದ ದುರ್ದೈವಿ. ಮನೆಗೆ ವಿದ್ಯುತ್ ಸಂಪರ್ಕವಿಲ್ಲದೆ, ವೃದ್ಧ ದೀಪ ಹೊತ್ತಿಸಿದ್ದರು. ಮನೆಯಲ್ಲಿ ಇದ್ದ ತೆಂಗಿನ ಮಟ್ಟೆಯ ಚೀಲಕ್ಕೆ ಬೆಂಕಿ ತಗುಲಿ ಮನೆ ಭಸ್ಮ ಸಂಪೂರ್ಣ ಭಸ್ಮಾವಗಿದೆ. ಸದ್ಯ ಸ್ಥಳಕ್ಕೆ ಬೆಳ್ಳಾವಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಸಲೀಪುರ ಗ್ರಾಮದಲ್ಲಿ ಬೆಳಗಿನ ಜಾವ ಮನೆಗೆ ಬೆಂಕಿ ತಗುಲಿ ವೃದ್ಧ ದೊಡ್ಡಬಸವಯ್ಯ ಸಂಪೂರ್ಣ ಸಜೀವ ದಹನವಾಗಿದ್ದಾರೆ. ಮನೆಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ವೃದ್ಧ ಪ್ರತಿ ರಾತ್ರಿ ದೀಪದ ಬೆಳಕಿನಲ್ಲಿ ಕಾಲ ಕಳೆಯುತ್ತಿದ್ದರಂತೆ. ರಾತ್ರಿ ಮಲಗುವ ವೇಳೆ ದೀಪ ಹಚ್ಚಿ ಪಕ್ಕದಲ್ಲಿ ಇಟ್ಟುಕೊಂಡು ಮಲಗಿದಾಗ ಈ ಘಟನೆ ಸಂಭವಿಸಿದೆ.

ವೃದ್ಧ ಒಬ್ಬಂಟಿಯಾಗಿ ಮನೆಯಲ್ಲಿದ್ದರು. ಇವರಿಗೆ ಇಬ್ಬರು ಪತ್ನಿಯರಿದ್ದು, ದೊಡ್ಡ ಪತ್ನಿ ಬಿಟ್ಟು ಹೋಗಿದ್ದಾಳೆ. ಚಿಕ್ಕ ಪತ್ನಿ ಮಾನಸಿಕ ಅಸ್ವಸ್ತೆಯಾಗಿದ್ದು, ಮನೆಯಲ್ಲಿ ಇರುತಿರಲಿಲ್ಲ ಎಂದು ತಿಳಿದುಬಂದಿದೆ. ಅಲ್ಲದೇ ವೃದ್ಧನಿಗೆ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲವಂತೆ.

ಇದನ್ನೂ ಓದಿ

ಚಿಕ್ಕಮಗಳೂರು ಗ್ರಾಮವೊಂದಕ್ಕೆ ನುಗ್ಗಿದ ಕಾಡಾನೆ, ಜನರಿಗೆ ಆತಂಕ; ಫೋಟೋಗಳು ಇಲ್ಲಿವೆ

Sperm Whale Ambergris: ಮತ್ತೆ 80 ಕೋಟಿ ರೂ ಮೌಲ್ಯದ ಅಂಬರ್​​​ಗ್ರೀಸ್​ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು, ಐವರ ಬಂಧನ

(house has been burned to the fire and elderly man with the house burned to death at tumkur)

Published On - 11:46 am, Wed, 11 August 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