ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್; ಕೆಪಿಸಿಸಿ ನಡೆಯನ್ನು ಟೀಕಿಸಿದ ಎಂಪಿ ರೇಣುಕಾಚಾರ್ಯ
ಕೆಪಿಸಿಸಿ ಕಚೇರಿಯಲ್ಲಿ ಇಂದಿರಾಗಾಂಧಿ ಪುಣ್ಯಸ್ಮರಣೆ ಮಾತ್ರ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಿದ್ದರಾಮಯ್ಯ ವಲ್ಲಭಬಾಯ್ ಪಟೇಲ್ ಪೋಟೋ ಇಡಲು ಸೂಚನೆ ನೀಡಿದ್ದರು. ಈ ಬಗ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಗುಸುಗುಸು ಚರ್ಚೆ ಮಾಡಿಕೊಂಡಿದ್ದರು.
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಇಂದಿರಾಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮ ಆಗಸ್ಟ್ 31 ರಂದು ನಡೆಸಲಾಗಿತ್ತು. ಅದೇ ದಿನ ವಲ್ಲಭಬಾಯ್ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ನಡೆದ ಸಂಭಾಷಣೆ ಇದೀಗ ಸುದ್ದಿ ಆಗಿದೆ. ಆ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್! ಕರ್ಮಕಥೆ ಎಂದು ಸಿಎಂ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಇಂದಿರಾಗಾಂಧಿ ಪುಣ್ಯಸ್ಮರಣೆ ಮಾತ್ರ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಿದ್ದರಾಮಯ್ಯ ವಲ್ಲಭಬಾಯ್ ಪಟೇಲ್ ಪೋಟೋ ಇಡಲು ಸೂಚನೆ ನೀಡಿದ್ದರು. ಈ ಬಗ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಗುಸುಗುಸು ಚರ್ಚೆ ಮಾಡಿಕೊಂಡಿದ್ದರು.
ನಾವು ಪುಣ್ಯಸ್ಮರಣೆ ಮಾತ್ರ ಮಾಡುತ್ತೇವೆ ಆದ್ರ ಜನ್ಮಾಚರಣೆ ಮಾಡಲ್ಲ ಎಂದು ಶಿವಕುಮಾರ್ ಹೇಳಿದ್ದರು. ಇಲ್ಲ ಬಿಜೆಪಿಯರು ಅದನ್ನೇ ದೊಡ್ಡದಾಗಿ ಮಾಡ್ತಾರೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರು. ಈ ವೇಳೆ ಸಿಬ್ಬಂದಿ ವಲ್ಲಭಬಾಯ್ ಪಟೇಲ್ ಪೋಟೋ ಇಟ್ಟಿದ್ದಾರೆ. ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್! ನವರ ಕರ್ಮಕಥೆ ಎಂದು ಈ ವಿಚಾರವನ್ನು ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ.
ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್! ನವರ ಕರ್ಮಕಥೆ. pic.twitter.com/TgytqmplOy
— M P Renukacharya (@MPRBJP) November 23, 2021
ಬಿಜೆಪಿಯಿಂದ ನಾವು ರಾಷ್ಟ್ರಭಕ್ತಿಯನ್ನು ಕಲಿಯಬೇಕಾಗಿಲ್ಲ: ರಾಮಲಿಂಗಾರೆಡ್ಡಿ ತಿರುಗೇಟು ಅಕ್ಟೋಬರ್ 31ರಂದು ಪಟೇಲ್ ಅವರ ಜನ್ಮದಿನ ಹಿನ್ನೆಲೆ, ವಲ್ಲಭಭಾಯ್ ಪಟೇಲರ ಫೋಟೋ ತಡವಾಗಿಟ್ಟ ಪ್ರಕರಣದ ಬಗ್ಗೆ ಹಾಗೂ ರೇಣುಕಾಚಾರ್ಯ ಟ್ವೀಟ್‌ಗೆ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. ರೇಣುಕಾಚಾರ್ಯ ಮಾತಿಗೆಲ್ಲಾ ಉತ್ತರ ಕೊಡೋಕೆ ಆಗುತ್ತಾ? ಅವರ ಮಾತಿಗೆ ಅವರ ಪಕ್ಷದವರೇ ಬೆಲೆ ಕೊಡುವುದಿಲ್ಲ. ರೇಣುಕಾಚಾರ್ಯ, ಈಶ್ವರಪ್ಪ ಮಾತಿಗೆಲ್ಲ ಉತ್ತರಿಸಲಾಗಲ್ಲ. ಬಿಜೆಪಿಯಿಂದ ನಾವು ರಾಷ್ಟ್ರಭಕ್ತಿಯನ್ನು ಕಲಿಯಬೇಕಾಗಿಲ್ಲ. ಸ್ವಾತಂತ್ರ್ಯಕ್ಕಾಗಿ ಬಿಜೆಪಿಯವರು ಯಾರೂ ಹುತಾತ್ಮರಾಗಿಲ್ಲ. ಅವರಿಂದ ನಾವು ದೇಶ ಪ್ರೇಮದ ಪಾಠ ಕಲಿಯಬೇಕಾಗಿಲ್ಲ. ಪಟೇಲರ ಫೋಟೋ ತಡವಾಗಿ ಇಟ್ಟಿದ್ದು ಕೆಲಸದವರ ತಪ್ಪು. ಅದನ್ನು ನಮ್ಮ ಅಧ್ಯಕ್ಷರು ಸರಿ ಮಾಡಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನಮಗೆ 2 ಕಣ್ಣುಗಳಿದ್ದಂತೆ: ಜಿ ಪರಮೇಶ್ವರ್ ಹೇಳಿಕೆ
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ಹಕ್ಕು ವಿಪಕ್ಷಕ್ಕೆ ಇಲ್ಲ: ಎಂಪಿ ರೇಣುಕಾಚಾರ್ಯ
Published On - 4:44 pm, Tue, 23 November 21