ಏಕಾಏಕಿ ಹಂಪ್ ಎಗರಿಸಿದ ಕೆಎಸ್​ಆರ್​ಟಿಸಿ ಬಸ್​ ಚಾಲಕ: ಕೆಳಗೆ ಬಿದ್ದು ಕಾಲು ಮುರಿದುಕೊಂಡ ಕಂಡಕ್ಟರ್

| Updated By: ಗಂಗಾಧರ​ ಬ. ಸಾಬೋಜಿ

Updated on: Jun 25, 2022 | 9:04 AM

ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜನ ಕಂಗಾಲಾಗಿದ್ದಾರೆ. ಪಾರ್ಕಿಂಗ್ ಮಾಡಿದ್ದ ಬೈಕ್‌ನ ಕ್ಷಣಾರ್ಧದಲ್ಲಿ ಕಳ್ಳತನ ಮಾಡಿರುವಂತಹ ಘಟನೆ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.

ಏಕಾಏಕಿ ಹಂಪ್ ಎಗರಿಸಿದ ಕೆಎಸ್​ಆರ್​ಟಿಸಿ ಬಸ್​ ಚಾಲಕ: ಕೆಳಗೆ ಬಿದ್ದು ಕಾಲು ಮುರಿದುಕೊಂಡ ಕಂಡಕ್ಟರ್
ಕೆಳಗೆ ಬಿದ್ದು ಕಾಲು ಮುರಿದುಕೊಂಡ ಕಂಡಕ್ಟರ್
Follow us on

ತುಮಕೂರು: ಕೆಎಸ್​ಆರ್​ಟಿಸಿ ಬಸ್​ ಚಾಲಕ ಏಕಾಏಕಿ ಹಂಪ್ (Hump) ಹಾರಿಸಿದ ಪರಿಣಾಮ ಬಸ್​ನಲ್ಲಿದ್ದ ಕಂಡಕ್ಟರ್ ಮೇಲಕ್ಕೆ ಹಾರಿ ಕೆಳಗೆ ಬಿದ್ದು ಕಾಲು ಮುರಿದಿರುವಂತಹ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಗೊಟ್ಟಿಕೆರೆ ಬಳಿ ನಡೆದಿದೆ. ಧರ್ಮಸ್ಥಳದಿಂದ ಕೋಲಾರಕ್ಕೆ ಕೆಎಸ್​ಆರ್​ಟಿಸಿ ಬಸ್ ಹೋಗುತ್ತಿದ್ದು, ಗೊಟ್ಟಿಕೆರೆ ಬಳಿ ಕಂಡಕ್ಟರ್ ಸಂಗಪ್ಪ ಅಕ್ಕಿ ಪ್ರಯಾಣಿಕರಿಗೆ ಟಿಕೆಟ್ ವಿತರಿಸುತ್ತಿದ್ದ. ಈ ವೇಳೆ ಚಾಲಕ ಮಹತೇಶ್ ಏಕಾಏಕಿ ಹಂಪ್ ಹಾರಿಸಿದಾಗ ಘಟನೆ ಸಂಭವಿಸಿದೆ. ಕುಣಿಗಲ್ ಸಾರ್ವಜನಿಕ ಆಸ್ಪತ್ರೆ ಯಲ್ಲಿ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆಂದು ಕಳಪೆ ರಸ್ತೆ ನಿರ್ಮಾಣ ಮಾಡಿದ್ದ ಗುತ್ತಿಗೆದಾರನಿಗೆ 3 ಲಕ್ಷ ರೂ. ದಂಡ!

6ಜನ ಗಾಂಜಾ ಆರೋಪಿಗಳ ಬಂಧನ

ನೆಲಮಂಗಲ: ಮಾದನಾಯಕನಹಳ್ಳಿ ಪೊಲೀಸರ ಕಾರ್ಯಚರಣೆ ನಡೆಸಿ 6ಜನ ಗಾಂಜಾ ಆರೋಪಿಗಳ ಬಂಧಿಸಿದ್ದು, 5ಕೆಜಿ ಗಾಂಜಾ, ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಜಪ್ತಿ ಮಾಡಲಾಗಿದೆ. ಸೈಯದ್ ಭಾಷಾ, ಶ್ರೀನಿವಾಸ್, ಚಂದ್ರಪ್ರಸಾದ್, ರಮೇಶ್ ಕರೋಲ್, ಮಹಮದ್ ಸುಹೇಲ್, ಸತ್ಪಾಲ್, ಬಂಧಿತ ಆರೋಪಿಗಳು. ಕಾಲೇಜು ಯುವಕರು ಹಾಗೂ ಚಾಲಕರನ್ನ ಟಾರ್ಗೆಟ್ ಮಾಡಿಕೊಂಡು ದಂಧೆ ಮಾಡುತ್ತಿದ್ದರು. ಮೋಜಿನ ಜೀವನಕ್ಕಾಗಿ ಕೃತ್ಯ ನಡೆಸುತ್ತಿದ್ದಾಗಿ ಪೊಲೀಸರ ಬಳಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ

