ತುಮಕೂರಿನಲ್ಲಿ ಗಿಣಿ ಮಿಸ್ಸಿಂಗ್! ಹುಡುಕಿ ಕೊಟ್ಟವರಿಗೆ 50 ಸಾವಿರ ರೂ. ಬಹುಮಾನ ಘೋಷಣೆ
ಬೂದಿ ಬಣ್ಣದ ಗಿಣಿಗೆ ರುಸ್ತುಮಾ ಎಂಬ ಹೆಸರಿಟ್ಟಿದ್ದರು. ಇದಕ್ಕೆ ಎರಡೂವರೆ ವರ್ಷವಂತೆ. ಜುಲೈ 16ರಿಂದ ಕಾಣೆಯಾಗಿದ್ದು, ಹುಡುಕಿಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನ ಸಿಗಲಿದೆ.
ತುಮಕೂರು: ಕೆಲವರು ಪ್ರಾಣಿ, ಪಕ್ಷಿಗಳನ್ನ ಪ್ರೀತಿಯಿಂದ ಸಾಕುತ್ತಾರೆ. ಮನೆಯಲ್ಲಿ ಒಬ್ಬರಂತೆ ನೋಡಿಕೊಳ್ಳುತ್ತಾರೆ. ಸಂತೋಷದ ಘಳಿಗೆಗಳನ್ನ ಸಾಕು ಪ್ರಾಣಿ, ಪಕ್ಷಿಗಳ ಜೊತೆ ಕಳೆಯುತ್ತಾರೆ. ಬೇಜಾರಾದಾಗ ಅವುಗಳ ಜೊತೆ ಹಂಚಿಕೊಳ್ಳುತ್ತಾರೆ. ಹೀಗೆ ಮಗು ರೀತಿ ನೋಡಿಕೊಳ್ಳುತ್ತಿದ್ದ ಗಿಣಿಯೊಂದು (Parrot) ಕಾಣೆಯಾಗಿದೆ. ತುಮಕೂರಿನ ಜಯನಗರ ನಿವಾಸಿಯೊಬ್ಬರು ಗಿಣಿಯನ್ನು ಸಾಕಿದ್ದರು. ಆದರೆ ಮನೆಯಲ್ಲಿದ್ದ ಗಿಣಿ ಕಾಣೆಯಾಗಿದೆ. ಹೀಗಾಗಿ ಕಾಣಿಯಾಗಿರುವ ಗಿಣಿ ಹುಡುಕಿಕೊಟ್ಟರೆ 50 ಸಾವಿರ ರೂ. ಬಹುಮಾನ (Prize) ನೀಡಲಾಗುತ್ತದೆ ಎಂದು ನಿವಾಸಿ ಪ್ರಕಟಣೆ ಹೊರಡಿಸಿದ್ದಾರೆ.
ಬೂದಿ ಬಣ್ಣದ ಗಿಣಿಗೆ ರುಸ್ತುಮಾ ಎಂಬ ಹೆಸರಿಟ್ಟಿದ್ದರು. ಇದಕ್ಕೆ ಎರಡೂವರೆ ವರ್ಷವಂತೆ. ಜುಲೈ 16ರಿಂದ ಕಾಣೆಯಾಗಿದ್ದು, ಹುಡುಕಿಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನ ಸಿಗಲಿದೆ.
ಪ್ರಕಟಣೆಯಲ್ಲಿ ಏನಿದೆ? ನಮ್ಮ ಮನೆಯ ನೆಚ್ಚಿನ ಸದಸ್ಯರಲ್ಲಿ ಒಂದಾಗಿದ್ದ ಮುದ್ದಿನ ಬೂದಿ ಬಣ್ಣದ ಗಿಣಿ ಜುಲೈ 16ರಿಂದ ಕಾಣೆಯಾಗಿದೆ. ಈ ಗಿಣಿ ಮುಂದೆ ಸಂಪೂಣರ್ ಗ್ರೇ ಬಣ್ಣ ಇದ್ದು, ಹಿಂದೆ ಕೆಂಪು ಬಣ್ಣದ ಪುಕ್ಕ ಹೊಂದಿದೆ. ಒಂದು ವೇಳೆ ಈ ಗಿಣಿಯು ಯಾರಿಗಾದರೂ ಸಿಕ್ಕಿದ್ದರೆ ದಯವಿಟ್ಟು ಸಂಪರ್ಕಿಸಿ. ಹುಡುಕಿ ಕೊಟ್ಟವರಿಗೆ 50 ಸಾವಿರ ರೂ. ತಕ್ಷಣ ನೀಡಲಾಗುತ್ತದೆ ಎಂದು ಗಿಣಿ ಮಾಲೀಕ ಪ್ರಕಟಣೆ ಹೊರಡಿಸಿದ್ದಾರೆ.
ಇದನ್ನೂ ಓದಿ: Oppo Reno 8 Series: ಭಾರತದಲ್ಲಿ ಬಹುನಿರೀಕ್ಷಿತ ಒಪ್ಪೋ 8 ರೆನೋ ಸರಣಿ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ
ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಮನೆ ಮಾಲೀಕ, ನಮ್ಮ ಮನೆಯಲ್ಲಿ ಆಫ್ರಿಕನ್ ಗಿಣಿ ಸಾಕಿದ್ದೆವು. ಮೊನ್ನೆ ಹೊರಗೆ ಹಾರಿ ಹೋಗಿದೆ. ದೂರ ಎಲ್ಲೂ ಹೋಗಿರಲ್ಲ. ಸುತ್ತಮುತ್ತ ಎಲ್ಲೋ ಇರುತ್ತದೆ. ನಾವು ತುಂಬಾ ಮುದ್ದಾಗಿ ಸಾಕಿದ್ದೇವೆ. ನಮಗೆ ತುಂಬಾ ನೋವಾಗಿದೆ. ದಯವಿಟ್ಟು ಯಾರಿಗಾದರೂ ಸಿಕ್ಕಿದರೆ ತಂದು ಕೊಡಿ ಎಂದು ಕೇಳಿಕೊಂಡಿದ್ದಾರೆ.
ರುಸ್ತುಮಾ ಕಾಣೆಯಾಗಿದೆ. ಅದನ್ನ ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮ ಮನೆ ಕಿಟಕಿ, ಬಾಲ್ಕಾನಿ ಬಳಿ ಗಮನಿಸಿ. ಯಾರಿಗಾದರೂ ಸಿಕ್ಕಿದ್ದರೆ ದಯವಿಟ್ಟು ತಂದು ಕೊಡಿ ಎಂದು ಮನೆ ಮಾಲೀಕನ ಮಗಳು ಕೇಳಿಕೊಂಡರು.
Published On - 9:16 am, Tue, 19 July 22