ದೇವರಾಜೇಗೌಡಗೆ ಡಿಸಿಎಂ 100 ಕೋಟಿ ರೂ. ಆಫರ್ ಆರೋಪ; ಡಾ.ಪರಮೇಶ್ವರ್ ಏನಂದ್ರು ಗೊತ್ತಾ?
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಮೇ.18) ಸಂಜೆ 5 ಗಂಟೆವರೆಗೆ ದೇವರಾಜೇಗೌಡ(Devarajegowda)ನನ್ನು ಎಸ್‌ಐಟಿ(SIT) ಕಸ್ಟಡಿಗೆ ನೀಡಿ ನಿನ್ನೆ(ಮೇ.17) ಹಾಸನದ 5ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆದೇಶಿಸಿತ್ತು. ಈ ವೇಳೆ ಪೆನ್‌ಡ್ರೈವ್ ಹಂಚಿಕೆ ಮಾಡಿದ್ದು ಕುಮಾರಸ್ವಾಮಿ ಎಂದು ಹೇಳಲು ‘ನನಗೆ ಡಿಕೆ ಶಿವಕುಮಾರ್ 100 ಕೋಟಿ ಆಫರ್ ನೀಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು. ಈ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ.
ತುಮಕೂರು, ಮೇ.18: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ(Devarajegowda) ಅವರು ನಿನ್ನೆ(ಮೇ.17) ಹೊಸ ಬಾಂಬ್ ಸಿಡಿಸಿದ್ದರು. ಪೆನ್‌ಡ್ರೈವ್ ಹಂಚಿಕೆ ಮಾಡಿದ್ದು ಕುಮಾರಸ್ವಾಮಿ ಎಂದು ಹೇಳಲು ನನಗೆ 100 ಕೋಟಿ ಆಫರ್ ನೀಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್ (G. Parameshwara), ‘ ಈ ಬಗ್ಗೆ ಎಸ್ಐಟಿಯವರು ನೋಡಿಕೊಳ್ಳುತ್ತಾರೆ ಎಂದರು.
ಇದೇ ವೇಳೆ ‘ನಾನು ಹೊರಗೆ ಬಂದ್ರೆ ಸರ್ಕಾರ ಪತನ ಆಗುತ್ತೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಹಾಗಾದರೆ ದೇವರಾಜೇಗೌಡ ಅವರು ಅಲ್ಲೆ ಇರಬೇಕಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ಪೆನ್‌ಡ್ರೈವ್ ಕೇಸ್: ಡಿಕೆ ಶಿವಕುಮಾರ್ ವಿರುದ್ಧ 100 ಕೋಟಿ ರೂ. ಆಫರ್ ಬಾಂಬ್ ಸಿಡಿಸಿದ ದೇವರಾಜೇಗೌಡ
ಅತ್ಯಾಚಾರ ಆರೋಪ ಕೇಸ್ನಲ್ಲಿ ವಕೀಲ ದೇವರಾಜೇಗೌಡರನ್ನ ಬಂಧಿಸಲಾಗಿತ್ತು. ನಿನ್ನೆ(ಮೇ.17) ಪೊಲೀಸ್ ಕಸ್ಟಡಿ ಮುಗಿಸಿ ಹಾಸನ ಜಿಲ್ಲಾ ಕಾರಾಗೃಹಕ್ಕೆ ಅವರನ್ನು ಹಸ್ತಾಂತರ ಮಾಡಲಾಯಿತು. ಮೇ.11 ರಂದು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಹಾಸನ ಜಿಲ್ಲೆಯ ಹೊಳೆನರಸೀಪುರ ಜೆಎಂಎಫ್ಸಿ ಕೋರ್ಟ್ ಆದೇಶಿಸಿತ್ತು. ಬಳಿಕ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ 4 ದಿನ ಕಸ್ಟಡಿಗೆ ಅನುಮತಿ ಪಡೆದಿದ್ದರು. ನಿನ್ನೆ ವಿಚಾರಣೆ ಮುಕ್ತಾಯ ಹಿನ್ನಲೆ ಕೋಟ್ಗೆ ಹಾಜರುಪಡಿಸಿ ಬಳಿಕ ಮೇ 24ರವರೆಗೂ JMFC ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಈ ಮಧ್ಯೆ ಒಂದು ದಿನ ಎಸ್‌ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Sat, 18 May 24