ಕಳ್ಳತನ ಮಾಡೋಕೆ ಖದೀಮನಿಗೂ ತಿಂಗಳ ಸಂಬಳ; ಚೋರ ಗುರು ಸೇರಿ ಮೂವರು ಅರೆಸ್ಟ್

| Updated By: ಕಿರಣ್ ಹನುಮಂತ್​ ಮಾದಾರ್

Updated on: May 18, 2024 | 8:13 PM

ತುಮಕೂರು ಜಿಲ್ಲೆಯ ಕೊರಟಗೆರೆ(Koratagere) ತಾಲೂಕಿನಲ್ಲಿ ಬೋರ್ವೆಲ್ ಕೇಬಲ್​ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಖತರ್ನಾಕ್​ ಖದೀಮರನ್ನ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಂಧಿತರಿಂದ ಸತ್ಯಾಂಶ ಬೆಳಕಿಗೆ ಬಂದಿದ್ದು, ಚೋರ ಗುರು ತಿಂಗಳು ಸಂಬಳ ಕೊಟ್ಟು ಓರ್ವನನ್ನು ಕದಿಯಲು ಇಟ್ಟುಕೊಂಡಿದ್ದ.

ಕಳ್ಳತನ ಮಾಡೋಕೆ ಖದೀಮನಿಗೂ ತಿಂಗಳ ಸಂಬಳ; ಚೋರ ಗುರು ಸೇರಿ ಮೂವರು ಅರೆಸ್ಟ್
ಬಂಧಿತ ಆರೋಪಿಗಳು
Follow us on

ತುಮಕೂರು, ಮೇ.18: ಬೋರ್​ವೆಲ್​ ಕೇಬಲ್​ ಕಳ್ಳತನ ಮಾಡುತ್ತಿದ್ದ ಮೂವರನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳು ತಿಂಗಳಿಂದ ತುಮಕೂರು ಜಿಲ್ಲೆಯ ಕೊರಟಗೆರೆ(Koratagere) ತಾಲೂಕಿನಲ್ಲಿ ಬೋರ್ವೆಲ್ ಕೇಬಲ್​ಗಳನ್ನು ಕಳ್ಳತನ ಮಾಡುತ್ತಿದ್ದರು. ಇದರಿಂದ ಗ್ರಾಮಸ್ಥರು ಹೈರಾಣಾಗಿದ್ದು, ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ಹಿನ್ನಲೆ ಮೂವರು ಖದೀಮರನ್ನ ವಿಚಾರಣೆ ನಡೆಸಿದಾಗ, ‘ತಿಂಗಳಿಗೆ 20 ಸಾವಿರ ರೂ. ಸಂಬಳ ಪಡೆದು ಕದಿಯುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಖದೀಯಲು ಸಂಬಳ ಕೊಟ್ಟು ಇಟ್ಟುಕೊಂಡಿದ್ದ ಚೋರ ಗುರು

ಹೌದು, ಚೋರ ಗುರು ವೆಂಕಟೇಶ್ ಎಂಬಾತ ಬೆಂಗಳೂರಿನ ರಾಘವೇಂದ್ರನನ್ನ ತಿಂಗಳು ಸಂಬಳ ಕೊಟ್ಟು ಕದಿಯಲು ಇಟ್ಟುಕೊಂಡಿದ್ದ. ಕಳ್ಳ ವೆಂಕಟೇಶ್, ರಾಘವೇಂದ್ರ ಕದ್ದ ಮಾಲನ್ನು ವಿನೇಶ್ ಎಂಬುವವ ಖರೀದಿಸುತ್ತಿದ್ದ. ಹೀಗೆ ಕೊರಟಗೆರೆ ವ್ಯಾಪ್ತಿಯ ವಡ್ಡಗೆರೆ ಬಳಿ ಬೋರ್​ವೆಲ್​ ಕೇಬಲ್​ ಕಳ್ಳತನ ಮಾಡುವಾಗ ಕಳ್ಳರ ಕೈಚಳಕದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಬಳಿಕ ಕೃತ್ಯಕ್ಕೆ ಬಳಸಿದ್ದ ಕಾರಿನ ಚಲನವಲನ ಗಮನಿಸಿದ್ದ ಕೊರಟಗೆರೆ ಪೊಲೀಸರು, ಇದೀಗ ಮೂವರನ್ನ ಬಂಧಿಸಿದ ಇನ್ಸ್ಪೆಕ್ಟರ್ ಅನಿಲ್ ಹಾಗೂ ತಂಡ ಕೋರ್ಟ್​ಗೆ ಹಾಜರು ಪಡಿಸಿದೆ. ಕಳ್ಳರ ಬಂಧನದಿಂದ ಕೊರಟಗೆರೆ ವ್ಯಾಪ್ತಿಯ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ:ಕಳೆದೊಂದು ವಾರದಿಂದ ಹಳಿಯಾಳದಲ್ಲಿ ಸರಣಿ ಕಳ್ಳತನ, ಖದೀಮರನ್ನು ಹಿಡಿಲು ತಂಡ ರಚನೆ

ಶೌಚಾಲಯ ಕಟ್ಟಡ ಕುಸಿತ ಕೇಸ್​​; ಮತ್ತೋರ್ವ ಮಹಿಳೆ ಸಾವು

ತಾವರಗೇರಾದಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಡ ಕುಸಿತ ಕೇಸ್​​

ಕೊಪ್ಪಳ‌: ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ತಾರವರಗೇರಾದಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯಲ್ಲಿ ಗಾಯಗೊಂಡಿದ್ದ ಮತ್ತೋರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಉಮಾಬಾಯಿ ಬಪ್ಪರಗಿ(35) ಮೃತರು. ಈ ಮೂಲಕ ಮೃತರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿತ್ತು. ಈ ವೇಳೆ ಸ್ಥಳದಲ್ಲಿಯೇ ಬಾನು ಬೇಗಂ(40) ಮೃತಪಟ್ಟಿದ್ದರು. ಇನ್ನು ಗಾಯಗೊಂಡಿದ್ದ ಉಮಾಬಾಯಿಯನ್ನ ಕೂಡಲೇ ಗಂಗಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಇದೀಗ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

​ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:06 pm, Sat, 18 May 24