ತುಮಕೂರು: ಬಿಜೆಪಿ, ಜೆಡಿಎಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡಿವೆ. ಪರಿಷತ್‌ನ 7 ಸ್ಥಾನಗಳಿಗೆ ಮಾತ್ರ ಜೆಡಿಎಸ್ ಅಭ್ಯರ್ಥಿ ಹಾಕಿದ್ದಾರೆ. ಹೀಗಾಗಿ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡ ಅನುಮಾನವಿದೆ ಎಂದು ತುಮಕೂರಿನಲ್ಲಿ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಇಂದು (ನವೆಂಬರ್ 23) ಹೇಳಿಕೆ ನೀಡಿದ್ದಾರೆ. ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಕರ್ನಾಟಕದ ಮೂರು ಪ್ರಮುಖ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ಕಾಂಗ್ರೆಸ್ ಹಾಗೂ ಬಿಜೆಪಿ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಜೆಡಿಎಸ್ ಕೇವಲ 7 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಹಿನ್ನೆಲೆಯಲ್ಲಿ ಪರಮೇಶ್ವರ್ ಹೀಗೆ ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆಗೆ ರಾಜೇಂದ್ರ ಅಭ್ಯರ್ಥಿ ಆಗಿದ್ದಾರೆ. ರಾಜೇಂದ್ರ ನಾಮಪತ್ರ ಸಲ್ಲಿಸಿದ್ದಾರೆ. ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲ ಇರುವ ಸದಸ್ಯರು ಹೆಚ್ಚಿದ್ದಾರೆ. ರಾಜೇಂದ್ರ ಗೆಲ್ಲುವ ವಿಶ್ವಾಸವಿದೆ. ಬಿಜೆಪಿ ಪಕ್ಷ ಗ್ರಾ.ಪಂ ಮಟ್ಟದಲ್ಲಿ ಅಭಿವೃದ್ದಿ ಮಾಡಿಲ್ಲ. ಬೆಲೆ ಏರಿಕೆ ತಡೆಯಲು ವಿಫಲರಾಗಿದ್ದಾರೆ. ಬೆಲೆ ಇಳಿಸಿ ಜನರಿಗೆ ರಕ್ಷಣೆ ಮಾಡುತ್ತೇನೆಂದು ಪ್ರಧಾನಿ ಹೇಳಿಲ್ಲ. ಪ್ರಧಾನಿ ಮಂತ್ರಿಗೆ ಕಂಟ್ರಾಕ್ಟರ್ಸ್ ಸಮೂಹ ಪತ್ರ ಬರೆದಿದ್ದಾರೆ. ಲಂಚ ಕೊಡುವ ಬಗ್ಗೆ ಪತ್ರ ಬರೆದಿದ್ದಾರೆ. ಅಧಿಕೃತವಾಗಿ ನೋಂದಣಿಯಾಗಿರುವ ಸಂಘ ಪ್ರಧಾನಿಗೆ ಪತ್ರ ಬರೆದಿದೆ. ದೇಶ ಇತಿಹಾಸದಲ್ಲಿ ಇದೇ ಮೊದಲು ಅನ್ನಿಸುತ್ತದೆ. ಕಾಂಗ್ರೆಸ್ ಪಕ್ಷ ಖಂಡಿತವಾಗಿ ಹೆಚ್ಚಿನ ಸ್ಥಾನವನ್ನು ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಎರಡು ಪಕ್ಷದ ಅಭ್ಯರ್ಥಿಗಳು ಎದುರಾಳಿಗಳು. ಕಾಂಗ್ರೆಸ್ಗೆ ಜಿಲ್ಲೆಯಲ್ಲಿ ಹೆಚ್ಚಿನ ಸದಸ್ಯರಿದ್ದಾರೆ. ಬಿಜೆಪಿ- ಜೆಡಿಎಸ್ ಈ ಚುನಾವಣೆಯಲ್ಲಿ ಹೋಂದಾಣಿಕೆ ಮಾಡಿಕೊಂಡಿದೆ ಎಂಬ ಬಗ್ಗೆ ನಮಗೆ ಅನುಮಾನವಿದೆ. 7 ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕಿರುವುದು ಅನುಮಾನ ಮೂಡಿಸಿದೆ ಎಂದು ತುಮಕೂರಿನಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿದ್ದಾರೆ.
ಬಿಜೆಪಿ ಯಾವುದೇ ಒಪ್ಪಂದದಿಂದ ಬೆಳೆದುಬಂದ ಪಕ್ಷ ಅಲ್ಲ
ಬಿಜೆಪಿ, ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡ ಡಾ.ಜಿ. ಪರಮೇಶ್ವರ್ ಆರೋಪಕ್ಕೆ ತುಮಕೂರಿನಲ್ಲಿ ಬಿಜೆಪಿ ಎಂಎಲ್‌ಸಿ ರವಿಕುಮಾರ್ ತಿರುಗೇಟು ನೀಡಿದ್ದಾರೆ. ಈ ಹೇಳಿಕೆ ಚುನಾವಣೆಗೂ ಮುನ್ನ ಸೋಲು ಒಪ್ಪಿಕೊಂಡಂತೆ. ಮೂರು ಪಕ್ಷದವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಯಾದ ಬಳಿಕ ಹೇಗೆ ಒಪ್ಪಂದವಾಗುತ್ತೆ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಒಳ ಒಪ್ಪಂದ ಆಗಿದ್ದರೇ ಜೆಡಿಎಸ್ ಯಾಕೆ ಕ್ಯಾಂಡಿಯೇಟ್ ಹಾಕ್ತಿದ್ದರು. ಜೆಡಿಎಸ್ ನಲ್ಲಿ ಅಭ್ಯರ್ಥಿ ಇರಲಿಲ್ಲ ಹೀಗಾಗಿ ಏಳು ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕಿದ್ದಾರೆ. ಬಿಜೆಪಿ ಯಾವುದೇ ಒಪ್ಪಂದದಿಂದ ಬೆಳೆದುಬಂದ ಪಕ್ಷ ಅಲ್ಲ. ಸ್ವಂತ ಶ್ರಮ ಬೆವರಿನಿಂದ ಬೆಳೆದ ಬಂದ ಪಕ್ಷ. ಜನರ ಕೆಲಸವನ್ನ ಮಾಡುವ ಮೂಲಕ ಬೆಳೆದ ಬಂದ ಪಕ್ಷ. ಒಂದೊಂದು ಕ್ಷೇತ್ರದಲ್ಲಿ ಐದಾರು ಆಕಾಂಕ್ಷಿಗಳಿದ್ದರು. ಇದನ್ನು ಸಿದ್ದರಾಮಯ್ಯ ಪರಮೇಶ್ವರ್ ಡಿಕೆಶಿ ಅರ್ಥಮಾಡಿಕೊಳ್ಳಬೇಕು ಎಂದು ರವಿಕುಮಾರ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್; ಕೆಪಿಸಿಸಿ ನಡೆಯನ್ನು ಟೀಕಿಸಿದ ಎಂಪಿ ರೇಣುಕಾಚಾರ್ಯ