ತುಮಕೂರು: ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಏಳು ಅಡಿ ಉದ್ದದ ಕೆರೆ ಹಾವು ರಕ್ಷಣೆ
ಬಲೆಯನ್ನು ಕತ್ತರಿಸಿ, ಮೈದಾನದ ನೆಟ್ನಲ್ಲಿ ಸಿಲುಕಿ ಪರದಾಡುತ್ತಿದ್ದ ಹಾವನ್ನು ರಕ್ಷಿಸಿದ್ದಾರೆ. ಇನ್ನೂ ಹಾವು ಸರಿಸುಮಾರು ನಾಲ್ಕು ಗಂಟೆಗಳ ಕಾಲ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿತ್ತು. ಸದ್ಯ ವನ್ಯಜೀವಿ ಸಂಸ್ಥೆಯವರು ಅರ್ಧಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹಾವು ರಕ್ಷಿಸಿದ್ದಾರೆ.
ತುಮಕೂರು: ಆಟದ ಮೈದಾನದ ಬಲೆಗೆ ಸಿಲುಕಿ ಹಾವೊಂದು ಒದ್ದಾಡುತ್ತಿದ್ದ ಘಟನೆ ತುಮಕೂರು ನಗರದ ಬಟವಾಡಿ ಬಳಿಯಿರುವ ಖಾಸಗಿ ಶಾಲೆ ಬಳಿಯ ಮೈದಾನದಲ್ಲಿ ನಡೆದಿದೆ. ಮೈದಾನದಲ್ಲಿದ್ದ ಬಲೆಯಲ್ಲಿ ಏಳು ಅಡಿಯ ಕೆರೆ ಹಾವು (Snake) ಸಿಲುಕಿ ಒದ್ದಾಡುತ್ತಿತ್ತು. ಈ ವೇಳೆ ಗಮನಿಸಿದ ಯುವಕನೋರ್ವ ವಾರಂಗಲ್ ವನ್ಯಜೀವಿ ಸಂಸ್ಥೆಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವಾರಂಗಲ್ ವನ್ಯಜೀವಿ ಸಂಸ್ಥೆಯ ಉರಗತಜ್ಞ ದಿಲೀಪ್, ಗುರಕಿರಣ್, ಗಿರೀಶ್, ನೀತಿನ್ ರಾಜ್ ಹಾವನ್ನು ರಕ್ಷಣೆ (Rescue) ಮಾಡಿದ್ದಾರೆ.
ಬಲೆಯನ್ನು ಕತ್ತರಿಸಿ, ಮೈದಾನದ ನೆಟ್ನಲ್ಲಿ ಸಿಲುಕಿ ಪರದಾಡುತ್ತಿದ್ದ ಹಾವನ್ನು ರಕ್ಷಿಸಿದ್ದಾರೆ. ಇನ್ನೂ ಹಾವು ಸರಿಸುಮಾರು ನಾಲ್ಕು ಗಂಟೆಗಳ ಕಾಲ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿತ್ತು. ಸದ್ಯ ವನ್ಯಜೀವಿ ಸಂಸ್ಥೆಯವರು ಅರ್ಧಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹಾವು ರಕ್ಷಿಸಿದ್ದಾರೆ.
ಇತ್ತೀಚೆಗೆ ಸುರಿದ ನಿರಂತರ ಮಳೆಗೆ ಹಾವುಗಳು, ಇನ್ನಿತರ ವಿಷ ಜಂತುಗಳು, ಕೀಟಗಳು ಬಯಲಿಗೆ ಬರುತ್ತಿದ್ದು, ಮನೆಗಳಿಗೂ ನುಗ್ಗಿ ಆತಂಕ ಸೃಷ್ಟಿ ಮಾಡುತ್ತಿವೆ. ಸದ್ಯ ಏಳು ಅಡಿ ಹಾವು ರಕ್ಷಣೆ ಮಾಡಲಾಗಿದ್ದು, ನಂತರ ಹಾವನ್ನು ಕಾಡಿನತ್ತ ಬಿಟ್ಟಿದ್ದಾರೆ.
ಬೆಂಗಳೂರು: ವರುಣನ ಅವಾಂತರದ ಮಧ್ಯೆ ಮೀನನ್ನು ನುಂಗಿನೀರು ಕುಡಿದ ಹಾವು ಅಕಾಲಿಕ ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಮಂದಿ ಬೆಚ್ಚಿದ್ದಾರೆ. ಬೆಂಗಳೂರಲ್ಲಿ ಬಿಟ್ಟೂ ಬಿಡದೆ ಮಳೆಯಾಗುತ್ತಿದ್ದು, ಸಾಲು ಸಾಲು ಅವಾಂತರಗಳು ಸೃಷ್ಟಿಯಾಗುತ್ತಿವೆ. ಈ ನಡುವೆ ಇನ್ನೂ 2 ದಿನ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದು ಸಹಜವಾಗಿಯೇ ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಸದ್ಯ ಧಾರಾಕಾರ ಮಳೆಗೆ ರಸ್ತೆಗಳೇ ಕೆರೆಗಳಂತಾಗಿವೆ. ಹುಳ, ಹಪಟೆಗಳು ಮನೆ ಹೊಕ್ಕಿವೆ. ಅಂತೆಯೇ ಭಾರೀ ಮಳೆಗೆ ಸಿಂಗಾಪುರ ಕೆರೆ ಕೋಡಿ ಒಡೆದ ಪರಿಣಾಮ ಸಮೀಪದ ಲೇಔಟ್ಗೆ ನೀರು ಸತತವಾಗಿ ನುಗ್ಗುತ್ತಿದೆ. ಈ ಅವಾಂತರದ ಮಧ್ಯೆ ಮೀನನ್ನು ಹಾವೊಂದು ನುಂಗಿದೆ. ಸದ್ಯ ಮೀನು ನುಂಗುತ್ತಿರುವ ದೃಶ್ಯ ನೋಡಿ ಸ್ಥಳೀಯ ನಿವಾಸಿಗಳು ಹೌಹಾರಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಬೆಂಗಳೂರಿನ ಸಿಂಗಪೂರ್ ಕಾಲೊನಿಯಲ್ಲಿ ಮಳೆನೀರಿನ ಜೊತೆ ಹಾವುಗಳೂ ಹರಿದು ಬರುತ್ತಿವೆ!
ವರುಣನ ಅವಾಂತರದ ಮಧ್ಯೆ ಮೀನನ್ನು ನುಂಗಿನೀರು ಕುಡಿದ ಹಾವು
Published On - 10:53 am, Wed, 24 November 21