Tumakur News: ಏಕಶಿಲಾ ಬೆಟ್ಟದಲ್ಲಿ ಸಿಲುಕಿಕೊಂಡಿದ್ದ ತಂದೆ-ಮಗ ಬದುಕಿ ಬಂದಿದ್ದೇ ಒಂದು ರೋಚಕ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 18, 2022 | 11:06 AM

ಏಕಶಿಲಾ ಬೆಟ್ಟ ಹತ್ತಲು ಬೆಂಗಳೂರಿನಿಂದ ಪುತ್ರನ ಸಮೇತ ತಂದೆ ಬಂದಿದ್ದು, ಮಳೆಯಿಂದ ಬೆಟ್ಟದಲ್ಲಿ ಜಾರುವ ಆತಂಕ ಎದುರಾದ ಕಾರಣ ಬೆಟ್ಟದ ಅರ್ಧದಲ್ಲಿ ತಂದೆ ಮಗ ಕುಳಿತಿದ್ದಾರೆ.

Tumakur News: ಏಕಶಿಲಾ ಬೆಟ್ಟದಲ್ಲಿ ಸಿಲುಕಿಕೊಂಡಿದ್ದ ತಂದೆ-ಮಗ ಬದುಕಿ ಬಂದಿದ್ದೇ ಒಂದು ರೋಚಕ
ಮಧುಗಿರಿ ಪೊಲೀಸ್​ ಸಿಬ್ಬಂದಿಯಿಂದ ತಂದೆ ಮಗನ ರಕ್ಷಣೆ ಮಾಡಲಾಯಿತು.
Follow us on

ತುಮಕೂರು: ಜಿಲ್ಲೆಯ ಮದುಗಿರಿ ಪಟ್ಟಣದ ಏಕಶಿಲಾ ಬೆಟ್ಟದಲ್ಲಿ (Madhugiri Hills) ಸಿಲುಕಿಕೊಂಡಿದ್ದ ತಂದೆ-ಮಗನನ್ನು ಪೊಲೀಸರು ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ. ಏಕಶಿಲಾ ಬೆಟ್ಟ ಹತ್ತಲು ಬೆಂಗಳೂರಿನಿಂದ ಪುತ್ರನ ಸಮೇತ ತಂದೆ ಬಂದಿದ್ದು, ಮಳೆಯಿಂದ ಬೆಟ್ಟದಲ್ಲಿ ಜಾರುವ ಆತಂಕ ಎದುರಾದ ಕಾರಣ ಬೆಟ್ಟದ ಅರ್ಧದಲ್ಲಿ ತಂದೆ ಮಗ ಕುಳಿತಿದ್ದಾರೆ. ಮಧುಗಿರಿ ಪೊಲೀಸರ ರಕ್ಷಣೆಗೆ ಮೊರೆ ಹೋಗಿದ್ದು, ಕೂಡಲೇ ಮಧುಗಿರಿ ಪಿಎಸ್​ಐ ರಮೇಶ್ ಹಾಗೂ ಸಿಬ್ಬಂದಿಯಿಂದ ಇಬ್ಬರನ್ನ ರಕ್ಷಣೆ ಮಾಡಲಾಗಿದೆ. ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಮೈಸೂರು ಹೊರವಲಯದ ಹಳ್ಳಿಗಳ ನಿವಾಸಿಗಳಿಗೆ ಕಂಟಕವಾಗಿದ್ದ ಚಿರತೆ ಸೆರೆ, ಬಂಡಿಪುರ ರಾಷ್ಟ್ರೀಯ ಉದ್ಯಾನವನಕ್ಕೆ ರವಾನೆ

ಆಹಾರ ಅರಸುತ್ತ ಬಂದ ಜಿಂಕೆ ಮೇಲೆ ನಾಯಿಗಳು ದಾಳಿ

ಕಾರವಾರ: ಆಹಾರ ಅರಸುತ್ತ ನಾಡಿಗೆ ಬಂದ ಜಿಂಕೆ ಮೇಲೆ ಬೀದಿ ನಾಯಿಗಳು ದಾಳಿ ಮಾಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಂಜಗಿ ಗ್ರಾಮದಲ್ಲಿ ನಡೆದಿದೆ. 3-4 ವರ್ಷದ ಜಿಂಕೆ ಗ್ರಾಮದ ಹೊರವಲಯದಲ್ಲಿ ಗರಿಕೆ ತಿನ್ನುತ್ತ ನಿಂತಿದ್ದಾಗ ನಾಯಿಗಳು ದಾಳಿದ್ದು, ಗ್ರಾಮಸ್ಥರಿಂದ ಜಿಂಕೆ ರಕ್ಷಣೆ ಮಾಡಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ, ಗಾಯಗೊಂಡ ಜಿಂಕೆಗೆ ಚಿಕಿತ್ಸೆ ನೀಡಿ ರಕ್ಷಣೆ ಮಾಡಿದರು.

ಇದನ್ನೂ ಓದಿ: ರಭಸವಾಗಿ ಹರಿಯುವ ವರದಾ ನದಿ ನೀರಿನಲ್ಲಿ ವೃದ್ಧನ ಹುಚ್ಚಾಟ; ಮೇಲಿಂದ ಜಿಗಿದು ಸ್ವಿಮ್ಮಿಂಗ್

ಬೋನಿಗೆ ಬಿದ್ದ ಚಿರತೆ

ಮೈಸೂರು: ತಾಲ್ಲೂಕು ರಟ್ಟನಹಳ್ಳಿ ಗ್ರಾಮದಲ್ಲಿ ಚಿರತೆ ಬೋನಿಗೆ ಬಿದ್ದಿರುವಂತಹ ಘಟನೆ ನಡೆದಿದೆ. ಹಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಭೀತಿ ಮೂಡಿಸಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ದೂರು ನೀಡಿದ್ದರು. ಗ್ರಾಮಸ್ಥರ ಮನವಿ ಮೇರೆಗೆ ಕುಮಾರ್ ಎಂಬುವರ ತೋಟದಲ್ಲಿ ಬೋನು ಇಡಲಾಗಿತ್ತು. ಸುಮಾರು ನಾಲ್ಕು ವರ್ಷದ ಗಂಡು ಚಿರತೆ ಬೋನಿಗೆ ಬಿದಿದ್ದು,  ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ರವಾನೆ ಮಾಡಲಾಗಿದೆ.