ಮೈಸೂರು: ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ ಮಾಡಿ, ಲಕ್ಷಾಂತರ ರೂಪಾಯಿ ಒಡವೆ ದೋಚಿ ಕಳ್ಳರು ಪರಾರಿಯಾಗಿರುವಂತಹ ಘಟನೆ ನಂಜನಗೂಡು ಪಿ & ಟಿ ಬಡಾವಣೆಯಲ್ಲಿ ನಡೆದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಅಶೋಕ್ ಎನ್ನುವವರ ಮನೆಯಲ್ಲಿ 1.5 ಲಕ್ಷ ಮೌಲ್ಯದ 35 ಗ್ರಾಂ ಚಿನ್ನ 40 ಸಾವಿರ ಮೌಲ್ಯದ ಅರ್ಧ ಕೆಜಿ ಬೆಳ್ಳಿ, 10 ಸಾವಿರ ನಗದು ಕಳ್ಳತನ ಮಾಡಲಾಗಿದೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಾದ ಕಳ್ಳರ ಹಾವಳಿ, ಜನ ಕಂಗಾಲು

ಬೆಳಗಾವಿ: ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜನ ಕಂಗಾಲಾಗಿದ್ದಾರೆ. ಪಾರ್ಕಿಂಗ್ ಮಾಡಿದ್ದ ಬೈಕ್‌ನ ಕ್ಷಣಾರ್ಧದಲ್ಲಿ ಕಳ್ಳತನ ಮಾಡಿರುವಂತಹ ಘಟನೆ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಡೆದಿದೆ. ಬೈಕ್ ಕದಿಯುವ ದೃಶ್ಯ ಬಟ್ಟೆ ಅಂಗಡಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಗರದಲ್ಲೂ ಕಳ್ಳರ ಕೈಚಳಕ ಮುಂದುವರೆದಿದೆ. ಮನೆ ಮುಂದಿನ ನೀರಿನ ಟ್ಯಾಂಕ್ ಮೇಲಿನ ಮುಚ್ಚಳವನ್ನ ಖದೀಮರು ಕದಿದ್ದಾರೆ. ಸ್ಕೂಟಿ ಮೇಲೆ ಬಂದು ನೀರಿನ ಸಂಪ್ ಮೇಲೆ ಮುಚ್ಚಿದ ಕಬ್ಬಿಣದ ಮುಚ್ಚಳ ಎಗರಿಸಿ ಎಸ್ಕೇಪ್ ಆಗಿದ್ದು, ಕದಿಯುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಕ್ರಮವಾಗಿ ಹಸುಗಳನ್ನ ಕಟಾವಿಗೆ ತಂದಿದ್ದ ಇಬ್ಬರು ಆರೋಪಿಗಳ ಬಂಧನ

ನೆಲಮಂಗಲ: ಅಕ್ರಮವಾಗಿ ಹಸುಗಳನ್ನ ಕಟಾವಿಗೆ ತಂದಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿ, 4 ಹಸುಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. DYSP ಗೌತಮ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆ ನಡೆಸಿ, ಇಸ್ಲಾಂಪುರದ ಅಸ್ಗರ್, ಅಪ್ರೋಜ್​​ನನ್ನು ಬಂಧಿಸಲಾಗಿದೆ. ವಶಕ್ಕೆ ಪಡೆದ ಹಸುಗಳು ಗೋಶಾಲೆಗೆ ರವಾನೆ ಮಾಡಲಾಗಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: N Jagadeesan: ಮಧ್ಯಮ ಬೆರಳು ತೋರಿಸಿದ ಸಿಎಸ್​ಕೆ ಸ್ಟಾರ್ ಪ್ಲೇಯರ್ ಪಂದ್ಯದ ಬಳಿಕ ಹೇಳಿದ್ದೇನು ನೋಡಿ